by 20 on | 2025-10-29 11:09:40
Share: Facebook | Twitter | Whatsapp | Linkedin | Visits: 75
*ಬಿ.ಎಲ್.ಡಿ.ಎ. ಸಂಸ್ಥೆಯ ನರ್ಸಿಂಗ್ ಕಾಲೇಜಿನಲ್ಲಿ ದೀಪ ಪ್ರಜ್ವಲನೆ ಮತ್ತು ಪ್ರತಿಜ್ಞಾ ಸ್ವೀಕಾರ ಸಮಾರಂಭ*
ಜಮಖಂಡಿಯ ಬಿ.ಎಲ್.ಡೀ.ಎ.ಸ್ ನರ್ಸಿಂಗ್ ಕಾಲೇಜಿನಲ್ಲಿ ಅ. 25, 2025 ರಂದು 4ನೇ ಬ್ಯಾಚ್ ಬಿ.ಎಸ್‌ಸಿ ನರ್ಸಿಂಗ್ ವಿದ್ಯಾರ್ಥಿಗಳ *ದೀಪ ಪ್ರಜ್ವಲನೆ ಮತ್ತು ಪ್ರತಿಜ್ಞಾ ಸ್ವೀಕಾರ ಸಮಾರಂಭ ವಿಜೃಂಭಣೆಯಿಂದ ನೆರವೇರಿತು.*
ಕಾರ್ಯಕ್ರಮವು 4ನೇ ವರ್ಷದ ವಿದ್ಯಾರ್ಥಿನಿ *ಕುಮಾರಿ ದಾನ್ನಮ್ಮ ಪವಲೆ* ಅವರ ಪ್ರಾರ್ಥನಾ ನೃತ್ಯದಿಂದ ಆರಂಭವಾಯಿತು. ಸುಸ್ವಾಗತ ಮತ್ತು ಅತಿಥಿ ಪರಿಚಯವನ್ನು ಕಾಲೇಜಿನ ಸಹಾಯಕ ಪ್ರಾಧ್ಯಾಪಕರು *ಶಿವಲೀಲಾ ಸರವಾಡ ಹಾಗೂ ರಾಜೇಶ್ವರಿ ಕಂಬಿ* ನಿರ್ವಹಿಸಿದರು.
*ಕಾರ್ಯಕ್ರಮದ ಉದ್ಘಾಟನೆಯನ್ನು* ಯಶೋದಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ವಿಜಯಪುರದ ಅಧ್ಯಕ್ಷರು ಹಾಗೂ ಮುಖ್ಯ ನೇಫ್ರೋಲಜಿಸ್ಟ್ *ಡಾ. ರವೀಂದ್ರ ಮದ್ರಾಕಿ* ನೆರವೇರಿಸಿದರು. ಮುಖ್ಯ ಅತಿಥಿಯಾಗಿ *ಡಾ. ಸ್ಫೂರ್ತಿ ತುಂಗಲ್* (ಗೈನಕಾಲಜಿಸ್ಟ್, ತುಂಗಲ್ ನರ್ಸಿಂಗ್ ಹೋಮ್, ಜಾಮಖಂಡಿ) ಹಾಗೂ ಅಧ್ಯಕ್ಷತೆಯನ್ನು *ಪ್ರೊ. ಎಸ್. ಎಚ್. ಲಗಲಿ* (ಆಡಳಿತಾಧಿಕಾರಿ, ಬಿ.ಎಲ್.ಡೀ.ಅಸೋಸಿಯೇಶನ್) ವಹಿಸಿದ್ದರು.
*ಪ್ರತಿಜ್ಞಾ ಸ್ವೀಕಾರ ಸಮಾರಂಭದಲ್ಲಿ* , ಪ್ರಥಮ ವರ್ಷದ ವಿದ್ಯಾರ್ಥಿನಿಯರು ದೀಪ ಹಚ್ಚಿ *ಶಿವಲೀಲಾ ಸಾರವಾಡ* ಅವರಿಂದ ಪ್ರತಿಜ್ಞೆ ಸ್ವೀಕರಿಸಿದರು.
*ಪ್ರಾಂಶುಪಾಲ ಡಾ. ವೀರಭದ್ರಪ್ಪ ಜಿ .ಮೆಂಡೆಗುದ್ಲಿ* ಅವರು ಕಾಲೇಜಿನ 2023–24ನೇ ಸಾಲಿನ ವರದಿಯನ್ನು ಮಂಡಿಸಿದರು ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗಾಗಿ ಪ್ರಮಾಣಪತ್ರ ಮತ್ತು ಸ್ಮರಣಿಕೆಗಳನ್ನು ವಿತರಿಸಲಾಯಿತು.
*ಡಾ. ರವೀಂದ್ರ ಮದ್ರಕಿ* ಅವರು ನರ್ಸಿಂಗ್ ವೃತ್ತಿಯ ಪವಿತ್ರತೆ ಮತ್ತು ಸೇವಾ ಮನೋಭಾವದ ಮಹತ್ವವನ್ನು ಹೀಲಿದರು.
*ಡಾ. ಸ್ಫೂರ್ತಿ ತುಂಗಲ್* ಅವರು ಉತ್ತಮ ನರ್ಸ್ ಆಗಲು ಜ್ಞಾನ, ಕೌಶಲ್ಯ, ಸಹಾನುಭೂತಿ ಮತ್ತು ಕರುಣೆ ಅಗತ್ಯವೆಂದು ಹೇಳಿದರು.
ಕಾರ್ಯಕ್ರಮದಲ್ಲಿ *ವಾರ್ಷಿಕ ಕಾಲೇಜು ವಾರಪತ್ರಿಕೆ “ನೈಟಿಂಗೇಲ್ ಕ್ರೋನಿಕಲ್ಸ್ (Vol.3)”* ಬಿಡುಗಡೆ ಮಾಡಲಾಯಿತು. ವಿಶ್ವವಿದ್ಯಾಲಯ ಮಟ್ಟದ ಕ್ರೀಡಾ ಸಾಧಕರಾದ *ದರ್ಶನ್ ಚವಣ, ಪ್ರಕಾಶ ಹಿಪ್ಪಾರಗಿ, ರಕ್ಷಿತಾ ರಾಜಪುತ್,* ಮತ್ತು *ದೀಪಾ ವಿಭೂತಿ* ಅವರನ್ನು ಸನ್ಮಾನಿಸಲಾಯಿತು.
ಪ್ರಶಸ್ತಿ ವಿತರಣೆಯ ನಂತರ, *ಅಧ್ಯಕ್ಷ ಪ್ರೊ. ಎಸ್.ಎಚ್. ಲಗಲಿ* ಅವರು ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆ ಸಲ್ಲಿಸಿ, ಕಾಲೇಜಿನ ಪ್ರಗತಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
*ಮಿಸ್ ಶಶಿಕಲಾ ಮುಧೋಳ* ವಂದನಾರ್ಪಣೆ ಮಾಡಿದರು
ದೇಶದ ಇತಿಹಾಸ ವರ್ಣರಂಜಿತವಾಗಿದೆ : ಪ್ರೊ ಅನಿಲ್ ಚೌಹಾನ್
ಶಿಕ್ಷಣದ ಸವಿ ಸರ್ವಶ್ರೇಷ್ಠವಾದದ್ದು : ಡಾ ಅಶೋಕ ಲಿಮಕರ
ಶಬ್ದದ ಅಭಿವ್ಯಕ್ತಿ ಭಾಷೆಗೆ ಭೂಷಣ
ಎನ್ಸಿಸಿ ಕೆಡೆಟ್ ಗಳಿಂದ ವಂದೇ ಮಾತರಂ ಗೀತೆಯ ೧೫೦ ನೇ ವರ್ಷದ ಸಂಭ್ರಮಾಚರಣೆ
ದಾಸ ಶ್ರೇಷ್ಠ ಕನಕದಾಸ ಜಯಂತಿ ಆಚರಣೆ ಕಾರ್ಯಕ್ರಮ
‘ಮೀನುಗಾರಿಕೆ ಮತ್ತು ಜಲಚರ ಸಾಕಾಣಿಕೆ ಪದ್ಧತಿಗಳು’ ಒಂದು ದಿನದ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ