by 32 on | 2025-10-31 16:26:06 Last Updated by 32 on2025-11-14 13:29:47
Share: Facebook | Twitter | Whatsapp | Linkedin | Visits: 174
ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದ ಕಾನೂನು ಮಹಾವಿದ್ಯಾಲಯದಲ್ಲಿ ದಿನಾಂಕ ೩೧ ಅಕ್ಟೋಬರ್ ೨೦೨೫ ರಂದು ರಾಷ್ಟ್ರೀಯ ಏಕತಾ ದಿನಾಚರಣೆಯನ್ನು ಆಚರಿಸಲಾಯಿತು. ಈ ದಿನವನ್ನು “ಭಾರತದ ಉಕ್ಕಿನ ಮನುಷ್ಯ” ಎಂದು ಖ್ಯಾತರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಆಚರಿಸಲಾಯಿತು. ಅವರ ಅಖಂಡ ಭಾರತದ ಕನಸನ್ನು ಸ್ಮರಿಸಲಾಯಿತು ರಾಷ್ಟ್ರದ ಏಕತೆ ಮತ್ತು ಅಖಂಡತೆಯ ಮನೋಭಾವವನ್ನು ಉತ್ತೇಜಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಎಲ್ಲರೂ ಏಕತಾ ಪ್ರತಿಜ್ಞೆ ಸ್ವೀಕರಿಸಿ, ದೇಶದ ಏಕತೆ, ಅಖಂಡತೆ ಮತ್ತು ಭದ್ರತೆಯನ್ನು ಕಾಪಾಡುವ ಬದ್ಧತೆಯನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಪ್ರೊ. ಡಾ. ರಘುವೀರ ಜಿ. ಕುಲಕರ್ಣಿ, ಪ್ರಾಂಶುಪಾಲರು, ಕಾನೂನು ಮಹಾವಿದ್ಯಾಲಯ ಅವರು ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಕಾನೂನು ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಬಿ. ಎ. ಎಲ್.ಎಲ್.ಬಿ. ಮತ್ತು ಎಲ್.ಎಲ್.ಬಿ. ವಿದ್ಯಾರ್ಥಿಗಳು ಭಾಗವಹಿಸಿದ್ದರು.
ದೇಶದ ಇತಿಹಾಸ ವರ್ಣರಂಜಿತವಾಗಿದೆ : ಪ್ರೊ ಅನಿಲ್ ಚೌಹಾನ್
ಶಿಕ್ಷಣದ ಸವಿ ಸರ್ವಶ್ರೇಷ್ಠವಾದದ್ದು : ಡಾ ಅಶೋಕ ಲಿಮಕರ
ಶಬ್ದದ ಅಭಿವ್ಯಕ್ತಿ ಭಾಷೆಗೆ ಭೂಷಣ
ಎನ್ಸಿಸಿ ಕೆಡೆಟ್ ಗಳಿಂದ ವಂದೇ ಮಾತರಂ ಗೀತೆಯ ೧೫೦ ನೇ ವರ್ಷದ ಸಂಭ್ರಮಾಚರಣೆ
ದಾಸ ಶ್ರೇಷ್ಠ ಕನಕದಾಸ ಜಯಂತಿ ಆಚರಣೆ ಕಾರ್ಯಕ್ರಮ
‘ಮೀನುಗಾರಿಕೆ ಮತ್ತು ಜಲಚರ ಸಾಕಾಣಿಕೆ ಪದ್ಧತಿಗಳು’ ಒಂದು ದಿನದ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ