by 21 on | 2025-10-31 18:35:47
Share: Facebook | Twitter | Whatsapp | Linkedin | Visits: 61
ಬಿ ಎಲ್ ಡಿ ಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಬಸವನ ಬಾಗೇವಾಡಿ.
ಪುಸ್ತಕಗಳು ನಿತ್ಯ ಸತ್ಯವನ್ನು ಹೇಳುತ್ತವೆ ಆದ್ದರಿಂದ ನಾವು ಪುಸ್ತಕಗಳ ಸ್ನೇಹವನ್ನು ಮಾಡಬೇಕು ಪುಸ್ತಕಗಳು ನಶಿಸದ ಆಸ್ತಿಯಾಗಿದೆ ಈ ಅಮೂಲ್ಯವಾದ ಆಸ್ತಿಯನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕೆಂದು ಮಕ್ಕಳ ಸಾಹಿತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪ ಗು ಸಿದ್ದಾಪುರ ಅವರು ಹೇಳಿದರು.
ಪಟ್ಟಣದ ಬಿ ಎಲ್ ಡಿ ಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಐಕ್ಯೂ ಏ ಸಿ ಹಾಗೂ ಕನ್ನಡ ವಿಭಾಗದ ಸಹಯೋಗದಲ್ಲಿ ಇಂದು ನನ್ನ ಮೆಚ್ಚಿನ ಪುಸ್ತಕ ಓದು ಮತ್ತು ಅವಲೋಕನ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ತಂತ್ರಜ್ಞಾನ ಬೆಳದಂತೆ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದೆ ಓದು ಕಡಿಮೆಯಾದಂತೆ ಮಾನವ ಮಾನವೀಯತೆಯನ್ನು ಕಳೆದುಕೊಳ್ಳಬಹುದು ಪುಸ್ತಕಗಳು ಮಸ್ತಕದ ಹಸಿವನ್ನು ನೀಗಿಸುತ್ತವೆ ಮಾತನಾಡುವ ಗೊಂಬೆಗಳಾದ ಪುಸ್ತಕಗಳ ನ್ನಿಡಬೇಕೆಂದು ಅಭಿಪ್ರಾಯಪಟ್ಟರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಸಾಹಿತಿಗಳಾದ ಶಂಕರ್ ಬೈಚಬಾಳ್ ಅವರು ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಸಂಯೋಜಕರು ಹಾಗೂ ಸದಸ್ಯರಾದ ಡಾ. ಕುಶಾಲ್ ಬರಗೂರು ಅವರು ಮಾತನಾಡಿದರು. ನನ್ನ ಮೆಚ್ಚಿನ ಪುಸ್ತಕ ಓದು ಮತ್ತು ಅವಲೋಕನದಲ್ಲಿ ಪಾಲ್ಗೊಂಡ ವಿದ್ಯಾರ್ಥಿನಿಯ ಎಂದರೆ ಕಾವೇರಿ ಲಕ್ಷ್ಮೀ ಅಂಬಿಕಾ ಯಮುನಾ ಅಶ್ವಿನಿ ರೇಖಾ ರುತುಜ ಸುನಿತಾ ಹಾಗೂ ಪೂರ್ಣಿಮಾ ಪ್ರಾಚಾರ್ಯರಾದ ಡಾಕ್ಟರ್ಪ್ರಾಚಾರ್ಯರಾದ ಡಾ ಎ ವ್ಹಿ ಸೂರ್ಯವಂಶಿ ಅವರು ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು ಕಾರ್ಯಕ್ರಮದಲ್ಲಿ ಎಲ್ಲ ಭೋದಕ ಬೋಧ ಕೇತರ ಸಿಬ್ಬಂದಿಯವರು ಹಾಜರಿದ್ದರು. ಡಾ ಬಿ ಎಮ್ ಸಾಲವಾಡಗಿ ಅವರು ಸ್ವಾಗತ ಮತ್ತು ಪರಿಚಯ ಹಾಗೂ ಎಮ್ ಕೆ ಯಾದವ ನಿರೂಪಿಸಿದರು
ದೇಶದ ಇತಿಹಾಸ ವರ್ಣರಂಜಿತವಾಗಿದೆ : ಪ್ರೊ ಅನಿಲ್ ಚೌಹಾನ್
ಶಿಕ್ಷಣದ ಸವಿ ಸರ್ವಶ್ರೇಷ್ಠವಾದದ್ದು : ಡಾ ಅಶೋಕ ಲಿಮಕರ
ಶಬ್ದದ ಅಭಿವ್ಯಕ್ತಿ ಭಾಷೆಗೆ ಭೂಷಣ
ಎನ್ಸಿಸಿ ಕೆಡೆಟ್ ಗಳಿಂದ ವಂದೇ ಮಾತರಂ ಗೀತೆಯ ೧೫೦ ನೇ ವರ್ಷದ ಸಂಭ್ರಮಾಚರಣೆ
ದಾಸ ಶ್ರೇಷ್ಠ ಕನಕದಾಸ ಜಯಂತಿ ಆಚರಣೆ ಕಾರ್ಯಕ್ರಮ
‘ಮೀನುಗಾರಿಕೆ ಮತ್ತು ಜಲಚರ ಸಾಕಾಣಿಕೆ ಪದ್ಧತಿಗಳು’ ಒಂದು ದಿನದ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ