ಕೈಯೊಡ್ಡಿ ಪ್ರಸಾದವ ಕೊಂಡಡೆ ಕರ್ಮಧಾರಿ. ಶೇಷಪ್ರಸಾದವನಾಯ್ದು ಕೊಂಡಡೆ ವರ್ಮಹೀನ. ಉಕ್ಕುಳಪ್ರಸಾದವ ಕೊಂಡಡೆ ಸತ್ಕ್ರೀಗೆ ಸಲ್ಲ. ಇಂತಿವನರಿದು ಸಜ್ಜನಪ್ರಸಾದವ ನಿರ್ಧರದಿಂದ ಕೊಂಬ ಮಹಾಪ್ರಸಾದಿಯ ಕಾರುಣ್ಯವೆನಗೆಂದಿಗೆ ಸಾಧ್ಯವಪ್ಪುದು ? ಕುಂಭೇಶ್ವರಲಿಂಗದಲ್ಲಿ ಜಗನ್ನಾಥವವರಿದವಂಗಲ್ಲದೆ ಸಾಧ್ಯವಲ್ಲ
ಸುದ್ದಿ LOCAL NEWS

‘ಮೀನುಗಾರಿಕೆ ಮತ್ತು ಜಲಚರ ಸಾಕಾಣಿಕೆ ಪದ್ಧತಿಗಳು’ ಒಂದು ದಿನದ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ

by 24 on | 2025-11-06 23:37:10

Share: Facebook | Twitter | Whatsapp | Linkedin | Visits: 30


‘ಮೀನುಗಾರಿಕೆ ಮತ್ತು ಜಲಚರ ಸಾಕಾಣಿಕೆ ಪದ್ಧತಿಗಳು’ ಒಂದು ದಿನದ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ

ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ

ವಿಜಯಪುರ: ಜ್ಞಾನದ ಜೊತೆ ಕೌಶಲ್ಯವು ಮುಖ್ಯ,ಮೀನುಗಾರಿಕೆ ಮತ್ತು ಜಲಕೃಷಿಯ ಪದ್ಧತಿ ಬಗ್ಗೆ ತಿಳಿದುಕೊಳ್ಳಲು ಮೀನುಗಾರಿಕೆ ಮತ್ತು ಮೀನುಕೃಷಿ ಕ್ಷೇತ್ರಗಳು ಜೀವನೋಪಾಯವನ್ನು ವೃದ್ಧಿಸುವುದರಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದು ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರದ ಮುಖ್ಯಸ್ಥರು,ಸಹ ಪ್ರಾಧ್ಯಾಪಕರಾದ ಡಾ. ವಿಜಯಕುಮಾರ್ ಹೇಳಿದರು.

ನಗರದ ಬಿ ಎಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಜೀವಶಾಸ್ತ್ರ ವಿಭಾಗದ ಹಾಗೂ ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರ ಭೂತನಾಳ  ಇವರ ಸಹಯೋಗದಲ್ಲಿ  ದಿನಾಂಕ 05-12-2025 ಬುಧವಾರದಂದು ಮೀನುಗಾರಿಕೆ ಮತ್ತು ಜಲಚರ ಸಾಕಣೆ ಪದ್ಧತಿಗಳು (ಎಫ್ ಆರ್ ಐ ಸಿ) ವಿಷಯದ ಕುರಿತು ಒಂದು ದಿನದ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮೀನುಗಾರಿಕೆ ಮತ್ತು ಜಲಚರ ಸಾಕಾಣಿಕೆ ಇವೆರಡೂ ವಿಭಿನ್ನ ಪದ್ಧತಿಗಳು.ಭಾರತವು  ಜಾಗತಿಕ ಮೀನುಗಾರಿಕೆ ಉತ್ಪಾದನೆಯಲ್ಲಿ ಶೇ ೮ ರಷ್ಟು  ಮುಂದಿದ್ದು ವಿಶ್ವದ ಎರಡನೆ ಅತಿ ದೊಡ್ಡ ಮೀನು ಉತ್ಪಾದಕ ರಾಷ್ಟ್ರವಾಗಿದೆ. ಮೀನುಗಾರಿಕೆ ಮತ್ತು ಜಲಚರ ಸಾಕಾಣಿಕೆ ಗೆ ಹೆಚ್ಚು ಒತ್ತು ನೀಡುವುದು ಅಗತ್ಯವಾಗಿದೆ ಎಂದು ಹೇಳಿದರು.

 ಈ ವೇಳೆಯಲ್ಲಿ ಕಾಲೇಜಿನ ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ಧೆ ಮಾತನಾಡಿ ಪ್ರಾಣಿಶಾಸ್ತ್ರ ವಿಭಾಗವೂ ಈ ರೀತಿಯ ಪ್ರಾಯೋಗಿಕ ಕಾರ್ಯಾಗಾರ ಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಿಗೆ ಜ್ಞಾನದ ಜೊತೆಗೆ ಕೌಶಲ್ಯ ಕ್ಕೂ ಒತ್ತು ನೀಡುತ್ತಿರುವುದು ಗಮನಾರ್ಹ ಸಂಗತಿಯಾಗಿದೆ ಆದ್ದರಿಂದ ಇಂದಿನ ವಿದ್ಯಾರ್ಥಿಗಳು ಜ್ಞಾನದ ಜೊತೆ ಕೌಶಲ್ಯವು ತಮ್ಮಲ್ಲಿ  ಕರಗತ ಮಾಡಿಕೊಳ್ಳಬೇಕು ಎಂದು ಹೇಳಿದರು.

ಈ ವೇಳೆಯಲ್ಲಿ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಧರ್ಮ ಗುರು ಪ್ರಸಾದ್ ಎಂ. ಪಿ. ಅವರು ವಿದ್ಯಾರ್ಥಿಗಳಿಗಾಗಿ ಮೀನುಗಾರಿಕೆ ಶಿಕ್ಷಣ ಮತ್ತು ಕೌಶಲ್ಯಾಧಾರಿತ ತರಬೇತಿಯ ಅಗತ್ಯವನ್ನು ವಿವರಿಸಿದರು.

ಈ  ಸಂದರ್ಭದಲ್ಲಿ ಐಕ್ಯೂಎಸಿ ನಿರ್ದೇಶಕ ಡಾ. ಪಿ.ಎಸ್.ಪಾಟೀಲ, ಹರಿಶ್ಚಂದ್ರ ಜಾಧವ್  ಪ್ರೊ.ಮಿಲನ್ ಎಸ್. ರಾಥೋಡ್ ಕವಿತಾ.ಗೋರಗುಂಡಗಿ, ಪಲ್ಲವಿ, ಸಾನಿಯಾ ಮತ್ತು ಮಹಾವಿದ್ಯಾಲಯದ ಬೋಧಕ ಬೋಧಕೇತರ   ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕು.ಗೌರಿ ಪ್ರಾರ್ಥಿಸಿದರು, ಕು.ಸಾನಿಯಾ  ನಿರೂಪಿಸಿದರು.

Search
Popular News
Most Popular
ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಅಲೆನ್ ಕರಿಯರ್ ಅಕಾಡೆಮಿ ಮಧ್ಯೆ ಶೈಕ್ಷಣಿಕ ಓರಿಯಂಟೇಶನ್ ಕಾರ್ಯಕ್ರಮದ ಕ್ಷಣಗಳು.
Vachana Pitamaha P. G. Halakatti College of Engineering
Nursing College Jamkhandi
BLDEA Nursing College Vijayapura
Vachana Pitamaha P. G. Halakatti College of Engineering Vijayapura
ಡಾ ಫ ಗು ಹಳಕಟ್ಟಿ, ಬಂಥನಾಳ ಶಿವಯೋಗಿಗಳು, ಡಾ ಬಿ ಎಂ ಪಾಟೀಲ್ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆ ಕಾರ್ಯಕ್ರಮ

Leave a Comment