by 24 on | 2025-11-09 10:44:14
Share: Facebook | Twitter | Whatsapp | Linkedin | Visits: 25
ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ
ವಿಜಯಪುರ : ನಗರದ ಬಿಎಲ್‌ಡಿಇ ಸಂಸ್ಥೆಯ ಎಸ್‌ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ದಿನಾಂಕ;೦೮-೧೧-೨೦೨೫ ಶನಿವಾರದಂದು ದಾಸ ಶ್ರೇಷ್ಠ ಕನಕದಾಸ ಜಯಂತಿ ಆಚರಿಸಲಾಯಿತು.
ಈ ವೇಳೆಯಲ್ಲಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಉಷಾದೇವಿ ಹಿರೇಮಠ ಮಾತನಾಡಿ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿನ ಅಂಕುಡೊಂಕುಗಳು ಸಮಾಜದಲ್ಲಿನ ಮೇಲು ಕೀಳು ಎಂಬುದು ತಮ್ಮ ಕಾವ್ಯದ ಮೂಲಕ ಪ್ರತಿಬಿಂಬಿಸಿದ್ದಾರೆ. ಅವರ ಇಡೀ ಸಾಹಿತ್ಯ ಅರುಳುವುದೇ ಕೀರ್ತನೆಗಳಲ್ಲಿ. ಕೀರ್ತನೆ ಅಂದ್ರೆ ಪರಮಾತ್ಮನ ಕೀರ್ತಿಯನ್ನ ಆರಾಧಿಸುವಂತಹ ಭಜನೆಗಳು. ತಮ್ಮ ಭಜನೆಗಳ ಮೂಲಕ ಲೋಕುದ್ದಾರೆ ಮಾಡಿದ್ದಾರೆ. ಒಬ್ಬ ಸಾಮಾಜಿಕ ದಾರ್ಶನಿಕರಾಗಿ ಸಾಹಿತ್ಯದಲ್ಲಿ ಒಬ್ಬ ಶ್ರೇಷ್ಠವಾಗಿ ದಾಸ ಶ್ರೇಷ್ಟರಾಗಿ ಹೊರಹೊಮ್ಮಿದ್ದಾರೆ ಹಾಗಾಗಿ ಅವರು ಹಾಕಿ ಕೊಟ್ಟ ಸನ್ಮಾರ್ಗಗಳತ್ತ ಸಾಗಬೇಕಾಗಿದೆ ಎಂದರು.
ಕನಕದಾಸ ಜಯಂತಿ ಕೇವಲ ಜಯಂತಿಗೆ ಸೀಮಿತವಾಗದೆ ಅವರು ತಮ್ಮ ಕೀರ್ತನೆಗಳ ಮೂಲಕ ಕೊಟ್ಟ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅವರ ವಿಚಾರಧರೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಕೊಳ್ಳುವುದರೊಂದಿಗೆ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ಧೆ,ಉಪ ಪ್ರಾಚಾರ್ಯ ಡಾ.ಅನಿಲ ಭೀ.ನಾಯಕ, ಐಕ್ಯೂಎಸಿ ನಿರ್ದೇಶಕ ಡಾ.ಪಿ.ಎಸ್.ಪಾಟೀಲ,ಪ್ರೊ.ಪವನ್ ಮಹೇಂದ್ರಕರ್ ಸೇರಿದಂತೆ ಇನ್ನಿತರ ಪಿಯುಸಿ,ಪದವಿ ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ದೇಶದ ಇತಿಹಾಸ ವರ್ಣರಂಜಿತವಾಗಿದೆ : ಪ್ರೊ ಅನಿಲ್ ಚೌಹಾನ್
ಶಿಕ್ಷಣದ ಸವಿ ಸರ್ವಶ್ರೇಷ್ಠವಾದದ್ದು : ಡಾ ಅಶೋಕ ಲಿಮಕರ
ಶಬ್ದದ ಅಭಿವ್ಯಕ್ತಿ ಭಾಷೆಗೆ ಭೂಷಣ
ಎನ್ಸಿಸಿ ಕೆಡೆಟ್ ಗಳಿಂದ ವಂದೇ ಮಾತರಂ ಗೀತೆಯ ೧೫೦ ನೇ ವರ್ಷದ ಸಂಭ್ರಮಾಚರಣೆ
ದಾಸ ಶ್ರೇಷ್ಠ ಕನಕದಾಸ ಜಯಂತಿ ಆಚರಣೆ ಕಾರ್ಯಕ್ರಮ
‘ಮೀನುಗಾರಿಕೆ ಮತ್ತು ಜಲಚರ ಸಾಕಾಣಿಕೆ ಪದ್ಧತಿಗಳು’ ಒಂದು ದಿನದ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ