by 24 on | 2025-11-09 10:46:20
Share: Facebook | Twitter | Whatsapp | Linkedin | Visits: 34
ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ
ವಿಜಯಪುರ : ನಗರದ ಬಿಎಲ್‌ಡಿಇ ಸಂಸ್ಥೆಯ ಎಸ್‌ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ದಿನಾಂಕ: ೦೭-೧೧-೨೦೨೫ ಶುಕ್ರವಾರದಂದು ವಂದೇ ಮಾತರಂ ಗೀತೆಯ ೧೫೦ ನೇ ವರ್ಷದ ಸಂಭ್ರಮಾಚರಣೆ ಆಚರಿಸಲಾಯಿತು.
ಮಹಾವಿದ್ಯಾಲಯದ ಆವರಣದಲ್ಲಿ ಗಿಡ ನೆಡುವ ಸಂಕಲ್ಪದೊAದಿಗೆ ಹಾಗೂ ಒಗ್ಗಟ್ಟಿನಿಂದ ವಂದೇ ಮಾತರಂ ಗೀತೆಯನ್ನು ಹಾಡುವ ಮೂಲಕ ವಿಶೇಷವಾಗಿ ಆಚರಿಸಲಾಯಿತು.
ಈ ವೇಳೆಯಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಆರ್ ಎಂ.ಮಿರ್ಧೆ ಅವರು ಆವರಣದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಂದೇ ಮಾತರಂ ೧೫೦ ನೇ ವರ್ಷದ ಸಂಭ್ರಮಾಚರಣೆಯನ್ನು ಕಾಡೆಟ್ಗಳಿಂದ ಕಾಲೇಜಿನ ಆವರಣದಲ್ಲಿ ಗಿಡಗಳ್ಳನ್ನು ನೆಡುವ ಮೂಲಕ ಹಸಿರು ಸಿರಿಗೆ ಪ್ರಾಮುಖ್ಯತೆ ನೀಡಿಲಾಯಿತು. ನಮ್ಮಲ್ಲಿ ಪರಿಸರ ಒಂದಲ್ಲಾ ಪರಿಸರದಲ್ಲಿ ನಾವು ಎಂಬ ಘೋಷವಾಕ್ಯದ ಫಲಕ ಹಿಡಿದು ಪರಿಸರದ ಮಹತ್ವವನ್ನು ಕೆಡೆಟ್ಗಳಿಂದ ಸಾರಲಾಯಿತು. ಆವರಣದಲ್ಲಿ ವಾಲಿಬಾಲ್, ಪುಟಬಾಲ್ ಮತ್ತು ತ್ರೋಬಾಲ್ ಕ್ರೀಡಾ ಚಟುವಟಿಕೆ ಗಳನ್ನು ಹಮ್ಮಿಕೊಳ್ಳಲಾಯಿತು.
ಸೇವೆಗಳಲ್ಲಿ ದೇಶ ದೇಶ ಸೇವೆ ದೊಡ್ಡದು ಯುದ್ಧದಲ್ಲಿ ಅಮರರಾದ ಸೈನಿಕರ ಪರಿಶ್ರಮ ಧೈರ್ಯ,ಸಾಹಸ ವೀಕ್ಷಿಸಿ, ಭಾರತೀಯ ಸೈನ್ಯದ ಮೇಲಿರುವ ಗೌರವ ಕೆಡೆಟ್‌ಗಳಿಗೆ ಪ್ರೇರಣೆ ನೀಡಿತು. ಅಮರರಾದ ಭಾರತೀಯ ಸೈನಿಕರನ್ನು ನೆನೆದು ಅವರ ವೀರಮರಣವನ್ನು ನೆನೆದು ಕಂಬನಿ ಮಿಡಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಆರ್ ಎಮ್ ಮಿರ್ಧೆ , ಉಪಪ್ರಾಚಾರ್ಯ ಡಾ ಅನಿಲ್ ಭೀ. ನಾಯಕ್ , ಕ್ಯಾಪ್ಟನ್ ಎಸ್ ಎ ಪಾಟೀಲ್ ,ಲೆಫ್ಟಿನೆಂಟ್ ಡಾ.ರಾಮಚಂದ್ರ ನಾಯ್ಕ್, ಎಮ್ ಸುಬೇದಾರ ತಾನಾಜಿ, ಜೆ ಸಿ ಒ ಮಂಗಲಸಿಂಗ್ , ಪವನ್ ಕುಮಾರ್, ಡಾ.ಶ್ರೀಶೈಲ ಉಣಕಿ, ಡಾ.ಅನಿಲ್ ಪಾಟೀಲ ಮತ್ತು ಎನ್ ಸಿ ಸಿ ಕೆಡೆಟ್ಗಳು ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ದೇಶದ ಇತಿಹಾಸ ವರ್ಣರಂಜಿತವಾಗಿದೆ : ಪ್ರೊ ಅನಿಲ್ ಚೌಹಾನ್
ಶಿಕ್ಷಣದ ಸವಿ ಸರ್ವಶ್ರೇಷ್ಠವಾದದ್ದು : ಡಾ ಅಶೋಕ ಲಿಮಕರ
ಶಬ್ದದ ಅಭಿವ್ಯಕ್ತಿ ಭಾಷೆಗೆ ಭೂಷಣ
ಎನ್‌ಸಿಸಿ ಕೆಡೆಟ್ ಗಳಿಂದ ವಂದೇ ಮಾತರಂ ಗೀತೆಯ ೧೫೦ ನೇ ವರ್ಷದ ಸಂಭ್ರಮಾಚರಣೆ
ದಾಸ ಶ್ರೇಷ್ಠ ಕನಕದಾಸ ಜಯಂತಿ ಆಚರಣೆ ಕಾರ್ಯಕ್ರಮ
‘ಮೀನುಗಾರಿಕೆ ಮತ್ತು ಜಲಚರ ಸಾಕಾಣಿಕೆ ಪದ್ಧತಿಗಳು’ ಒಂದು ದಿನದ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ