ಕೈಯೊಡ್ಡಿ ಪ್ರಸಾದವ ಕೊಂಡಡೆ ಕರ್ಮಧಾರಿ. ಶೇಷಪ್ರಸಾದವನಾಯ್ದು ಕೊಂಡಡೆ ವರ್ಮಹೀನ. ಉಕ್ಕುಳಪ್ರಸಾದವ ಕೊಂಡಡೆ ಸತ್ಕ್ರೀಗೆ ಸಲ್ಲ. ಇಂತಿವನರಿದು ಸಜ್ಜನಪ್ರಸಾದವ ನಿರ್ಧರದಿಂದ ಕೊಂಬ ಮಹಾಪ್ರಸಾದಿಯ ಕಾರುಣ್ಯವೆನಗೆಂದಿಗೆ ಸಾಧ್ಯವಪ್ಪುದು ? ಕುಂಭೇಶ್ವರಲಿಂಗದಲ್ಲಿ ಜಗನ್ನಾಥವವರಿದವಂಗಲ್ಲದೆ ಸಾಧ್ಯವಲ್ಲ
ಕ್ರೀಡೆ Throw Ball

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕಲಬುರ್ಗಿ ವಲಯ ಮಹಿಳಾ ಥ್ರೋಬಾಲ್ ಟೂರ್ನಮೆಂಟ್ನಲ್ಲಿ ಬಿಎಲ್‌ಡಿಇ ಸಂಸ್ಥೆಯ ನರ್ಸಿಂಗ್ ಮಹಾವಿದ್ಯಾಲಯ, ತಿಕೋಟಾದ ತಂಡವು 4ನೇ ಸ್ಥಾನ ಪಡೆದು ಮಹತ್ವದ ಸಾಧನೆ

by 28 on | 2025-10-14 16:33:52 Last Updated by 28 on2026-10-29 06:57:12

Share: Facebook | Twitter | Whatsapp | Linkedin | Visits: 664


ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕಲಬುರ್ಗಿ ವಲಯ ಮಹಿಳಾ ಥ್ರೋಬಾಲ್ ಟೂರ್ನಮೆಂಟ್ನಲ್ಲಿ ಬಿಎಲ್‌ಡಿಇ ಸಂಸ್ಥೆಯ ನರ್ಸಿಂಗ್ ಮಹಾವಿದ್ಯಾಲಯ, ತಿಕೋಟಾದ ತಂಡವು 4ನೇ ಸ್ಥಾನ ಪಡೆದು ಮಹತ್ವದ ಸಾಧನೆ
ಪ್ರೊ. ಡಾ. ಪ್ರಕಾಶ ಸಿದ್ದಾಪುರ, ಪ್ರಾಂಶುಪಾಲರು, ದೈಹಿಕ ನಿರ್ದೇಶಕ ಶ್ರೀ ಬಿ. ಆರ್. ದೇಸಾಯಿ, ಬಿಎಲ್‌ಡಿಇ ಸಂಸ್ಥೆಯ ನರ್ಸಿಂಗ್ ಮಹಾವಿದ್ಯಾಲಯ, ತಿಕೋಟಾ ಮತ್ತು ಕಾಲೇಜಿನ ಬೋಧಕ ಮತ್ತು ಬೋಧಕತರ ಸಿಬ್ಬಂದಿ ಮಹಿಳಾ ಥ್ರೋಬಾಲ್ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿ ಮತ್ತು ವಿದ್ಯಾರ್ಥಿನಿಯರ ಶ್ರಮವನ್ನು ಶ್ಲಾಘಿಸಿದ್ದಾರೆ


ಕಲಬುರ್ಗಿ ಜಿಲ್ಲೆಯ ಆಳಂದದ ಸಮತಾ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕಲಬುರ್ಗಿ ವಲಯದ ಮಹಿಳಾ ಥ್ರೋಬಾಲ್ ಟೂರ್ನಮೆಂಟ್‌ ದಿನಾಂಕ 09.10.2025ರಿಂದ 10.10.2025ರವರೆಗೆ ನಡೆಯಿತು. ಈ ಪಂದ್ಯಾವಳಿಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಸೇರಿರುವ ವೈದ್ಯಕೀಯ, ದಂತ ವೈದ್ಯಕೀಯ, ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜುಗಳಿಂದ ಹಲವಾರು ತಂಡಗಳು ಸ್ಪರ್ಧಿಸಿದ್ದವು. ಬಿಎಲ್‌ಡಿಇ ಸಂಸ್ಥೆಯ ನರ್ಸಿಂಗ್ ಮಹಾವಿದ್ಯಾಲಯ, ತಿಕೋಟಾದ ಮಹಿಳಾ ಥ್ರೋಬಾಲ್ ತಂಡವು ಈ ಪಂದ್ಯಾವಳಿಯಲ್ಲಿ ಬಾಗ ವಹಿಸಿ ಆರಂಭದಿಂದಲೇ ಉತ್ತಮ ಪ್ರದರ್ಶನ ನೀಡಿ, ನಾಕೌಟ್ ಹಂತಕ್ಕೂ ತಲುಪಿತು  ಮತ್ತು ಈ ಮಹಿಳಾ ಥ್ರೋಬಾಲ್ ತಂಡವು ಪ್ರಭಾವಿ ಪ್ರದರ್ಶನ ನೀಡಿ 4ನೇ ಸ್ಥಾನವನ್ನು ಪಡೆದು ಮಹತ್ವದ ಸಾಧನೆ ಮಾಡಿದೆ. 

ತಂಡದ ಸದಸ್ಯರು:

IV ಸೆಮಿಸ್ಟರ್ ವಿದ್ಯಾರ್ಥಿನಿಯರಾದ ಸೀಮಾ ಜಾಧವ ಪಲ್ಲವಿ ವಠಾರ ಕಜಮ್ಮ ಶಾಬಧಿ ಮುರ್ತುಜಬೀ ಚೈತನ್ಯ ಪಾಟೀಲ ನಂದಿನಿ ಚವ್ಹಾಣ ಐಶ್ವರ್ಯ ಪಾರೆ.

IV ಸೆಮಿಸ್ಟರ್ ವಿದ್ಯಾರ್ಥಿನಿಯರಾದ ಮೇಘಾ ಹುಳ್ಳೂರ ಶಂಕ್ರೆಮ್ಮ ಮಡ್ಯಾನಿ ಸೌಮ್ಯಾ ಹಳ್ಳನ್ನವರ

II ಸೆಮಿಸ್ಟರ್ ವಿದ್ಯಾರ್ಥಿನಿಯರಾದ ಅಂಬಿಕಾ ತುಳಗೇರ ಶ್ವೇತಾ

 

ಈ ಯಶಸ್ಸು ಬಿಎಲ್‌ಡಿಇ ಸಂಸ್ಥೆಯ ನರ್ಸಿಂಗ್ ಮಹಾವಿದ್ಯಾಲಯ, ತಿಕೋಟಾದ ದೈಹಿಕ ನಿರ್ದೇಶಕರಾದ ಶ್ರೀ ಬಿ. ಆರ್. ದೇಸಾಯಿ ಹಾಗೂ ಸಹಾಯಕ ಮಾರ್ಗದರ್ಶಕರಾದ ಶ್ರೀ ರವಿ ಅವರ ನಿಯಮಿತ ತರಬೇತಿ ಮತ್ತು ತಂಡದ ಶ್ರಮದ ಫಲವಾಗಿದೆ ಎಂದು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

ಈ ಸಾಧನೆಯೊಂದಿಗೆ ಬಿಎಲ್‌ಡಿಇ ಸಂಸ್ಥೆಯ ನರ್ಸಿಂಗ್ ಮಹಾವಿದ್ಯಾಲಯ, ತಿಕೋಟಾ, ವಿಶ್ವವಿದ್ಯಾನಿಲಯ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ತನ್ನ ಹಾದಿಯನ್ನು ಬಲಪಡಿಸುತ್ತಾ, ವಿದ್ಯಾರ್ಥಿಗಳು ಅಕಾಡೆಮಿಕ್ಸ್ ಜೋತೆಗೆ ಕ್ರೀಡೆಗಳಲ್ಲಿಯೂ ಪ್ರವಿಣ್ಯತೆ ಸಾಧಿಸಿದ್ದಾರೆಂದು ಬಿಎಲ್‌ಡಿಇ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಂ. ಬಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಶ್ರೀ ಸುನೀಲಗೌಡ ಬಿ ಪಾಟೀಲ, ನಿರ್ದೇಶಕರು ಮತ್ತು ಕುಲಪತಿಗಳು ಶ್ರೀ ಬಸನಗೌಡ ಎಂ. ಪಾಟೀಲ,   ಡಾ. ಆರ್.ವಿ. ಕುಲಕರ್ಣಿ, ರಿಜಿಸ್ಟ್ರಾರ್, ಬಿಎಲ್‌ಡಿಇ  ಡೀಮ್ಡ್ ವಿಶ್ವವಿದ್ಯಾಲಯ, ವಿಜಯಪುರ,  ಶ್ರೀ ಕೈಲಾಶ್ ಹಿರೇಮಠ,  ದೈಹಿಕ ನಿರ್ದೇಶಕರು, ಬಿಎಲ್‌ಡಿಇ ಸಂಸ್ಥೆ,  ಪ್ರೊ. ಡಾ. ಪ್ರಕಾಶ ಸಿದ್ದಾಪುರ, ಪ್ರಾಂಶುಪಾಲರು, ಬಿಎಲ್‌ಡಿಇ ಸಂಸ್ಥೆಯ ನರ್ಸಿಂಗ್ ಮಹಾವಿದ್ಯಾಲಯ, ತಿಕೋಟಾ ಮತ್ತು ಕಾಲೇಜಿನ ಬೋಧಕ ಮತ್ತು ಬೋಧಕತರ ಸಿಬ್ಬಂದಿ ಮಹಿಳಾ ಥ್ರೋಬಾಲ್ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿ ಮತ್ತು ವಿದ್ಯಾರ್ಥಿನಿಯರ ಶ್ರಮವನ್ನು ಶ್ಲಾಘಿಸಿದ್ದಾರೆ.

Search
Recent News
Popular News
Most Popular
ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಅಲೆನ್ ಕರಿಯರ್ ಅಕಾಡೆಮಿ ಮಧ್ಯೆ ಶೈಕ್ಷಣಿಕ ಓರಿಯಂಟೇಶನ್ ಕಾರ್ಯಕ್ರಮದ ಕ್ಷಣಗಳು.
Vachana Pitamaha P. G. Halakatti College of Engineering
Nursing College Jamkhandi
BLDEA Nursing College Vijayapura
Vachana Pitamaha P. G. Halakatti College of Engineering Vijayapura
ಡಾ ಫ ಗು ಹಳಕಟ್ಟಿ, ಬಂಥನಾಳ ಶಿವಯೋಗಿಗಳು, ಡಾ ಬಿ ಎಂ ಪಾಟೀಲ್ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆ ಕಾರ್ಯಕ್ರಮ

Leave a Comment