by 1 on | 2025-03-15 16:25:05
Share: Facebook | Twitter | Whatsapp | Linkedin | Visits: 2137
ಶನಿವಾರ ಬಿ.ಎಲ್.ಡಿ.ಇ ಸಂಸ್ಥೆ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡು ಮಾತನಾಡಿದ ಅವರು, ನಾನು ಬಾಲ್ಯದಿಂದಲೇ ಸಂಸ್ಥೆಯ ಏಳಿಗೆಯನ್ನು ಗಮನಿಸುತ್ತ ಬಂದಿದ್ದೇನೆ. ವಚನಪಿತಾಮಹ ಡಾ.ಫ.ಗು.ಹಳಕಟ್ಟಿ ಅವರಿಂದ ಪ್ರಾರಂಭವಾದ ಸಂಸ್ಥೆಯನ್ನು ಬಂಥನಾಳ ಶ್ರೀಗಳು ಮತ್ತು ನಂತರ ದಿ. ಶ್ರೀ ಬಿ. ಎಂ. ಪಾಟೀಲರು, ಎಂ. ಬಿ. ಪಾಟೀಲ ಸಮರ್ಥವಾಗಿ ಮುನ್ನಡೆಸಿದ್ದಾರೆ. ಶಿಕ್ಷಣ ಸಂಸ್ಥೆ ನಡೆಸುವುದು ಕಷ್ಟಕರವಾಗಿದ್ದ ಅಂದಿನ ದಿನಗಳಲ್ಲಿ ಬಿ. ಎಂ. ಪಾಟೀಲರು ತಮ್ಮ ಆಸ್ತಿಯನ್ನು ಒತ್ತೆಯಿಟ್ಟು ಸಾಲ ಪಡೆದು ಸಂಸ್ಥೆ ಮತ್ತು ಸಿಬ್ಬಂದಿಯ ಅಭ್ಯುದಯಕ್ಕೆ ಶ್ರಮಿಸಿದ್ದಾರೆ. ಈ ಭಾಗದ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ಇಲ್ಲಿಯೇ ದೊರೆಯಲು ಎಂಜಿನಿಯರಿಂಗ್, ಮೆಡಿಕಲ್ ಸೇರಿದಂತೆ ವಿವಿಧ ಕಾಲೇಜುಗಳನ್ನು ಸ್ಥಾಪಿಸುವ ಮೂಲಕ ಅನುಕೂಲ ಕಲ್ಪಿಸಿದ್ದಾರೆ. ನಾನು ಕೂಡ ಸಂಸ್ಥೆಯ ಪ್ರಾತಃಸ್ಮರಣೀಯರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುತ್ತೇನೆ ಎಂದು ಹೇಳಿದರು.
ಸಂಸ್ಥೆಯ ವತಿಯಿಂದ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಿ.ಬಿ.ಎಸ್.ಇ ಮತ್ತು ಐ.ಸಿ.ಎಸ್.ಇ ಪ್ರಾರಂಭಿಸಲಾಗಿದ್ದು, ವೃತ್ತಿಶಿಕ್ಷಣ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಲೆನ್ ಕರಿಯರ್ ಅಕಾಡೆಮಿ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ನಷ್ಟದಲ್ಲಿದ್ದ ಎ.ವಿ.ಎಸ್ ಆಯುರ್ವೇದ ಕಾಲೇಜನ್ನು ಬಿ.ಎಲ್.ಡಿ.ಇ ಗೆ ಸೇರಿಸಿಕೊಳ್ಳಲಾಗಿದ್ದು, 60ಕ್ಕೆ ಸಿಮೀತವಾಗಿದ್ದ ಪ್ರವೇಶಾತಿಯನ್ನು 100ಕ್ಕೆ ಹೆಚ್ಚಿಸಿ, ಸ್ನಾತಕೋತ್ತರ ಮತ್ತು ಪಿ.ಎಚ್.ಡಿ ಮಾಡಲು ಅನುಮತಿ ಪಡೆಯಲಾಗಿದೆ. ಇದರಿಂದಾಗಿ ನಮ್ಮ ಕಾಲೇಜು ರಾಜ್ಯದ ಟಾಪ್- 10 ಕಾಲೇಜುಗಳಲ್ಲಿ ಒಂದು ಎಂದು ಹೆಸರು ಮಾಡಿ ಪುನಶ್ಚೇತನಗೊಳಿಸಲಾಗಿದೆ. ಆಯುರ್ವೇದ ಕಾಲೇಜಿನ ಆವರಣದಲ್ಲಿ ನವ್ಯೋದ್ಯಮಗಳಿಗಾಗಿ ಸ್ಟಾರ್ಟಪ್ ಕೇಂದ್ರ ಪ್ರಾರಂಭಿಸಲಾಗುವುದು. ಇದರಿಂದ ಉತ್ತರ ಕರ್ನಾಟಕದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೊಸ ಉದ್ಯಮ ಪ್ರಾರಂಭಿಸಲು ಅನುಕೂಲ ಮಾಡುವ ಮೂಲಕ ವೇದಿಕೆ ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು.
ಸಂಸ್ಥೆಯ ಉಪಾಧ್ಯಕ್ಷ ಜಿ. ಕೆ. ಪಾಟೀಲ ಮಾತನಾಡಿ, ಸುನೀಲಗೌಡರು ಸಂಸ್ಥೆಯ ಘನತೆ ಮತ್ತು ಕೀರ್ತಿಯನ್ನು ಹೆಚ್ಚಿಸಿ ಎತ್ತರಕ್ಕೆ ಬೆಳಸುವ ವಿಶ್ವಾಸವಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಮಹಾಂತೇಶ ಬಿರಾದಾರ, ಸುನೀಲಗೌಡ ಪಾಟೀಲರು ಎಲ್ಲರೊದಿಗೆ ಬೆರತು ಯಶಸ್ವಿ ಉದ್ಯಮೆದಾರರು ಮಾತ್ರವಲ್ಲ ಎರಡನೇ ಬಾರಿಗೆ ವಿಧಾನಪರಿಷತ ಶಾಸಕರಾಗಿ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಸವಾಲುಗಳನ್ನು ಸಮರ್ಥವಾಗಿ ಮುನ್ನಡೆಸುವ ವ್ಯಕ್ತಿತ್ವ ಹೊಂದಿದ್ದಾರೆ. ಸಂಸ್ಥೆಯ ಪ್ರತಿಯೊಬ್ಬರು ಅವರ ಜೊತೆಗೆ ನಿಂತು ಶಕ್ತಿ ತುಂಬುವ ಕೆಲಸ ಮಾಡೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಅಶೋಕ ಜಿ. ವಾರದ, ಕುಮಾರ ಚಂದ್ರಕಾಂತ ದೇಸಾಯಿ. ಅಮಗೊಂಡ ಮದುಗೌಡ ಪಾಟೀಲ, ಕಲ್ಲನಗೌಡ ಕಾಶಿರಾಯಗೌಡ ಪಾಟೀಲ, ಸಂಗನಬಸಪ್ಪ ಗುರಪ್ಪ ಸಜ್ಜನ, ಡಾ. ಅನಿಲಕುಮಾರ ಬಾಪುಗೌಡ ಪಾಟೀಲ (ಲಿಂಗದಳ್ಳಿ), ಬಾಪುಗೌಡ ಬೀಮನಗೌಡ ಪಾಟೀಲ (ಶೇಗುಣಸಿ), ಸಿದ್ದರಾಮಯ್ಯ ನಿಜಗುಣಯ್ಯ ಮಠ, ಮಹೇಶ ಬಾಪುಗೌಡ ಪಾಟೀಲ, ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾದಿಪತಿ ವೈ. ಎಂ. ಜಯರಾಜ, ಕುಲಪತಿ ಡಾ. ಆರ್. ಎಸ್. ಮುಧೋಳ, ಸಮಕುಲಪತಿ ಡಾ. ಅರುಣ ಚಂ. ಇನಾಮದಾರ, ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಆಸ್ಪತ್ರೆಯ ವ್ಯದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನೂಟಗಿ, ಸಂಸ್ಥೆಯ ಆಡಳಿತಾಧಿಕಾರಿಗಳಾದ ಪ್ರೊ. ಬಿ. ಆರ್. ಪಾಟೀಲ, ಐ ಎಸ್. ಕಾಳಪ್ಪನವರ, ಅರುಣಕುಮಾರ ಶಹಾ, ದೈಹಿಕ ನಿರ್ದೇಶಕ ಎಸ್. ಎಸ್. ಕೋರಿ, ಸಂಸ್ಥೆಯ ಕಾನೂನು ಸಲಹೆಗಾರ ಸುರೇಶ ಹಕ್ಕಿ, ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ನಿರ್ದೇಶಕ ಕೃಷ್ಣ ಕೋಲ್ಹಾರಕುಲಕರ್ಣಿ, ನಿರ್ದೇಶಕ ಎಂ. ಎಸ್. ಮದಭಾವಿ ಆಡಳಿತ ಮಂಡಳಿ ಮಾಜಿ ಸದಸ್ಯ ಬಿ. ಬಿ. ಪಾಟೀಲ ಉಪಸ್ಥಿತರಿದ್ದರು.
ಡೀಮ್ಡ್ ವಿವಿ ರಜಿಸ್ಟ್ರಾರ್ ಡಾ. ಆರ್. ವಿ. ಕುಲಕರ್ಣಿ ನಿರೂಪಿಸಿದರು. ಆಡಳಿತಾಧಿಕಾರಿ ವಿಲಾಸ ಬಗಲಿಪಾಟೀಲ ವಂದಿಸಿದರು.
ದೇಶದ ಇತಿಹಾಸ ವರ್ಣರಂಜಿತವಾಗಿದೆ : ಪ್ರೊ ಅನಿಲ್ ಚೌಹಾನ್
ಶಿಕ್ಷಣದ ಸವಿ ಸರ್ವಶ್ರೇಷ್ಠವಾದದ್ದು : ಡಾ ಅಶೋಕ ಲಿಮಕರ
ಶಬ್ದದ ಅಭಿವ್ಯಕ್ತಿ ಭಾಷೆಗೆ ಭೂಷಣ
ಎನ್ಸಿಸಿ ಕೆಡೆಟ್ ಗಳಿಂದ ವಂದೇ ಮಾತರಂ ಗೀತೆಯ ೧೫೦ ನೇ ವರ್ಷದ ಸಂಭ್ರಮಾಚರಣೆ
ದಾಸ ಶ್ರೇಷ್ಠ ಕನಕದಾಸ ಜಯಂತಿ ಆಚರಣೆ ಕಾರ್ಯಕ್ರಮ
‘ಮೀನುಗಾರಿಕೆ ಮತ್ತು ಜಲಚರ ಸಾಕಾಣಿಕೆ ಪದ್ಧತಿಗಳು’ ಒಂದು ದಿನದ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ