by 1 on | 2023-12-23 12:20:38
Share: Facebook | Twitter | Whatsapp | Linkedin | Visits: 3339
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಮೀರ್ ಅಹ್ಮದರ ಮಾತು ಕೇಳಿಕೊಂಡು ತಮ್ಮ ಜವಾಬ್ದಾರಿಯನ್ನೇ ಮರೆತಿದ್ದಾರೆ ಎಂದು ವಿಜಯಪುರ ಶಾಸಕ ಯತ್ನಾಳ ಕಿಡಿ ಕಾರಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಜಮೀರ್ ಅಹ್ಮದ್ ಅವರು ಸಿದ್ದರಾಮಯ್ಯನವರನ್ನು ಮುಗಿಸುತ್ತಾರೆ. ಇವರೊಂದಿಗೆ ಸೇರಿದವರೂ ಹಾದಿ ಬಿಟ್ಟಿದ್ದಾರೆ. ಈ ಮೊದಲು ಕುಮಾರಸ್ವಾಮಿಯವರು ಹಾದಿ ಬಿಟ್ಟಿದ್ದರು. ಹಾಗೇಯೆ ಇಂದು ಸಿದ್ದರಾಮಯ್ಯನವರ ಹಾದಿ ಬಿಟ್ಟು ಮಕ್ಕಾ ಮದೀನಾ ಅಂತಾ ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಹಿಂದುಗಳ ಬಗ್ಗೆ ಕಳಕಳಿ ಇದ್ರೆ ಸೋನಿಯಾ ಗಾಂಧಿ ರಾಮಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿ. ಬಂದ್ರೂ ಕೇವಲ ಓಟಿಗಾಗಿ ಎಂದು ಲೇವಡಿ ಮಾಡಿದರು. ಅಲ್ಪಸಂಖ್ಯಾತರ ಓಟು ಬೇಕಿದ್ದರೆ, ಮಕ್ಕಾ ಮದಿನಾಕ್ಕೆ ಹೋಗಲಿ ಎಂದರು.
25 ಜನ ವಕೀಲರನ್ನು ರಾಮಮಂದಿರ ವಿರುದ್ಧ ಕಾಂಗ್ರೆಸ್ ಸುಪ್ರಿಂ ಕೋರ್ಟ್‍ನಲ್ಲಿ ನಿಲ್ಲಿಸಿತ್ತು. ಕಾಂಗ್ರೆಸ್ ಸದಸ್ಯರು ರಾಮ ಮಂದಿರ ವಿರುದ್ಧ ನ್ಯಾಯ ಮಾಡಿದ್ದಾರೆ. ರಾಮ ಕಲ್ಪನೆ ಎಂದು ಕಾಂಗ್ರೆಸ್ ವಾದ ಮಾಡಿತ್ತು. ರಾಮ ಇದ್ದ ಎನ್ನುಲು ದಾಖಲೆ ಇಲ್ಲ ಎಂದು ವಾದ ಮಾಡಿದ್ದರು.
ದೇಶದ ಇತಿಹಾಸ ವರ್ಣರಂಜಿತವಾಗಿದೆ : ಪ್ರೊ ಅನಿಲ್ ಚೌಹಾನ್
ಶಿಕ್ಷಣದ ಸವಿ ಸರ್ವಶ್ರೇಷ್ಠವಾದದ್ದು : ಡಾ ಅಶೋಕ ಲಿಮಕರ
ಶಬ್ದದ ಅಭಿವ್ಯಕ್ತಿ ಭಾಷೆಗೆ ಭೂಷಣ
ಎನ್ಸಿಸಿ ಕೆಡೆಟ್ ಗಳಿಂದ ವಂದೇ ಮಾತರಂ ಗೀತೆಯ ೧೫೦ ನೇ ವರ್ಷದ ಸಂಭ್ರಮಾಚರಣೆ
ದಾಸ ಶ್ರೇಷ್ಠ ಕನಕದಾಸ ಜಯಂತಿ ಆಚರಣೆ ಕಾರ್ಯಕ್ರಮ
‘ಮೀನುಗಾರಿಕೆ ಮತ್ತು ಜಲಚರ ಸಾಕಾಣಿಕೆ ಪದ್ಧತಿಗಳು’ ಒಂದು ದಿನದ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ