by 1 on | 2026-08-14 16:31:29
Share: Facebook | Twitter | Whatsapp | Linkedin | Visits: 188
ವ್ಯಕ್ತಿಯ ಸಾಮರ್ಥ್ಯ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಎಐ ಪಾತ್ರ ಪ್ರಮುಖವಾಗಿದೆ"
ವಿಜಯಪುರ ೧೩:"ಎ ಐ ಎಂಬುದು ಒಂದು ಪರಿಣಾಮಕಾರಿ ತಂತ್ರವಾಗಿದೆ. ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಎಐ ಆವರಿಸಿಕೊಂಡಿದೆ. ಮಾನವನ ಬುದ್ಧಿವಂತಿಕೆಯನ್ನು ಯಂತ್ರಗಳಲ್ಲಿ ಅನುಕರಿಸುವ ತಂತ್ರಜ್ಞಾನವೇ ಕೃತಕ ಬುದ್ಧಿಮತ್ತೆ (ಎ. ಐ)" ಎಂದು ಜಮಖಂಡಿಯ ಸರಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪ್ರೊ. ಶರಣಬಸಪ್ಪ ಸಜ್ಜನ ಹೇಳಿದರು.
ನಗರದ ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ಬಿಸಿಎ ವಿಭಾಗವು ಹಮ್ಮಿಕೊಂಡ " ಶಿಕ್ಷಕರಿಗಾಗಿ ಎಐ ಸಾಮಗ್ರಿ" ಎಂಬ ಕಾರ್ಯಗಾರದಲ್ಲಿ ಕಲಿಕೆ ಮತ್ತು ಕಲಿಸುವಲ್ಲಿ ಎಐನ ಪರಿಣಾಮದ ಕುರಿತು ಉಪನ್ಯಾಸ ನೀಡಿದ ಅವರು "ಎಐ ಒಂದು ಸಹಾಯಕ ಸಾಧನವಾಗಿದೆ. ಮನುಷ್ಯನಿಗೆ ಪರ್ಯಾಯವಲ್ಲ ಎಐನಿಂದ ವ್ಯಕ್ತಿಯ ಸಾಮರ್ಥ್ಯ ಮತ್ತು ಉತ್ಸಾದಕತೆಯನ್ನು ಮತ್ತಷ್ಟು ಹೆಚ್ಚಿಸಬಹುದು. ಎ ಐ ತಂತ್ರಜ್ಞಾನವು ಶಿಕ್ಷಕರನ್ನು ಬದಲಿಸುತ್ತದೆ ಎಂಬ ತಪ್ಪು ಕಲ್ಪನೆ ಬೇಡ. ಅದು ಶಿಕ್ಷಕರಿಗೆ ಬೋಧನೆಯಲ್ಲಿ ಸಹಾಯವಾಗಿ ಕಾರ್ಯನಿರ್ವಹಿಸುವ ಸಾಧನ. ಕಲಿಕೆ, ಅಧ್ಯಯನ, ಸಂಶೋಧನೆ ಮತ್ತು ಕೌಶಲ್ಯ ಅಭಿವೃದ್ಧಿಗೆ ಉಪಯುಕ್ತವಾಗಿದೆ "ಎಂದರು .
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎಸ್. ಬಿ . ಕಮತಿ ಮಾತನಾಡಿ " ಚಾಟ್ ಜಿಪಿಟಿ. ಗೂಗಲ್ ಜಮಿನಿ. ಕ್ಲೌಡ್ ಎಐ, ಗೂಗಲ್ ನೋಟ್ ಬುಕ್ ಎ ಐ ಮುಂತಾದವುಗಳು ಎ ಐ ಆಧಾರಿತ ಸಾಮಗ್ರಿಗಳಾಗಿವೆ. ಸಮಯ ಉಳಿಸಲು, ವೇಗವಾಗಿ ಕಲಿಯಲು, ಉತ್ತಮವಾಗಿ ಸಂವಹನ ಮಾಡಲು, ಹೊಸ ಆಲೋಚನೆಗಳನ್ನು ಸೃಷ್ಟಿಸಲು, ಸಮಸ್ಯೆಗಳನ್ನು ಪರಿಹರಿಸಲು ಮತ್ತು ಕೆಲಸದ ಉತ್ಪಾದಕತೆಯನ್ನು ಹೆಚ್ಚಿಸಲು ಸಹಾಯಮಾಡುವ ಸಾಧನವೇ ಎ ಐ. ಎ ಐ ಸಂಪೂರ್ಣ ಸರಿಯಾಗಿರುತ್ತದೆ ಎಂದು ನಂಬಬಾರದು. ನಮ್ಮ ಪರಿಶೀಲನೆ ಅಗತ್ಯ" ಎಂದರು.
ಕುಮಾರಿ ಸುಷ್ಮಾ ಅರವತ್ತು ಪ್ರಾರ್ಥಿಸಿದರು. ಪ್ರೊ. ಶ್ರೀದೇವಿ ಭೈರೊಡಗಿ ಸ್ವಾಗತಿಸಿದರು. ಬಿ ಸಿ ಎ ಮುಖ್ಯಸ್ಥೆ ವೀಣಾ ಮೋರೆ ಪರಿಚಯಿಸಿದರು. ಪ್ರೊ. ಚಿದಾನಂದ ನಾವಿ ನಿರೂಪಿಸಿದರು. ಪ್ರೊ. ಭಾರತಿ ನಾಯಕವಾಡಿ ವಂದಿಸಿದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕರಾದ ಪ್ರೊ . ವಿನಯ ದರ್ಬಿ, ಪ್ರೊ. ಪ್ರಫುಲ್ ಹಕ್ಕಾಪಕ್ಕಿ, ರಾಘವೇಂದ್ರ ಕುಲಕರ್ಣಿ, ವಿನಯ ಚಿಕ್ಕರೆಡ್ಡಿ,, ಬಿ ಸಿ ಪಾಟೀಲ, ಕೃತಿಕಾ ಸಿರ್ಕೆ, ಡಾ. ಭಾರತಿ ಮಠ ಹಾಗೂ ವಿವಿಧ ವಿಭಾಗಗಳ ಪ್ರಾಧ್ಯಾಪಕರು ಉಪಸ್ಥಿತರಿದ್ದರು.
ಬಿ.ಎಲ್.ಡಿ.ಇ (ಡೀಮ್ಡ್ ವಿಶ್ವವಿದ್ಯಾಲಯ)ದಲ್ಲಿ ಶ್ರೀ ಬಿ. ಎಂ. ಪಾಟೀಲರ ಪುಣ್ಯಸ್ಮರಣೆ ಹಾಗೂ ಬಂಥನಾಳ ಪೂಜ್ಯ ಶ್ರೀ ಸಂಗನಬಸವ ಶಿವಯೋಗಿಗಳ ಜನ್ಮದಿನ ಆಚರಣೆ
ಬಿ.ಎಲ್.ಡಿ.ಇ. (ಡೀಮ್ಡ್ ವಿಶ್ವವಿದ್ಯಾಲಯ) ಮಕ್ಕಳ ಶಾಸ್ತ್ರ ವಿಭಾಗ ಹಾಗೂ ಭಾರತೀಯ ಮಕ್ಕಳ ವೈದ್ಯರ ಅಕಾಡೆಮಿಯ ವಿಜಯಪುರ ಘಟಕದ ಸಹಯೋಗದಲ್ಲಿ ಹೃದಯ–ಶ್ವಾಸಕೋಶ ಪುನರುಜ್ಜೀವನ (ಸಿಪಿಆರ್) ಜಾಗೃತಿ ಕಾರ್ಯಕ್ರಮ ಯಶಸ್ವಿ
ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಗುರುಪೂರ್ಣಿಮೆ
ಉಕ್ಕಲಿ ಆರೋಗ್ಯ ಕೇಂದ್ರದಲ್ಲಿ ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯದಿಂದ ಮಹತ್ವದ ಟೆಲಿಮೆಡಿಸಿನ್ ಯೋಜನೆಗೆ ಚಾಲನೆ
ವ್ಯಕ್ತಿಯ ಸಾಮರ್ಥ್ಯ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಎಐ ಪಾತ್ರ ಪ್ರಮುಖವಾಗಿದೆ"
ಕ್ರೈಂ ಥ್ರಿಲ್ಲರ್ “ಕಲುಷ” ಟೀಸರ್ ಬಿಡುಗಡೆ ಇದೇ ಮಾರ್ಚ್ 23
ಕಲುಷ ಕನ್ನಡ ಚಲನಚಿತ್ರ
? 12/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 11/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 10/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 09/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 08/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 07/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 07/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 06/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?