by 1 on | 2026-03-21 16:57:29
Share: Facebook | Twitter | Whatsapp | Linkedin | Visits: 72
ಚಿತ್ರರಂಗದಲ್ಲಿ ಕುತೂಹಲ ಮೂಡಿಸಿರುವ ಕ್ರೈಂ ಥ್ರಿಲ್ಲರ್ “ಕಲುಷ” ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಇದೇ ಮಾರ್ಚ್ 23ರಂದು ಬಿ ಎಲ್ ಡಿ ಸಂಸ್ಥೆಯ ಎಎಸ್‌ಪಿ ಕಾಲೇಜ್‌ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಚಿತ್ರತಂಡದ ಕಲಾವಿದರು ಹಾಗೂ ತಾಂತ್ರಿಕ ಬಳಗ ಭಾಗವಹಿಸಲಿದ್ದಾರೆ.
ಈ ಚಿತ್ರದಲ್ಲಿ ಯುವಾನ್ ಪ್ರತಾಪ್, ಐಶ್ವರ್ಯ ಮುತ್ತುರಾಜ್, ಬಲ ರಾಜ್ವಾಡಿ, ಕೆ. ಎಸ್. ಶ್ರೀಧರ್, ಸಂಜು ಬರಾಡೆ, ದೇವು ಕುಮಾರ್ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಅಭಿನಯಿಸಿದ್ದಾರೆ. ವಿಭಿನ್ನ ಕಥಾಹಂದರ ಮತ್ತು ತೀವ್ರತೆಯ ಸನ್ನಿವೇಶಗಳ ಮೂಲಕ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಈ ಚಿತ್ರದ ಮೂಲಕ ಮಾಡಲಾಗಿದೆ.
“ಕಲುಷ” ಚಿತ್ರವನ್ನು ಷಣ್ಮುಖ ಎಸ್ ಕೆ ನಿರ್ದೇಶಿಸಿದ್ದು, ಚಿತ್ರಕ್ಕೆ ಸಿನೆಮಾಟೋಗ್ರಫಿಯನ್ನು ಭರತ್ ಇಂಡಿಯಾ ನಿರ್ವಹಿಸಿದ್ದಾರೆ. ಸಂಗೀತವನ್ನು ವಿನೋದ್ ಹಿರೇಮಠ್ ಹಾಗೂ ವಸೀಮ್ ಅಕ್ರಮ್ ಸಂಯೋಜಿಸಿದ್ದಾರೆ. ಚಿತ್ರದ ನಿರ್ಮಾಣವನ್ನು ಸಿ. ಎನ್. ನರಹರಿ ಮತ್ತು ಪ್ರತಾಪ್ ಆರ್ ಮಾಡಿದ್ದಾರೆ.
ಚಿತ್ರದ ಟೀಸರ್ ಬಿಡುಗಡೆಗೆ ಈಗಾಗಲೇ ಸಿನಿ ಪ್ರೇಮಿಗಳಲ್ಲಿ ಸಾಕಷ್ಟು ನಿರೀಕ್ಷೆ ಮೂಡಿದ್ದು, ಟೀಸರ್ ಚಿತ್ರದ ಮೇಲೆ ಹೊಸ ಕುತೂಹಲವನ್ನು ಮೂಡಿಸಲಿದೆ ಎಂಬ ವಿಶ್ವಾಸ ಚಿತ್ರತಂಡದಲ್ಲಿದೆ.
ಕ್ರೈಂ ಥ್ರಿಲ್ಲರ್ “ಕಲುಷ” ಟೀಸರ್ ಬಿಡುಗಡೆ ಇದೇ ಮಾರ್ಚ್ 23
ಕಲುಷ ಕನ್ನಡ ಚಲನಚಿತ್ರ
ಪಿಜಿ ವಿಭಾಗದಲ್ಲಿ ಸಂಶೋಧನಾ ವಿಷಯಕ್ಕೆ ಸಂಬಂಧಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮ
ಜಮಖಂಡಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಭ್ರಮ
ಸ್ವಚ್ಛತೆಯೇ ಆರೋಗ್ಯಕ್ಕೆ ಅಡಿಪಾಯ: ಸುನಿಲ್ ರಾಟೋಡ್
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಯಿತು
ಶಿಕ್ಷಕನಿಗೆ ಬಹುಮುಖದ ವ್ಯಕ್ತಿತ್ವ ಇರಬೇಕು
ಪ್ರಶಿಕ್ಷಣಾರ್ಥಿಗಳ ಕಾರ್ಯಗಾರ ಕಾರ್ಯಕ್ರಮ