ಕೈಯೊಡ್ಡಿ ಪ್ರಸಾದವ ಕೊಂಡಡೆ ಕರ್ಮಧಾರಿ. ಶೇಷಪ್ರಸಾದವನಾಯ್ದು ಕೊಂಡಡೆ ವರ್ಮಹೀನ. ಉಕ್ಕುಳಪ್ರಸಾದವ ಕೊಂಡಡೆ ಸತ್ಕ್ರೀಗೆ ಸಲ್ಲ. ಇಂತಿವನರಿದು ಸಜ್ಜನಪ್ರಸಾದವ ನಿರ್ಧರದಿಂದ ಕೊಂಬ ಮಹಾಪ್ರಸಾದಿಯ ಕಾರುಣ್ಯವೆನಗೆಂದಿಗೆ ಸಾಧ್ಯವಪ್ಪುದು ? ಕುಂಭೇಶ್ವರಲಿಂಗದಲ್ಲಿ ಜಗನ್ನಾಥವವರಿದವಂಗಲ್ಲದೆ ಸಾಧ್ಯವಲ್ಲ
ಸುದ್ದಿ LOCAL NEWS

ಜಮಖಂಡಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಭ್ರಮ

by 20 on | 2026-03-11 19:44:24

Share: Facebook | Twitter | Whatsapp | Linkedin | Visits: 239


ಜಮಖಂಡಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಭ್ರಮ
ಮಹಿಳಾ ದಿನಾಚರಣೆಯ ಸಂಭ್ರಮ ಆಚರಣೆ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ 


ಪ್ರತಿಷ್ಠಿತ ಬಿ.ಎಲ್.ಡಿ.ಇ. ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ), ಜಮಖಂಡಿಯಲ್ಲಿ  ದಿ. 11-3-26 ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.


 ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಿ ಎಲ್ ಡಿ ಇ ಪದವಿ ಮಹಾವಿದ್ಯಾಲಯದ  ಉಪನ್ಯಾಸಕರಾದ ಪ್ರೊ.ಆರ್. ಎಸ್ ಉದಪುಡಿ ಅವರು , ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಸಮಾಜದಲ್ಲಿ ಸ್ಟ್ರಿಯರು ಮತ್ತು ಪುರುಷರು ಸಮಾನರು ಯಾವುದೇ ತಾರತಮ್ಯ ಇಲ್ಲ ಹಾಗೂ ಒಬ್ಬರನ್ನೊಬ್ಬರು ಅವಲಂಬಿಸಿದ್ದಾರೆ. ಉತ್ತಮ ಸಮಾಜ ನಿರ್ಮಾಣದಲ್ಲಿ ಲಿಂಗ ಸಮಾನತೆ ಬರಬೇಕಾದರೆ ಪ್ರತಿಯೊಬ್ಬರಿಂದ ಸಾದ್ಯ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಪ್ರಶಿಕ್ಷಣಾರ್ಥಿಗಳಿಂದ ನಾಟಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು  ಪ್ರದರ್ಶಿಸಲಾಯಿತು. ಪ್ರಶಿಕ್ಷಣಾರ್ಥಿಗಳಾದ ಜಯಲಕ್ಷ್ಮಿ ಅಥಣಿ, ಶಿವಾನಂದ ಅವಟಿ ಅನಿಸಿಕೆ ವ್ಯಕ್ತಪಡಿಸಿದರು. ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಕೆ ಜಿ ಜೀರಗಾಳಿ ಅವರು ಅಧ್ಯಕ್ಷತೆ ವಹಿಸಿ ಅಧ್ಯಕ್ಷೀಯ ನುಡಿಗಳನ್ನು ಹೇಳಿದರು. ಕಾರ್ಯಕ್ರಮದ ವೇದಿಕೆಯ ಮೇಲೆ ಪ್ರೊ.ಎಲ್ ಎಂ ಮಾರ್ಕಪನಳ್ಳಿ, ಪ್ರೊ.ಅಶ್ವಿನಿ ಅನಂತಪೂರ, ಪ್ರೊ.ಪ್ರೇಮಾನಂದ ಹಿರೇಮಠ, ಪ್ರೊ.ಮಹಾದೇವ ಗಲಬಿ,

 ಪ್ರೊ.ಲಕ್ಷ್ಮೀ ಧರ್ಮಟ್ಟಿ ಉಪಸ್ಥಿತರಿದ್ದರು.

 ಪ್ರಶಿಕ್ಷಣಾರ್ಥಿ ಸೃಷ್ಟಿ ಸಿಂದೂರ ಪ್ರಾರ್ಥನೆಯನ್ನು ಭರತನಾಟ್ಯ ಮೂಲಕ ಪ್ರಾರಂಭಿಸಿದರು. ಸ್ವಾಗತ ಮತ್ತು ಪುಷ್ಪಾರ್ಪಣೆ ಈರನಗೌಡ ಬಿರಾದಾರ, ಅಲ್ಲಮಪ್ರಭು ವಾಜಂತ್ರಿ ಅತಿಥಿಗಳ ಪರಿಚಯ, ಸ್ಫೂರ್ತಿ ಗದ್ಯಾಳ ಮತ್ತು ಪ್ರದೀಪ ಹುಕ್ಕೇರಿ,  ಉಮೇಶ ನ್ಯಾಮಗೌಡ  ವಂದನಾರ್ಪಣೆ ಮಾಡಿದರು.

Search
Popular News
Most Popular
ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಅಲೆನ್ ಕರಿಯರ್ ಅಕಾಡೆಮಿ ಮಧ್ಯೆ ಶೈಕ್ಷಣಿಕ ಓರಿಯಂಟೇಶನ್ ಕಾರ್ಯಕ್ರಮದ ಕ್ಷಣಗಳು.
Vachana Pitamaha P. G. Halakatti College of Engineering
Nursing College Jamkhandi
BLDEA Nursing College Vijayapura
Vachana Pitamaha P. G. Halakatti College of Engineering Vijayapura
ಡಾ ಫ ಗು ಹಳಕಟ್ಟಿ, ಬಂಥನಾಳ ಶಿವಯೋಗಿಗಳು, ಡಾ ಬಿ ಎಂ ಪಾಟೀಲ್ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆ ಕಾರ್ಯಕ್ರಮ

Leave a Comment