by 7 on | 2024-08-03 14:09:22
Share: Facebook | Twitter | Whatsapp | Linkedin | Visits: 267
ಇಸ್ರೋದ ಇಬ್ಬರು ಗಗನಯಾತ್ರಿಗಳಿಗೆ ತರಬೇತಿ ಬಾಹ್ಯಾಕಾಶ ನಿಲ್ದಾಣಕ್ಕೆ ಭಾರತದಿಂದ ಶುಕ್ಲಾ ಆಯ್ಕೆ. ಅಮೆರಿಕ ಅಂತಾರಾಷ್ಟ್ರೀಯ ಬಾಹ್ಯಾ ಕಾಶ ನಿಲ್ದಾಣ ಐಎಸ್‌ಎಸ್ ಯೋಜ ನೆಗೆ ಅತ್ಯಂತ ಕಿರಿಯ ಗಗನಯಾ ತ್ರಿಯಾದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರನ್ನು ನಿಯೋಜಿತ ಮುಖ್ಯ ಗಗನಯಾತ್ರಿಯಾಗಿ ಭಾರ ತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋ ಆಯ್ಕೆ ಮಾಡಿದೆ. ಬ್ಯಾಕ್ ಅಪ್ ಗಗನಯಾತ್ರಿಯಾಗಿ ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣ ನಾಯರ್‌ರನ್ನು ಆಯ್ಕೆ ಮಾಡಲಾಗಿದೆ. ಮುಖ್ಯ ಗಗನಯಾತ್ರಿಯು ಪೈಲಟ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಕೊನೆ ಕ್ಷಣದಲ್ಲಿ ಏರುಪೇರಾದರೆ ಬ್ಯಾಕ್ ಅಪ್ ಗಗನಯಾತ್ರಿಯು ಹಾರಾಟ ಮುನ್ನಡೆ ಸಲಿದ್ದಾರೆ. ಉತ್ತರ ಪ್ರದೇಶದ ಶುಭಾಂಶು ಶುಕ್ಲಾ 2-21, ಸುಖೋಯಿ-30, ಎಂಕೆಐ, -29, ಜಾಗ್ವಾರ್ ಸೇರಿ ವಿವಿಧ ಮಾದರಿಯ ವಿಮಾನಗಳ ಹಾರಾಟ ನಡೆಸಿದ್ದಾರೆ. ಒಟ್ಟು 2000 ಗಂಟೆ ಹಾರಾಟ ನಡೆಸಿದ ಅನುಭವವಿದೆ. ಐಎಸ್‌ಎಸ್‌ಗಾಗಿ ಅಮೆರಿಕ ಆಕ್ಸಿಯಂ- 4 ಯೋಜನೆ ಹಮ್ಮಿಕೊಂಡಿದೆ. ಈ ಸಂಬಂಧ ನಾಸಾದೊಂದಿಗೆ ಇಸ್ರೋ ಸ್ಪೇಸ್‌ಫೈಟ್ ಒಪ್ಪಂದ ಮಾಡಿಕೊಂಡಿ ದೆ. ಅದರ ಭಾಗವಾಗಿಯೇ ಐ.ಎಸ್. ಎಸ್,ಗೆ ಶುಭಾಂಶು ಅವರನ್ನು ಇಸ್ರೋ ಕಳುಹಿಸುತ್ತಿದೆ.
ಕ್ರೈಂ ಥ್ರಿಲ್ಲರ್ “ಕಲುಷ” ಟೀಸರ್ ಬಿಡುಗಡೆ ಇದೇ ಮಾರ್ಚ್ 23
ಕಲುಷ ಕನ್ನಡ ಚಲನಚಿತ್ರ
ಪಿಜಿ ವಿಭಾಗದಲ್ಲಿ ಸಂಶೋಧನಾ ವಿಷಯಕ್ಕೆ ಸಂಬಂಧಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮ
ಜಮಖಂಡಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಭ್ರಮ
ಸ್ವಚ್ಛತೆಯೇ ಆರೋಗ್ಯಕ್ಕೆ ಅಡಿಪಾಯ: ಸುನಿಲ್ ರಾಟೋಡ್
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಯಿತು
ಶಿಕ್ಷಕನಿಗೆ ಬಹುಮುಖದ ವ್ಯಕ್ತಿತ್ವ ಇರಬೇಕು
ಪ್ರಶಿಕ್ಷಣಾರ್ಥಿಗಳ ಕಾರ್ಯಗಾರ ಕಾರ್ಯಕ್ರಮ