ಕೈಯೊಡ್ಡಿ ಪ್ರಸಾದವ ಕೊಂಡಡೆ ಕರ್ಮಧಾರಿ. ಶೇಷಪ್ರಸಾದವನಾಯ್ದು ಕೊಂಡಡೆ ವರ್ಮಹೀನ. ಉಕ್ಕುಳಪ್ರಸಾದವ ಕೊಂಡಡೆ ಸತ್ಕ್ರೀಗೆ ಸಲ್ಲ. ಇಂತಿವನರಿದು ಸಜ್ಜನಪ್ರಸಾದವ ನಿರ್ಧರದಿಂದ ಕೊಂಬ ಮಹಾಪ್ರಸಾದಿಯ ಕಾರುಣ್ಯವೆನಗೆಂದಿಗೆ ಸಾಧ್ಯವಪ್ಪುದು ? ಕುಂಭೇಶ್ವರಲಿಂಗದಲ್ಲಿ ಜಗನ್ನಾಥವವರಿದವಂಗಲ್ಲದೆ ಸಾಧ್ಯವಲ್ಲ
ಆರೋಗ್ಯ Health

ಸ್ವಯಂ ಪ್ರೇರಿತ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ

by 30 on | 2025-08-05 10:29:54

Share: Facebook | Twitter | Whatsapp | Linkedin | Visits: 205


ಸ್ವಯಂ ಪ್ರೇರಿತ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ
ಸ್ವಯಂ ಪ್ರೇರಿತ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ

 ದಿನಾಂಕ 03-08-2025 ಬಿ ಎಲ್ ಡಿ ಈ (ಡೀಮ್ಡ್ ವಿಶ್ವವಿದ್ಯಾನಿಲಯ) ಶ್ರೀ ಬಿ.ಎಮ್.ಪಾಟೀಲ್ ವೈದ್ಯಕೀಯ ಮಹಾವಿದ್ಯಾಲಯ ಕಾಲೇಜು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ವಿಜಯಪುರ ಇವರ ವತಿಯಿಂದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೊಲೀಸ ವಿಭಾಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು, ಈ ಶಿಬಿರದಲ್ಲಿ  ವೈದ್ಯಕೀಯ ಚಿಕಿತ್ಸಾ, ಎಲುಬು ಕೀಲು ಚಿಕಿತ್ಸಾ, ನೇತ್ರ ಚಿಕಿತ್ಸಾ, ಚಿಕ್ಕ ಮಕ್ಕಳ ಚಿಕಿತ್ಸಾ, ಚರ್ಮರೋಗ ಚಿಕಿತ್ಸಾ ಹಾಗೂ ಸ್ತ್ರೀರೋಗ ಮತ್ತು ಪ್ರಸುತಿ ಚಿಕಿತ್ಸಾ ವಿಭಾಗದ ನುರಿತ ತಜ್ಞ ವ್ಯದ್ಯರಿಂದರಿಂದ ಸುಮಾರು 130 ಜನ ಪೊಲೀಸ ಸಿಬ್ಬಂದಿ ಹಾಗೂ ಅವರ ಕುಟುಂಬ ವರ್ಗದವರ ಆರೋಗ್ಯ ತಪಾಸಣೆ ಮಾಡಲಾಯಿತು ಜೊತೆಗೆ ಸುಮಾರು 40 ಜನ ಪೊಲೀಸ ಸಿಬ್ಬಂದಿ ವರ್ಗದವರು ಸ್ವಯಂ ಪ್ರೇರಿತವಾಗಿ ರಕ್ತದ ಗುಂಪು ತಪಾಸಣೆ ಮಾಡಿಕೊಂಡು ರಕ್ತದಾನ ಮಾಡಿದರು.

 ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳಾದ ಶ್ರೀ ಲಕ್ಷ್ಮಣ ನಿಂಬರಗಿ  ಹಾಗೂ ಉಪಅಧೀಕ್ಷಕರಾದ  ಶ್ರೀ ರಾಮನಗೌಡ ಹಟ್ಟಿ,   ಶ್ರೀ. ಎಂ. ಎ. ಉಪಾಸೆ DYSP DR ಹಾಗೂ ಶ್ರೀ. ವಿಠ್ಠಲ ಕೊಕಟನೂರ RPI DR ಮತ್ತು ಶ್ರೀ. ಆಯ. ಫ. ತೇಲಿ  RPI DR ಹಾಗೂ ಬಿ ಎಲ್ ಡಿ ಈ ಆಸ್ಪತ್ರೆಯ ವೈದ್ಯಕೀಯ ಅಧಿಕ್ಷಕರಾದ ಡಾ. ಆರ. ಎಮ. ಹೊನ್ನುಟಗಿ, ವೈದ್ಯಕೀಯ ಚಿಕಿತ್ಸಾ ವಿಭಾಗದ ತಜ್ಞರಾದ ಡಾ. ಪ್ರೀತಮ ಭೈರೊಡಗಿ, ಡಾ.ಮಂಜುನಾಥ ಬೂಸನೂರ ರಕ್ತ ಭಂಡಾರ / ನಿಧಿ ಕೇಂದ್ರದ ಆಡಳಿತಾಧಿಕಾರಿಗಳಾದ ಡಾ. ಸತೀಶ ಅರಕೇರಿ ಡಾ. ಭಾಗ್ಯಶಾಲಿ ಹಾಗೂ ಆಸ್ಪತ್ರೆಯ ಬೋಧಕೇತರ  ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು, ಈ ಶಿಬಿರವನ್ನು  ಅಚ್ಚುಕಟ್ಟಾಗಿ  ಆಯೋಜನೆ ಮಾಡಿದಕ್ಕಾಗಿ ಪೊಲೀಸ ಇಲಾಖೆಯಿಂದ ಬಿಎಲ್ ಡಿ ಈ ಆಸ್ಪತ್ರೆಯ ಎಲ್ಲಾ ತಜ್ಞ ವೈದ್ಯರಿಗೆ ಹಾಗೂ ಸಿಬ್ಬಂದಿ ವರ್ಗಕ್ಕೆ ಧನ್ಯವಾದಗಳು ತಿಳಿಸಿದರು.

Search
Popular News
Most Popular
ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಅಲೆನ್ ಕರಿಯರ್ ಅಕಾಡೆಮಿ ಮಧ್ಯೆ ಶೈಕ್ಷಣಿಕ ಓರಿಯಂಟೇಶನ್ ಕಾರ್ಯಕ್ರಮದ ಕ್ಷಣಗಳು.
Vachana Pitamaha P. G. Halakatti College of Engineering
Nursing College Jamkhandi
BLDEA Nursing College Vijayapura
Vachana Pitamaha P. G. Halakatti College of Engineering Vijayapura
ಡಾ ಫ ಗು ಹಳಕಟ್ಟಿ, ಬಂಥನಾಳ ಶಿವಯೋಗಿಗಳು, ಡಾ ಬಿ ಎಂ ಪಾಟೀಲ್ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆ ಕಾರ್ಯಕ್ರಮ

Leave a Comment