by 20 on | 2026-02-26 16:26:05
Share: Facebook | Twitter | Whatsapp | Linkedin | Visits: 189
ಶಿಕ್ಷಕರಾದವರು ಬಹುಮುಖ ವ್ಯಕ್ತಿತ್ವ ಹೊಂದಿರಬೇಕು
ಇಂದಿನ ಯುಗದಲ್ಲಿ ಶಿಕ್ಷಕರಾದವರು ಸಮಾಜದ ವಿವಿಧ ತರದಲ್ಲಿ ಕೆಲಸ ಮಾಡಲು ತಯಾರಿರಬೇಕು ಹಾಗೂ ಅದೇ ತೆರನಾಗಿ ವಿದ್ಯಾರ್ಥಿಗಳ ಜೊತೆಗೆ ಪಾಠ ಬೋಧನೆ ಮಾಡುವಾಗ ಹಲವಾರು ಚಟುವಟಿಕೆಯುತ ಸಾಧನಗಳನ್ನು ಬಳಸಿಕೊಂಡು ಪಾಠ ಮಾಡುವ ಬಹುಮುಖ ವ್ಯಕ್ತಿತ್ವವನ್ನು ಹೊಂದಬೇಕು. ತಮ್ಮ ಬೋಧನೆ ಜೊತೆಗೆ ಮಾನವೀಯ ಮೌಲ್ಯಗಳನ್ನು ಕುಡಿಸಿಕೊಂಡು ಬೋಧನೆ ಮಾಡಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಪ್ರೊ ಸುರೇಶ ಸಮ್ಮಸಗಿ ಅವರು ಬಿ ಎಲ್ ಡಿ ಇ ಶಿಕ್ಷಣ ಮಹಾವಿದ್ಯಾಲಯದ (ಬಿ.ಇಡಿ) 2025-26ನೇ ಸಾಲಿನ ವಿದ್ಯಾರ್ಥಿ ಒಕ್ಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಇನ್ನೋರ್ವ ಅತಿಥಿಗಳಾದ ಬಿ ಎಲ್ ಡಿ ಇ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರದ ಡಾ. ಪಿ ಡಿ ಪೋಳ ಅವರು ಶಿಕ್ಷಣವು ಉದ್ಯೋಗ ನೀಡುವುದಿಲ್ಲ ಆದರೆ ಉದ್ಯೋಗವನ್ನು ಮಾಡುವ ಬಗೆಯನ್ನು ಕಲಿಸುತ್ತದೆ ಮತ್ತು ಅದು ಅವರವರ ಸಾಮರ್ಥ್ಯದಿಂದ ಸಾದ್ಯ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ಸ್ಥಾನ ವಹಿಸಿದ್ದ ಪ್ರೊ. ಎಸ್ ಎಚ್ ಲಗಳಿ ಅವರು ಸಮಾಜದಲ್ಲಿ ಗುರುತರ ಜವಾಬ್ದಾರಿ ಶಿಕ್ಷಕರ ಅವಶ್ಯಕತೆ ಇದೆ ಹಾಗೂ ಶಿಕ್ಷಕರಾದವರು ಕೇವಲ ಸರ್ಕಾರಿ ನೌಕರಿಗೋಸ್ಕರ ಕಾಯಬಾರದು ಅದರ ಬದಲಿಗೆ ಇಂದಿನ ಯುಗದಲ್ಲಿ ಬೇರೆ ಬೇರೆ ಶಾಲೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಅಧ್ಯಕ್ಷಿಯ ನುಡಿಗಳನ್ನು ಹೇಳಿದರು.
ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾದ ಪ್ರೊ.ಪ್ರೇಮಾನಂದ ಹಿರೇಮಠ ಅವರು 2025-26 ನೇ ಸಾಲಿನ ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾಲೇಜಿನ ಪ್ರಾಚಾರ್ಯರಾದ ಪ್ರೊ ಕೆ ಜೆ ಜಿರಗಾಳಿ ಅವರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು. ಕಾರ್ಯಕ್ರಮದ ವೇದಿಕೆಯ ಮೇಲೆ ಪ್ರೊ.ಮಹಾದೇವ ಗಲಬಿ ಹಾಗೂ ಪ್ರಧಾನ ಕಾರ್ಯದರ್ಶಿಯಾದ ಜಯಲಕ್ಷ್ಮಿ ಅಥಣಿ ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿಯಾದ ವಿನಯ ಕಟ್ಟಿಮನಿ ಹಾಗೂ ಸಂಗಡಿಗರು ಪ್ರಾರ್ಥನೆ, ಪ್ರೊ.ಎಲ್ ಎಮ್ ಮಾರ್ಕಪನಳ್ಳಿ ಹಾಗು ಸ್ಪೂರ್ತಿ ಗದ್ಯಾಳ ನಿರೂಪಣೆ, ಪ್ರೊ.ಅಶ್ವಿನಿ ಅನಂತಪೂರ ವಂದಿಸಿದರು.
ಕ್ರೈಂ ಥ್ರಿಲ್ಲರ್ “ಕಲುಷ” ಟೀಸರ್ ಬಿಡುಗಡೆ ಇದೇ ಮಾರ್ಚ್ 23
ಕಲುಷ ಕನ್ನಡ ಚಲನಚಿತ್ರ
ಪಿಜಿ ವಿಭಾಗದಲ್ಲಿ ಸಂಶೋಧನಾ ವಿಷಯಕ್ಕೆ ಸಂಬಂಧಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮ
ಜಮಖಂಡಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಭ್ರಮ
ಸ್ವಚ್ಛತೆಯೇ ಆರೋಗ್ಯಕ್ಕೆ ಅಡಿಪಾಯ: ಸುನಿಲ್ ರಾಟೋಡ್
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಯಿತು
ಶಿಕ್ಷಕನಿಗೆ ಬಹುಮುಖದ ವ್ಯಕ್ತಿತ್ವ ಇರಬೇಕು
ಪ್ರಶಿಕ್ಷಣಾರ್ಥಿಗಳ ಕಾರ್ಯಗಾರ ಕಾರ್ಯಕ್ರಮ