ಕೈಯೊಡ್ಡಿ ಪ್ರಸಾದವ ಕೊಂಡಡೆ ಕರ್ಮಧಾರಿ. ಶೇಷಪ್ರಸಾದವನಾಯ್ದು ಕೊಂಡಡೆ ವರ್ಮಹೀನ. ಉಕ್ಕುಳಪ್ರಸಾದವ ಕೊಂಡಡೆ ಸತ್ಕ್ರೀಗೆ ಸಲ್ಲ. ಇಂತಿವನರಿದು ಸಜ್ಜನಪ್ರಸಾದವ ನಿರ್ಧರದಿಂದ ಕೊಂಬ ಮಹಾಪ್ರಸಾದಿಯ ಕಾರುಣ್ಯವೆನಗೆಂದಿಗೆ ಸಾಧ್ಯವಪ್ಪುದು ? ಕುಂಭೇಶ್ವರಲಿಂಗದಲ್ಲಿ ಜಗನ್ನಾಥವವರಿದವಂಗಲ್ಲದೆ ಸಾಧ್ಯವಲ್ಲ
ಆರೋಗ್ಯ Health

ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ "ನಷಾ ಮುಕ್ತ ಭಾರತ ಅಭಿಯಾನ್ – 2025" ಜಾಗೃತಿ ಕಾರ್ಯಕ್ರಮ

by 28 on | 2025-08-18 16:27:33 Last Updated by 28 on2026-04-18 18:11:29

Share: Facebook | Twitter | Whatsapp | Linkedin | Visits: 340


ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ "ನಷಾ ಮುಕ್ತ ಭಾರತ ಅಭಿಯಾನ್ – 2025" ಜಾಗೃತಿ ಕಾರ್ಯಕ್ರಮ
ಶ್ರೀ ಜೆ.ಎ. ವಾಘಮೋರೆ (ASI, ತಿಕೋಟಾ ಪೊಲೀಸ್ ಠಾಣೆ) ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಮಾತನಾಡಿದರು ಪ್ರೊ. ಡಾ. ಪ್ರಕಾಶ್ ಸಿದ್ದಾಪೂರ, ಪ್ರಾಚಾರ್ಯರು, ಅಧ್ಯಕ್ಷತೆಯನ್ನು ವಹಿಸಿದರು, ರಾಷ್ಟ್ರೀಯ ಸೇವಾ ಯೋಜನೆಧಿಕಾರಿ ಶ್ರೀ ಆಕಾಶ್ ಜಾಧವ್, ನೋಡಲ್ ಅಧಿಕಾರಿ ಶ್ರೀ ಅಜೂರ್ ನವನಾಥ್ ಹಾಜರಿದ್ದರು.

ಎಲ್‌ಡಿಇ ಸಂಸ್ಥೆ ನರ್ಸಿಂಗ್ ಮಹಾವಿದ್ಯಾಲಯ, ತಿಕೋಟಾರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ "ನಷಾ ಮುಕ್ತ ಭಾರತ ಅಭಿಯಾನ್ – 2025" ಜಾಗೃತಿ ಕಾರ್ಯಕ್ರಮ

 

ಬಿಎಲ್‌ಡಿಇ ಸಂಸ್ಥೆ ನರ್ಸಿಂಗ್ ಮಹಾವಿದ್ಯಾಲಯ, ತಿಕೋಟಾದ ರಾಷ್ಟ್ರೀಯ ಸೇವಾ ಯೋಜನೆ ಘಟಕವು "ನಷಾ ಮುಕ್ತ ಭಾರತ ಅಭಿಯಾನ್ – 2025" ಅಡಿಯಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ದಿನಾಂಕ 18 ಆಗಸ್ಟ್ 2025 ರಂದು ಯಶಸ್ವಿಯಾಗಿ ಆಯೋಜಿಸಿತು.

 

ಅಭಿಯಾನವು ಯುವಜನತೆಯಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಹಾಗೂ ನಶಾಮುಕ್ತ ಸಮಾಜ ನಿರ್ಮಿಸಲು ಪ್ರಧಾನ ಉದ್ದೇಶ ಹೊಂದಿದೆ.

ಕಾರ್ಯಕ್ರಮವು ಭಕ್ತಿಗೀತೆ ಮೂಲಕ ಆರಂಭವಾಗಿ, ನಂತರ ಅತಿಥಿಗಳ ಸ್ವಾಗತ, ದೀಪ ಪ್ರಜ್ವಲನೆ, ಅತಿಥಿಗಳ ಭಾಷಣದ ಮೂಲಕ ಸಾಗಿತುಪ್ರೇಮಾ ಕಂಬಳಿ (4ನೇ ಸೆಮಿಸ್ಟರ್ B.Sc. ನರ್ಸಿಂಗ್) ಅವರು ಭಕ್ತಿಗೀತೆಗೈದರು ಮತ್ತು ನಂದಿನಿ ಚವಾಣ್ (6ನೇ ಸೆಮಿಸ್ಟರ್ B.Sc. ನರ್ಸಿಂಗ್) ಅವರು ಸ್ವಾಗತ ಭಾಷಣವನ್ನಿತ್ತರು.

 

ಶ್ರೀ ಜೆ.. ವಾಘಮೋರೆ (ASI, ತಿಕೋಟಾ ಪೊಲೀಸ್ ಠಾಣೆ) ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಮಾತನಾಡಿದರು. ಅವರು ಮಾದಕ ವಸ್ತುಗಳನ್ನು ಉಪಯೋಗಿಸಬೇಡಿ ಎಂಬ ಕಿವಿಮಾತು ನೀಡಿದರು ಮತ್ತು ಮಾದಕ ವ್ಯಸನದಿಂದ ದೇಹ, ಮನಸ್ಸು ಮತ್ತು ಸಮಾಜದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ತಿಳಿಸಿದರು.

 

ಪ್ರೊ. ಡಾ. ಪ್ರಕಾಶ್ ಸಿದ್ದಾಪೂರ, ಪ್ರಾಚಾರ್ಯರು, ಅವರು ಅಧ್ಯಕ್ಷತೆಯನ್ನು ವಹಿಸಿ ಮುಖ್ಯ ಅತಿಥಿಗೆ ಸ್ಮರಣಿಕೆ ನೀಡಿ ಗೌರವ ಸಲ್ಲಿಸಿದರು. ತಮ್ಮ ಭಾಷಣದಲ್ಲಿ ಅವರು ನಷಾ ಮುಕ್ತ ಅಭಿಯಾನದ ಮಹತ್ವವನ್ನು ವಿವರಿಸಿ, ಇದು ಕೇವಲ ಸರ್ಕಾರದ ಯೋಜನೆ ಮಾತ್ರವಲ್ಲದೆ, ಸಾಮಾಜಿಕ ಚಳವಳಿಯೂ ಆಗಿರುವುದಾಗಿ ಹೇಳಿದರು.

 

ಕಾರ್ಯಕ್ರಮವು "ನಶೆ ಇಲ್ಲದ ಭಾರತ, ಆರೋಗ್ಯವಂತ ಸಮಾಜ" ಎಂಬ ಘೋಷಣೆಯೊಂದಿಗೆ ಯಶಸ್ವಿಯಾಗಿ ಕೊನೆಗೊಂಡಿತು.


Search
Popular News
Most Popular
ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಅಲೆನ್ ಕರಿಯರ್ ಅಕಾಡೆಮಿ ಮಧ್ಯೆ ಶೈಕ್ಷಣಿಕ ಓರಿಯಂಟೇಶನ್ ಕಾರ್ಯಕ್ರಮದ ಕ್ಷಣಗಳು.
Vachana Pitamaha P. G. Halakatti College of Engineering
Nursing College Jamkhandi
BLDEA Nursing College Vijayapura
Vachana Pitamaha P. G. Halakatti College of Engineering Vijayapura
ಡಾ ಫ ಗು ಹಳಕಟ್ಟಿ, ಬಂಥನಾಳ ಶಿವಯೋಗಿಗಳು, ಡಾ ಬಿ ಎಂ ಪಾಟೀಲ್ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆ ಕಾರ್ಯಕ್ರಮ

Leave a Comment