by 1 on | 2024-01-22 17:11:33
Share: Facebook | Twitter | Whatsapp | Linkedin | Visits: 268
ಅಯೋಧ್ಯಯಲ್ಲಿ ಶ್ರೀರಾಮಚಂದ್ರನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ರಾಮ ಮಂದಿರ ಲೋಕಾರ್ಪಣೆಗೊಂಡಿದ್ದೆ, ಎಲ್ಲೆಡೆ ಜೈ ಶ್ರೀರಾಮ ಘೋಷಣೆಗಳು ಮೊಳಗುತ್ತಿವೆ. ರಾಮಭಕ್ತರು ವಿವಿಧ ರೀತಿಯಲ್ಲಿ ಸಾಂಸ್ಕೃತಿ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿ, ಸಂಭ್ರಮಿಸುತ್ತಿದ್ದಾರೆ.
ವಿಜಯಪುರ ಜಿಲ್ಲೆಯ ಜನರು ದುಬೈ ಪ್ರವಾಸ ಕೈಗೊಂಡಿರುವ ಸ್ಥಳದಲ್ಲಿಯೇ ಕೈಯಲ್ಲಿ ಧ್ವಜ ಹಿಡಿದು ರಾಮ ಮಂದಿರ ಲೋಕಾರ್ಪಣೆ ಕ್ಷಣಗಳನ್ನು ಆನಂದಿಸಿದ್ದಾರೆ. ವಿಜಯಪುರ ನಗರದ ಉದ್ಯಮಿ ಪ್ರಕಾಶ ಪಾಟೀಲ ಹಾಲಳ್ಳಿ ತಮ್ಮ ಪತ್ನಿ ಮಹೇಶ್ವರಿ ಪಾಟೀಲ, ಶರಣಪ್ಪ ಮೇಡೆದಾರ ಮತ್ತು ಸುಜಾತಾ ಮೇಡೆದಾರ, ಎಸ್. ಜಿ. ಕೋರಿ, ಸುಜಾತಾ ಕೋರಿ, ಶಿವಾನಂದ ಬ್ಯಾಕೋಡ, ವಿದ್ಯಾ ಬ್ಯಾಕೋಡ, ಜಿ. ಎಂ. ಸಿಂಧೂರ, ಮೈನಾ ಸಿಂಧೂರ, ರಾಜಶೇಖರ ಉಮದಿ ಮತ್ತು ಮಂಗಲಾ ಉಮದಿ ದಂಪತಿ ರಾಮಿ ರಿಜೆಟ್ ಪ್ಯಾಲೇಸ್ ಬಳಿ ಸೇರಿ ಸಂಭ್ರಮಿಸಿದ್ದಾರೆ.
ಭಾರತದಲ್ಲಿ ಇವರ ಸಂಬAಧಿಕರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಆದರೆ, ತಾವು ಭಾರತದಲ್ಲಿ ಇರದಿದ್ದರೇನಂತೆ ತಾವಿರುವ ಕಡೆಯಲ್ಲಿಯೇ ರಾಮ ಮಂದಿರ ಲೋಕಾರ್ಪಣೆ ದಿನವನ್ನು ಸ್ಮರಣೀಯವಾಗಿಸಿಕೊಳ್ಳಲು ಜೈ ಶ್ರೀರಾಮ ಘೋಷಣೆ ಹಾಕುವ ಮೂಲಕ ವಿದೇಶದಿಂದಲೇ ಸಂತಸ ವ್ಯಕ್ತಪಡಿಸಿದ್ದಾರೆ.
ಕ್ರೈಂ ಥ್ರಿಲ್ಲರ್ “ಕಲುಷ” ಟೀಸರ್ ಬಿಡುಗಡೆ ಇದೇ ಮಾರ್ಚ್ 23
ಕಲುಷ ಕನ್ನಡ ಚಲನಚಿತ್ರ
ಪಿಜಿ ವಿಭಾಗದಲ್ಲಿ ಸಂಶೋಧನಾ ವಿಷಯಕ್ಕೆ ಸಂಬಂಧಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮ
ಜಮಖಂಡಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಭ್ರಮ
ಸ್ವಚ್ಛತೆಯೇ ಆರೋಗ್ಯಕ್ಕೆ ಅಡಿಪಾಯ: ಸುನಿಲ್ ರಾಟೋಡ್
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಯಿತು
ಶಿಕ್ಷಕನಿಗೆ ಬಹುಮುಖದ ವ್ಯಕ್ತಿತ್ವ ಇರಬೇಕು
ಪ್ರಶಿಕ್ಷಣಾರ್ಥಿಗಳ ಕಾರ್ಯಗಾರ ಕಾರ್ಯಕ್ರಮ