ಕೈಯೊಡ್ಡಿ ಪ್ರಸಾದವ ಕೊಂಡಡೆ ಕರ್ಮಧಾರಿ. ಶೇಷಪ್ರಸಾದವನಾಯ್ದು ಕೊಂಡಡೆ ವರ್ಮಹೀನ. ಉಕ್ಕುಳಪ್ರಸಾದವ ಕೊಂಡಡೆ ಸತ್ಕ್ರೀಗೆ ಸಲ್ಲ. ಇಂತಿವನರಿದು ಸಜ್ಜನಪ್ರಸಾದವ ನಿರ್ಧರದಿಂದ ಕೊಂಬ ಮಹಾಪ್ರಸಾದಿಯ ಕಾರುಣ್ಯವೆನಗೆಂದಿಗೆ ಸಾಧ್ಯವಪ್ಪುದು ? ಕುಂಭೇಶ್ವರಲಿಂಗದಲ್ಲಿ ಜಗನ್ನಾಥವವರಿದವಂಗಲ್ಲದೆ ಸಾಧ್ಯವಲ್ಲ
ವಾಣಿಜ್ಯ LOCAL NEWS

ಅಯೋಧ್ಯೆ ರಾಮಲಲ್ಲಾಗೆ 33 ಕೆಜಿ ಚಿನ್ನದ 3 ಕಿರೀಟ ಕೊಡುಗೆ ನೀಡಿದ್ರ ಅಂಬಾನಿ?

by 1 on | 2024-01-22 17:22:41

Share: Facebook | Twitter | Whatsapp | Linkedin | Visits: 319


ಅಯೋಧ್ಯೆ ರಾಮಲಲ್ಲಾಗೆ 33 ಕೆಜಿ ಚಿನ್ನದ 3 ಕಿರೀಟ ಕೊಡುಗೆ ನೀಡಿದ್ರ ಅಂಬಾನಿ?

ಶ್ರೀಮಂತ ವ್ಯಕ್ತಿ ಎನಿಸಿರುವ ಮುಕೇಶ್ ಅಂಬಾನಿ ನೀತಾ ಅಂಬಾನಿ ದಂಪತಿ ಜೊತೆಯಾಗಿ ಬಹುಕೋಟಿ ಮೊತ್ತದ 33 ಕೆ.ಜಿ ತೂಗುವ ವಜ್ರಾಭರಣಗಳನ್ನು ಒಳಗೊಂಡ ಕಿರೀಟ ನೀಡಿದ್ದಾರೆ ಎಂಬ ಸುದ್ದಿಯೊಂದು ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.  


ಇಂದು ಅಯೋಧ್ಯಾ ರಾಮ ಮಂದಿರ ಅದ್ದೂರಿ ಸಮಾರಂಭಕ್ಕೆ ಸಾಕ್ಷಿಯಾಯ್ತು. “ನ ಭೂತೋ ನ ಭವಿಷ್ಯತಿ” ಎಂಬAತೆ ನಡೆದ ಈ ಸಮಾರಂಭದಲ್ಲಿ ಹಲವು ವಿವಿಐಪಿಗಳು, ಬಾಲಿವುಡ್ ತಾರೆಯರು ಸೇರಿದಂತೆ ವಿವಿಧ ಚಿತ್ರರಂಗದ ತಾರೆಯರು, ಖ್ಯಾತ ಉದ್ಯಮಿಗಳು, ಕ್ರಿಕೆಟ್ ತಾರೆಯರು, ದೇಶದ ಮೂಲೆ ಮೂಲೆಯಿಂದ ಬಂದ ಸಾಧುಗಳು ಈ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.


ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ವರದಿಯ ಪ್ರಕಾರ, ಅಯೋಧ್ಯೆಯ ರಾಮ ಮಂದಿರಕ್ಕೆ ಅಂಬಾನಿ ದಂಪತಿ 3 ಕಿರೀಟಗಳನ್ನು ನೀಡಿದ್ದು, 33 ಕೆಜಿ ಚಿನ್ನ ಬಳಸಿ ಈ ಕಿರೀಟವನ್ನು ಮಾಡಲಾಗಿದೆ ಎಂದಿದೆ. ಆದರೆ ಈ ವಿಚಾರದ ಸತ್ಯಾಸತ್ಯತೆಗೆ ಸಂಬAಧಿಸಿದAತೆ ಮಾಧ್ಯಮವೊಂದು  ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ್ನು ಸಂಪರ್ಕಿಸಿದಾಗ ಈ ವಿಚಾರ ಸತ್ಯಕ್ಕೆ ದೂರವಾದುದು ಎಂದು ತಿಳಿದು ಬಂದಿದೆ. 


ಮುಕೇಶ್ ಅಂಬಾನಿ ನೀತಾ ಸೇರಿದಂತೆ ಅವರ ಕುಟುಂಬದ ಯಾರೂ ಕೂಡ ಇಂತಹ ಉಡುಗೊರೆಯನ್ನು ನೀಡಿಲ್ಲ ಎಂದು ರಾಮಜನ್ಮಭೂಮಿ ಖಚಿತಪಡಿಸಿದೆ. ಅಲ್ಲದೇ ದೇಗುಲಕ್ಕೆ ದೇಣಿಗೆ ನೀಡಿದವರ ಲಿಸ್ಟ್ನಲ್ಲಿಯೂ ಇವರ ಹೆಸರಿಲ್ಲ ಎಂದು ತಿಳಿದು ಬಂದಿದೆ. ಇನ್ನು ಅಯೋಧ್ಯೆ ರಾಮ ಮಂದಿರದ ಉದ್ಘಾಟನೆಯ ಹಿನ್ನೆಲೆಯಲ್ಲಿ ಅಂಬಾನಿ ಅಪಾರ್ಟ್ಮೆಂಟ್ ಅಂಟಿಲಿಯಾವನ್ನು ಲೈಟಿಂಗ್ಸ್ ಜೊತೆ ಕಲಾತ್ಮಕವಾಗಿ ಸಿಂಗರಿಸಲಾಗಿತ್ತು. 


ಆದರೆ ಈ ಅದ್ದೂರಿ ಸಮಾರಂಭದಲ್ಲಿ ನೀತಾ ಅಂಬಾನಿ ಹಾಗೂ ಮುಕೇಶ್ ಅಂಬಾನಿ ಅವರ ಇಡೀ ಕುಟುಂಬವೇ ಭಾಗಿಯಾಗಿತ್ತು, ನೀತಾ ಅಂಬಾನಿ ಹಾಗೂ ಪತಿ ಮುಕೇಶ್ ಅಂಬಾನಿ ಜೊತೆಯಾಗಿ ಆಗಮಿಸಿದರೆ ಇತ್ತ ಇವರ ಪುತ್ರಿ ಇಶಾ ಅಂಬಾನಿ ಪತಿ ಗೌತಮ್ ಪಿರಾಮಲ್ ಜೊತೆ ಆಗಮಿಸಿದ್ದರು. ಹಾಗೆಯೇ ಆಕಾಶ್ ಅಂಬಾನಿ ಪತ್ನಿ ಶ್ಲೋಕ ಅಂಬಾನಿ ಜೊತೆ ಈ ಶುಭ ಕಾರ್ಯಕ್ರಮಕ್ಕೆ ಬಂದಿದ್ದರು.  ತಮ್ಮ ಎಂದಿನ ಸಂಪ್ರದಾಯಿಕ ಶೈಲಿಯ ಸಾರಿ ಉಟ್ಟು ಪತಿ ಜೊತೆ ಆಗಮಿಸುವ ಮೂಲಕ ನೀತಾ ಅಂಬಾನಿ ಗಮನ ಸೆಳೆದರು.

Search
Popular News
Most Popular
ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಅಲೆನ್ ಕರಿಯರ್ ಅಕಾಡೆಮಿ ಮಧ್ಯೆ ಶೈಕ್ಷಣಿಕ ಓರಿಯಂಟೇಶನ್ ಕಾರ್ಯಕ್ರಮದ ಕ್ಷಣಗಳು.
Vachana Pitamaha P. G. Halakatti College of Engineering
Nursing College Jamkhandi
BLDEA Nursing College Vijayapura
Vachana Pitamaha P. G. Halakatti College of Engineering Vijayapura
ಡಾ ಫ ಗು ಹಳಕಟ್ಟಿ, ಬಂಥನಾಳ ಶಿವಯೋಗಿಗಳು, ಡಾ ಬಿ ಎಂ ಪಾಟೀಲ್ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆ ಕಾರ್ಯಕ್ರಮ

Leave a Comment