by 28 on | 2025-10-04 11:02:59 Last Updated by 28 on2026-04-18 18:12:11
Share: Facebook | Twitter | Whatsapp | Linkedin | Visits: 310
ಬಿಎಲ್ಡಿಇ ಸಂಸ್ಥೆಯ ನರ್ಸಿಂಗ್ ಮಹಾವಿದ್ಯಾಲಯ, ತಿಕೋಟಾದಲ್ಲಿ 7ನೇ ಬ್ಯಾಚ್ ಬಿ. ಎಸ್ಸಿ. ನರ್ಸಿಂಗ್ ಪ್ರಥಮ ಸೆಮಿಸ್ಟರ್ನ ವಿದ್ಯಾರ್ಥಿಗಳಿಗೆ ಪರಿಚಯ ಕಾರ್ಯಕ್ರಮವನ್ನು ದಿನಾಂಕ 03/10/2025 ರಂದು ಆರಂಭಿಸಲಾಯಿತು. ಹೊಸವಾಗಿ ಪ್ರವೇಶ ಪಡೆದ ಎಲ್ಲಾ ವಿದ್ಯಾರ್ಥಿಗಳು ಬೆಳಿಗ್ಗೆ 9:00 ಗಂಟೆಗೆ ಮಹಾವಿದ್ಯಾಲಯಕ್ಕೆ ಹಾಜರಾದರು. ಈ ಕಾರ್ಯಕ್ರಮದ ಉದ್ದೇಶ ವಿದ್ಯಾರ್ಥಿಗಳನ್ನು ಮಹಾವಿದ್ಯಾಲಯದ ಶೈಕ್ಷಣಿಕ ಪರಿಸರ, ನಿಯಮಾವಳಿ, ಬೋಧಕ ಸಿಬ್ಬಂದಿ ಹಾಗೂ ಸೌಲಭ್ಯಗಳ ಪರಿಚಯಗೊಳಿಸುವುದು.
ಬೆಳಿಗ್ಗೆ
10:00 ಗಂಟೆಗೆ ಎಲ್ಲಾ ಗಣ್ಯರು ವೇದಿಕೆಗೆ ಆಗಮಿಸಿ, ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಕಾರ್ಯಕ್ರಮವನ್ನು ದ್ವಿತೀಯ ಸೆಮಿಸ್ಟರ್ ಬಿ.ಎಸ್ಸಿ. ನರ್ಸಿಂಗ್ ವಿದ್ಯಾರ್ಥಿನಿಯರಾದ
ಕುಮಾರಿ ಮಹಾಲಕ್ಷ್ಮಿ ಮತ್ತು
ಕುಮಾರಿ ಭವನಾ ಇವರು ಪ್ರಾರ್ಥನಾ
ಗೀತೆಯಿಂದ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಶ್ರೀ ಆಕಾಶ ಜಾಧವ್, ಸಹ ಪ್ರಾಧ್ಯಾಪಕರು,
ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಕಾರ್ಯಕ್ರಮವನ್ನು ವೃಕ್ಷಾರೋಪಣದ ಮೂಲಕ ಉದ್ಘಾಟಿಸಲಾಯಿತು,
ಇದು ಬೆಳವಣಿಗೆಯ
ಹಾಗೂ ಹೊಸ
ಆರಂಭದ ಸಂಕೇತವಾಗಿತ್ತು.
ಡಾ.
ಸಂತೋಷ
ಇಂಡಿ IQAC ಸಂಯೋಜಕರು
ಸಭೆಯಲ್ಲಿ
ಮಾತನಾಡುತ್ತಾ,
ನರ್ಸಿಂಗ್
ಒಂದು
ವೃತ್ತಿ
ಮಾತ್ರವಲ್ಲ,
ಇದು
ಕನಿಕರ,
ಸಮರ್ಪಣೆ
ಮತ್ತು
ವೃತ್ತಿಪರತೆಯನ್ನು
ಅಗತ್ಯವಿರುವ
ಪವಿತ್ರ
ಕರ್ತವ್ಯ
ಎಂದು
ವಿವರಿಸಿದರು.
ಇಂತಹ
ಗೌರವಾನ್ವಿತ
ಮತ್ತು
ಅವಶ್ಯಕವಾದ
ವೃತ್ತಿಯನ್ನು
ಆರಿಸಿಕೊಂಡಿದ್ದ
ವಿದ್ಯಾರ್ಥಿಗಳನ್ನು
ಅವರು
ಅಭಿನಂದಿಸಿದರು.
ಆಸ್ಪತ್ರೆಗಳು,
ಕ್ಲಿನಿಕ್ಗಳು
ಮತ್ತು
ಸಮುದಾಯ
ಆರೋಗ್ಯ
ಕೇಂದ್ರಗಳಲ್ಲಿ
ಕ್ವಾಲಿಫೈಡ್
ನರ್ಸುಗಳ
ಅಗತ್ಯತೆಯು
ದಿನನಿತ್ಯ
ಹೆಚ್ಚುತ್ತಿದೆ
ಎಂದು
ಹೇಳಿದರು.
ಪ್ರೊ. ಡಾ. ಪ್ರಕಾಶ್ ಸಿದ್ದಾಪುರ ಪ್ರಾಂಶುಪಾಲರು ಇಂದಿನ ಆರೋಗ್ಯ ಕ್ಷೇತ್ರದಲ್ಲಿ ನರ್ಸಿಂಗ್ ವೃತ್ತಿಯ ಮಹತ್ವ ಮತ್ತು ಅದರ ಪ್ರಭಾವವನ್ನು ವಿವರಿಸಿದರು. ನರ್ಸಿಂಗ್ ವೃತ್ತಿಯಲ್ಲಿ ಬೇಕಾದ ಬದ್ಧತೆ ಮತ್ತು ಪರಿಶ್ರಮವನ್ನು ಗುರುತಿಸಿ, ವಿದ್ಯಾರ್ಥಿಗಳು ನರ್ಸಿಂಗ್ ಆಯ್ಕೆ ಮಾಡಿಕೊಂಡ ನಿರ್ಧಾರಕ್ಕಾಗಿ ಪ್ರೋತ್ಸಾಹಿಸಿದರು. ಅವರು ವಿದ್ಯಾರ್ಥಿಗಳನ್ನು ತಮ್ಮ ಅಧ್ಯಯನಗಳಿಗೆ ತಾಳ್ಮೆಯಿಂದ ಮತ್ತು ಸಮರ್ಪಿತ ಮನೋಭಾವದಿಂದ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿ, ನರ್ಸಿಂಗ್ ಕೇವಲ ಉದ್ಯೋಗವಲ್ಲ, ಇದು ಕನಿಕರ, ಶಿಸ್ತಿನ ಮತ್ತು ಧೈರ್ಯದ ಅಗತ್ಯವಿರುವ ಪವಿತ್ರ ವೃತ್ತಿ ಎಂದು ನೆನಪಿಸಿದರು. ಜವಾಬ್ದಾರಿಗಳನ್ನು ಪ್ರಾಮಾಣಿಕತೆ ಹಾಗೂ ಶ್ರದ್ಧೆಯಿಂದ ನಿಭಾಯಿಸುವಂತೆ ಹಾಗೂ ಆರೈಕೆ ಮತ್ತು ನೈತಿಕತೆಯಲ್ಲಿ ಅತ್ಯುನ್ನತ ಮಟ್ಟವನ್ನು ಕಾಯ್ದುಕೊಳ್ಳುವಂತೆ ಹುರಿದುಂಬಿಸಿದರು. ನರ್ಸಿಂಗ್ ವೃತ್ತಿ ಜೀವನದ ಸಂಕೀರ್ಣತೆಗಳನ್ನು ಸ್ಪರ್ಶಿಸುವದು ಮಾತ್ರವಲ್ಲ, ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಮಾನಸಿಕ ಸಹಾಯ ಹಾಗೂ ಸಾಂತ್ವನ ನೀಡುವ ಕಾರ್ಯವನ್ನು ಕೂಡ ಒಳಗೊಂಡಿರುತ್ತದೆ ಎಂದು ಹೇಳಿದರು. ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಕೌಶಲ್ಯಗಳ ಜೊತೆಗೆ ಸಹಾನುಭೂತಿ ಮತ್ತು ಸಂವಹನ ಕೌಶಲ್ಯಗಳನ್ನು ವಿಕಸಿಸುವ ಮಹತ್ವವನ್ನು ಒತ್ತಿ ಹೇಳಿದರು. ಪ್ರೊ. ಡಾ. ಸಿದ್ದಾಪುರರ ಮಾತುಗಳು ವಿದ್ಯಾರ್ಥಿಗಳಲ್ಲಿ ಹೆಮ್ಮೆಯ ಭಾವನೆ ಮತ್ತು ಪ್ರೇರಣೆಯನ್ನು ಉಂಟುಮಾಡಿ, ಅವರ ಭವಿಷ್ಯದ ಹಾದಿಗೆ ಸಕಾರಾತ್ಮಕ ದಿಕ್ಕು ನೀಡಿತು ಎಂದು ವಿವರಿಸಿದರು.
ಮಧ್ಯಾಹ್ನ
12:00 ಗಂಟೆಗೆ ಶ್ರೀ ಇರಣ್ಣ ನಿಪ್ಪಾಣಿ, ಆರ್ಗೀಸ್ ಸಂಯೋಜಕರು, ಆರ್ಗೀಸ್ ಆ್ಯಪ್ ಪರಿಚಯ ನೀಡಿದರು. ಆರ್ಗೀಸ್ ವೇದಿಕೆಯ ಮಹತ್ವವನ್ನು ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಈ ಡಿಜಿಟಲ್ ಟೂಲ್
ನೀಡುವ ಸಹಾಯವನ್ನು ವಿವರಿಸಿದರು. ಈ ವೇದಿಕೆ ವಿದ್ಯಾರ್ಥಿಗಳಿಗೆ
ಹಾಜರಿ ದಾಖಲಿಸುವುದು, ಅಂತರಾವಧಿ ಪರೀಕ್ಷೆಗಳ ಕುರಿತು ಮಾಹಿತಿ, ಕಾರ್ಯಕ್ರಮಗಳ ನವೀಕರಣಗಳು ಮತ್ತು ಇತರೆ ಅಗತ್ಯ ಮಾಹಿತಿ ನೀಡುವಲ್ಲಿ ಪ್ರಮುಖವಾಗಿದೆ. ಆರ್ಗೀಸ್ ಆ್ಯಪ್ ಅನ್ನು ಸ್ಕ್ರೀನ್ ಮೂಲಕ ಇನ್ಸ್ಟಾಲ್ ಮಾಡುವ ವಿಧಾನ, ಲಾಗಿನ್ ಪ್ರಕ್ರಿಯೆ ಮತ್ತು ವೇದಿಕೆಯ ವಿವಿಧ ವೈಶಿಷ್ಟ್ಯಗಳನ್ನು ಧೃಡವಾಗಿ ವಿವರಿಸಿದರು. ಶಿಬಿರದ ಕೊನೆಯಲ್ಲಿ ಎಲ್ಲಾ ವಿದ್ಯಾರ್ಥಿಗಳೂ ತಮ್ಮ ಮೊಬೈಲ್ ಫೋನಿನಲ್ಲಿ ಆರ್ಗೀಸ್ ಆ್ಯಪ್ ಯಶಸ್ವಿಯಾಗಿ ಇನ್ಸ್ಟಾಲ್ ಮಾಡಿ, ಈ ಸೆಮಿಸ್ಟರ್ನಲ್ಲಿ
ನಿರಂತರ ಸಂಪರ್ಕ ಮತ್ತು ಮಾಹಿತಿ ಪಡೆಯಲು ಸಜ್ಜಾಗಿದ್ದರು.
ಮಧ್ಯಾಹ್ನ 2:00 ಗಂಟೆಗೆ, ಪ್ರಥಮ ಸೆಮಿಸ್ಟರ್ ತರಗತಿ ಸಂಯೋಜಕ ಶ್ರೀ ಪ್ರಶಾಂತ್ ಇಶ್ವರ್ ಅವರು ಕ್ಯಾಂಪಸ್ ಸೌಲಭ್ಯಗಳ ಸಮಗ್ರ ನಡೆಸಿದರು. ವಿದ್ಯಾರ್ಥಿಗಳಿಗೆ ನರ್ಸಿಂಗ್ ಫೌಂಡೇಶನ್
ಲ್ಯಾಬ್, ಅಡಲ್ಟ್ ಹೆಲ್ತ್
ನರ್ಸಿಂಗ್ ಲ್ಯಾಬ್,
AV ಏಡ್ಸ್ ಲ್ಯಾಬ್, ಮಟರ್ನಲ್,
ಚೈಲ್ಡ್
ಹೆಲ್ತ್ ನರ್ಸಿಂಗ್ ಲ್ಯಾಬ್
ಮತ್ತು ಪ್ರಿ ಕ್ಲಿನಿಕಲ್
ಸೈನ್ಸ್ ಲ್ಯಾಬಗಳನ್ನು ಪರಿಚಯಿಸಿದರು.
ಈ ದರ್ಶನವು ವಿದ್ಯಾರ್ಥಿಗಳಿಗೆ ನರ್ಸಿಂಗ್ ಶಿಕ್ಷಣಕ್ಕೆ
ಅಗತ್ಯವಾದ ಪ್ರಾಯೋಗಿಕ
ಕಲಿಕಾ ವಾತಾವರಣವನ್ನು ಪರಿಚಯಿಸುವಲ್ಲಿ ಸಹಾಯಮಾಡಿತು. ಲ್ಯಾಬ್ಗಳ ಜೊತೆಗೆ,
ಕಂಪ್ಯೂಟರ್ ಲ್ಯಾಬ್,
ಕಚೇರಿ ಮತ್ತು ಗ್ರಂಥಾಲಯವನ್ನು ಕೂಡ ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು.
ಈ ಮೂಲಕ
ವಿದ್ಯಾರ್ಥಿಗಳು ಲಭ್ಯವಿರುವ
ಸಂಪನ್ಮೂಲಗಳನ್ನು ಸಂಪೂರ್ಣವಾಗಿ
ಅರಿತುಕೊಂಡು, ಕ್ಯಾಂಪಸ್ನಲ್ಲಿ ಸುಗಮವಾಗಿ ಸಂಚರಿಸುವಲ್ಲಿ
ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಲಾಯಿತು.
ಮಧ್ಯಾಹ್ನ 3:00 ಗಂಟೆಗೆ, ಮಹಿಳಾ ವಿದ್ಯಾರ್ಥಿನಿಲಯ ಸಂಯೋಜಕಿ ಕೀರ್ತಿ ಹಳೆಮಣಿ, ಮಹಿಳಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯಗಳ ಪರಿಚಯ ಮತ್ತು ಮಹಿಳಾ ವಿದ್ಯಾರ್ಥಿನಿಲಯ ನಿವಾಸಿಗಳು
ಪಾಲಿಸಬೇಕಾದ ನಿಯಮಗಳು,
ಶಿಸ್ತಿನ ಮಹತ್ವ,
ಸುರಕ್ಷತೆ ಮತ್ತು
ಪರಸ್ಪರ ಗೌರವವನ್ನು ಒತ್ತಿ
ಹೇಳಿದರು. ಈ
ಸಭೆಯು ವಿದ್ಯಾರ್ಥಿಗಳು ಮಹಿಳಾ ವಿದ್ಯಾರ್ಥಿನಿಲಯ ಪರಿಸರದಲ್ಲಿ
ಸಮಾಧಾನಕರ ಮತ್ತು
ಸುರಕ್ಷಿತ ಜೀವನ
ನಡೆಸುವಂತೆ ನಿರೀಕ್ಷೆಗಳನ್ನು ಸ್ಪಷ್ಟಪಡಿಸುವಲ್ಲಿ ಮಹತ್ವದ್ದಾಗಿತ್ತು.
ಕ್ರೈಂ ಥ್ರಿಲ್ಲರ್ “ಕಲುಷ” ಟೀಸರ್ ಬಿಡುಗಡೆ ಇದೇ ಮಾರ್ಚ್ 23
ಕಲುಷ ಕನ್ನಡ ಚಲನಚಿತ್ರ
ಪಿಜಿ ವಿಭಾಗದಲ್ಲಿ ಸಂಶೋಧನಾ ವಿಷಯಕ್ಕೆ ಸಂಬಂಧಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮ
ಜಮಖಂಡಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಭ್ರಮ
ಸ್ವಚ್ಛತೆಯೇ ಆರೋಗ್ಯಕ್ಕೆ ಅಡಿಪಾಯ: ಸುನಿಲ್ ರಾಟೋಡ್
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಯಿತು
ಶಿಕ್ಷಕನಿಗೆ ಬಹುಮುಖದ ವ್ಯಕ್ತಿತ್ವ ಇರಬೇಕು
ಪ್ರಶಿಕ್ಷಣಾರ್ಥಿಗಳ ಕಾರ್ಯಗಾರ ಕಾರ್ಯಕ್ರಮ