by 31 on | 2025-11-01 13:30:55 Last Updated by 31 on2026-04-18 18:12:11
Share: Facebook | Twitter | Whatsapp | Linkedin | Visits: 191
ಬಿ. ಎಲ್. ಡಿ. ಇ. ಸಂಸ್ಥೆ ವಿಜಯಪುರದ ಜಲನಗರದಲ್ಲಿರುವ ಶ್ರೀ ಬಿ. ಎಂ ಪಾಟೀಲ್ ಪಬ್ಲಿಕ್ (ICSE) ಶಾಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ 70ನೆಯ ಕನ್ನಡ ರಾಜ್ಯೋತ್ಸವನ್ನು ಭವ್ಯವಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಗಣಾಧ್ಯಕ್ಷತೆಯನ್ನು ಶಾಲೆಯ ಪ್ರಾಚಾರ್ಯರಾದ ಶ್ರೀಯುತ ನವೀನ್ ಜಾರ್ಜ್ ಅವರು ವಹಿಸಿಕೊಂಡು ರಾಜ್ಯೋತ್ಸವದ ಕುರಿತು ಮಾತನಾಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶಾಲೆಯ ಹಿರಿಯ ಸಂಯೋಜಕರಾದ ಶ್ರೀಮತಿ ಜಯಾ ಗಲಗಲಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಮಕ್ಕಳು ನೃತ್ಯಗಳನ್ನು ಮಾಡುವುದರ ಮೂಲಕ ಎಲ್ಲರ ಮನಸ್ಸನ್ನು ಮುಧಗೊಳಿಸಿದರು. ಮಕ್ಕಳೊಂದಿಗೆ ಶ್ರೀಯುತ ಫಕೀರಪ್ಪ ಮೊರಬದ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಸ್ವಾಗತವನ್ನು ಶ್ರೀಯುತ ಸಂಗನಗೌಡ ಪಾಟೀಲ ಅವರು ನಿರ್ವಹಿಸಿದರು. ಶ್ರೀಯುತ ಮಂಜುನಾಥ್ ಪಾಟೀಲ ಅವರು ಕನ್ನಡ ಹಾಡು ನುಡಿಯ ಬಗ್ಗೆ ಹಾಗೂ ಗತ ಇತಿಹಾಸದ ಬಗ್ಗೆ ಸುಂದರವಾಗಿ ಮಾತನಾಡಿದರು. ಮಕ್ಕಳು ರಾಜ್ಯೋತ್ಸವ ಕುರಿತು ಮಾತನಾಡಿದರು ಜೊತೆಗೆ ಇಂದಿನ ಶುಭದಿನದ ವಿಶೇಷವಾದ ಶ್ರೀಯುತ ಬಿ ಎಂ ಪಾಟೀಲ್ ಸಾಹೇಬರ ಜನ್ಮ ದಿನಾಚರಣೆ ಇರುವುದರಿಂದ ಅವರ ಬಗ್ಗೆ ಶ್ರೀಮತಿ ಇಂದಿರಾ ಬಿದರಿ ಅವರು ಮಾತನಾಡಿದರು. ಕನ್ನಡ ನಾಡನ್ನು ಕುರಿತು ಮಕ್ಕಳು ಸುಂದರವಾಗಿ ಹಾಡಿದರು ಶಿಕ್ಷಕರು ಕೂಡ ಹಚ್ಚೇವು ಕನ್ನಡದ ದೀಪ ಶ್ರೀಮತಿ ಸುನಂದಾ ಘಾಟಿಗೆ ಅವರ ಸಹಯೋಗದಲ್ಲಿ ರಾಗಬದ್ಧವಾಗಿ ಹಾಡಿದರು. ಶ್ರೀಯುತ ರಾಹುಲ್ ಮಾನೆ ಅವರ ಸಹಯೋಗದಲ್ಲಿ ನೃತ್ಯ ಪ್ರದರ್ಶನ ಚೆನ್ನಾಗಿತ್ತು. ಶ್ರೀಯುತ ಸೋಮನಾಥ ಪಾಟೀಲ ಅವರ ಕೈ ಗರಡಿಯಲ್ಲಿ ಅರಳಿದ ಕರ್ನಾಟಕ ನಕ್ಷೆ ಹಾಗೂ ಕನ್ನಡಾಂಬೆ ಚಿತ್ರ ಎಲ್ಲರ ಗಮನ ಸೆಳೆಯಿತು. ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬಂದಿದ್ದು ಕಾರ್ಯಕ್ರಮದ ಶರಣ ಸಮರ್ಪಣೆಯನ್ನು ಶ್ರೀಮತಿ ಇಂದುಮತಿ ಬಿರಾದಾರ ಅವರು ನಿರ್ವಹಿಸಿದ್ದರು.
ಕ್ರೈಂ ಥ್ರಿಲ್ಲರ್ “ಕಲುಷ” ಟೀಸರ್ ಬಿಡುಗಡೆ ಇದೇ ಮಾರ್ಚ್ 23
ಕಲುಷ ಕನ್ನಡ ಚಲನಚಿತ್ರ
ಪಿಜಿ ವಿಭಾಗದಲ್ಲಿ ಸಂಶೋಧನಾ ವಿಷಯಕ್ಕೆ ಸಂಬಂಧಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮ
ಜಮಖಂಡಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಭ್ರಮ
ಸ್ವಚ್ಛತೆಯೇ ಆರೋಗ್ಯಕ್ಕೆ ಅಡಿಪಾಯ: ಸುನಿಲ್ ರಾಟೋಡ್
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಯಿತು
ಶಿಕ್ಷಕನಿಗೆ ಬಹುಮುಖದ ವ್ಯಕ್ತಿತ್ವ ಇರಬೇಕು
ಪ್ರಶಿಕ್ಷಣಾರ್ಥಿಗಳ ಕಾರ್ಯಗಾರ ಕಾರ್ಯಕ್ರಮ