ಕೈಯೊಡ್ಡಿ ಪ್ರಸಾದವ ಕೊಂಡಡೆ ಕರ್ಮಧಾರಿ. ಶೇಷಪ್ರಸಾದವನಾಯ್ದು ಕೊಂಡಡೆ ವರ್ಮಹೀನ. ಉಕ್ಕುಳಪ್ರಸಾದವ ಕೊಂಡಡೆ ಸತ್ಕ್ರೀಗೆ ಸಲ್ಲ. ಇಂತಿವನರಿದು ಸಜ್ಜನಪ್ರಸಾದವ ನಿರ್ಧರದಿಂದ ಕೊಂಬ ಮಹಾಪ್ರಸಾದಿಯ ಕಾರುಣ್ಯವೆನಗೆಂದಿಗೆ ಸಾಧ್ಯವಪ್ಪುದು ? ಕುಂಭೇಶ್ವರಲಿಂಗದಲ್ಲಿ ಜಗನ್ನಾಥವವರಿದವಂಗಲ್ಲದೆ ಸಾಧ್ಯವಲ್ಲ
ಶಿಕ್ಷಣ EDUCATION

ಅದ್ದೂರಿಯಾಗಿ ನಡೆದ ವಾರ್ಷಿಕ ಕ್ರೀಡಾಕೂಟ

by 31 on | 2025-12-15 18:41:56 Last Updated by 31 on2026-04-18 18:03:00

Share: Facebook | Twitter | Whatsapp | Linkedin | Visits: 126


ಅದ್ದೂರಿಯಾಗಿ ನಡೆದ ವಾರ್ಷಿಕ ಕ್ರೀಡಾಕೂಟ

ವಿಜಯಪುರ ಜಲನಗರದಲ್ಲಿರುವ ಶ್ರೀ ಬಿ ಎಂ ಪಾಟೀಲ್ ಪಬ್ಲಿಕ್ ಶಾಲೆಯಲ್ಲಿ ದಿನಾಂಕ 13 ಡಿಸೆಂಬರ 2025 ರಂದು ಕ್ರೀಡಾ ದಿನವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿಜಯಪುರ RTO ಆದ  ಶ್ರೀಯುತ ಜಯರಾಜ ಬೃಂಗಿಮಠ ಉದ್ಘಾಟಕರಾಗಿ ಆಗಮಿಸಿ ಕಾರ್ಯಕ್ರಮವನ್ನು ಬಲೂನ್ ಹಾರಿ ಬಿಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ಬರೀ ಕಲಿಕೆಯಷ್ಟೇ ಮುಖ್ಯ ಅಲ್ಲ. ಅದರ ಜೊತೆಗೆ ಕ್ರೀಡಾ ಚಟುವಟಿಕೆಗಳು ಕೂಡಾ ಮಹತ್ವ ಪೂರ್ಣವಾಗಿವೆ. ಜೀವನದಲ್ಲಿ ಕಷ್ಟ ಪಡಬೇಕು ಗುರುಗಳ ಪದತಲದಲ್ಲಿ ಕುಳಿತು ಶ್ರದ್ಧೆಯಿಂದ ಕಲಿಯಿರಿ ಮುಂದೆ ದೊಡ್ಡ ದೊಡ್ಡ ಹುದ್ದೆಯನ್ನು ಗಳಿಸಿಕೊಳ್ಳಲು ಸುಲಭವಾಗುತ್ತದೆ. ಎಂದು ಹೇಳುತ್ತಾ ನಮ್ಮ ಸ್ವರಕ್ಷಣೆಗಾಗಿ ಕರಾಟೆಯಂತಹ ಕ್ರೀಡೆಗಳನ್ನು ಕಲಿತು ನಿಮ್ಮ ರಕ್ಷಕರು ನೀವೇ ಆಗಿರಿ. ಎಂದು ಕರೆ ನೀಡಿದರು. ಬಿ ಎಲ್ ಡಿ ಇ ಸಂಸ್ಥೆಯ ದೈಹಿಕ ವಿಭಾಗದ ನಿರ್ದೇಶಕರಾದ ಶ್ರೀಯುತ. ಎಸ್ ಎಸ್ ಕೋರಿಯವರು ಮಾತನಾಡುತ್ತಾ ಸದೃಢ ಶರೀರದಲ್ಲಿ ಸದೃಢ ಮನಸ್ಸಿರುವುದು. ಅದಕ್ಕಾಗಿ ವ್ಯಾಯಾಮ ಅಂಗ ಸಾಧನೆಗಳು ಬಹಳ ಮುಖ್ಯ ಎಂದು ತಮ್ಮ ಭಾಷಣದಲ್ಲಿ ತಿಳಿಸಿದರು. ಸಹ ನಿರ್ದೇಶಕರಾದ ಶ್ರೀ ಕೈಲಾಸ ಹಿರೇಮಠ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  ಕ್ರೀಡೆಯಲ್ಲಿ ಗೆದ್ದಿರುವ ವಿದ್ಯಾರ್ಥಿಗಳಿಗೆ ಪಾರಿತೋಷಕವನ್ನು ವಿತರಿಸಲಾಯಿತು. ಮೈದಾನವು ಬಹಳ ಶಿಸ್ತು ಬದ್ಧವಾಗಿ ಕಾಣುತ್ತಿತ್ತು. ಶಾಲೆಯ ಅತ್ಯಂತ ಕ್ರಿಯಾಶೀಲ ವ್ಯಕ್ತಿಗಳಾದ ಹಾಗೂ ದೈಹಿಕ ಶಿಕ್ಷಣದ ಮುಖ್ಯಸ್ಥರಾದ. ಶ್ರೀ ಸಂಗಪ್ಪ ಆಲಮೇಲ ಅವರ ಮಾರ್ಗದರ್ಶನ ಹಾಗೂ ಶ್ರೀಮತಿ ಅಶ್ವಿನಿ ಕುಂದನಗೊಳ್ ಅವರ ಮಾರ್ಗದರ್ಶನದಲ್ಲಿ ಎಲ್ಲಾ ಕ್ರೀಡಾ ಚಟುವಟಿಕೆಗಳು ಕ್ರಮಬದ್ಧವಾಗಿ ಜರುಗಿದವು. ಈ ಶಾಲೆಯ ಪ್ರಾಚಾರ್ಯರಾದ  ಶ್ರೀ ನವೀನ ಜಾರ್ಜ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಹಿರಿಯ ಸಂಯೋಜಕರಾದ ಶ್ರೀಮತಿ ಜಯಾ ಗಲಗಲಿ ಹಾಗೂ ಶಾಲೆಯ ಎಲ್ಲ ಸಂಯೋಜಕರು, ಶಿಕ್ಷಕರು,  ಶಿಕ್ಷಕೇತರ ಸಿಬ್ಬಂದಿಯು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಹಾಗೂ ಕ್ರೀಡಾ ಪ್ರತಿನಿಧಿಗಳಾದ ಕುಮಾರ ಭೂಷಣ ನಂದಿಕೋಲ ಹಾಗೂ ಕುಮಾರಿ ಅನುಶ್ರೀ ಪಾಟೀಲ ಎಲ್ಲಾ ಕ್ರೀಡೆಗಳ  ಮುಂದಾಳತ್ವವನ್ನು ವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

Search
Popular News
Most Popular
ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಅಲೆನ್ ಕರಿಯರ್ ಅಕಾಡೆಮಿ ಮಧ್ಯೆ ಶೈಕ್ಷಣಿಕ ಓರಿಯಂಟೇಶನ್ ಕಾರ್ಯಕ್ರಮದ ಕ್ಷಣಗಳು.
Vachana Pitamaha P. G. Halakatti College of Engineering
Nursing College Jamkhandi
BLDEA Nursing College Vijayapura
Vachana Pitamaha P. G. Halakatti College of Engineering Vijayapura
ಡಾ ಫ ಗು ಹಳಕಟ್ಟಿ, ಬಂಥನಾಳ ಶಿವಯೋಗಿಗಳು, ಡಾ ಬಿ ಎಂ ಪಾಟೀಲ್ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆ ಕಾರ್ಯಕ್ರಮ

Leave a Comment