ಕೈಯೊಡ್ಡಿ ಪ್ರಸಾದವ ಕೊಂಡಡೆ ಕರ್ಮಧಾರಿ. ಶೇಷಪ್ರಸಾದವನಾಯ್ದು ಕೊಂಡಡೆ ವರ್ಮಹೀನ. ಉಕ್ಕುಳಪ್ರಸಾದವ ಕೊಂಡಡೆ ಸತ್ಕ್ರೀಗೆ ಸಲ್ಲ. ಇಂತಿವನರಿದು ಸಜ್ಜನಪ್ರಸಾದವ ನಿರ್ಧರದಿಂದ ಕೊಂಬ ಮಹಾಪ್ರಸಾದಿಯ ಕಾರುಣ್ಯವೆನಗೆಂದಿಗೆ ಸಾಧ್ಯವಪ್ಪುದು ? ಕುಂಭೇಶ್ವರಲಿಂಗದಲ್ಲಿ ಜಗನ್ನಾಥವವರಿದವಂಗಲ್ಲದೆ ಸಾಧ್ಯವಲ್ಲ
ಸುದ್ದಿ LOCAL NEWS

ಸಾವಿತ್ರಿಬಾಯಿಪುಲೆ ಅವರ ಜನ್ಮದಿನ ದಿನಾಚರಣೆಯ ಸಂಭ್ರಮ

by 20 on | 2026-01-04 09:20:12

Share: Facebook | Twitter | Whatsapp | Linkedin | Visits: 279


ಸಾವಿತ್ರಿಬಾಯಿಪುಲೆ ಅವರ ಜನ್ಮದಿನ ದಿನಾಚರಣೆಯ ಸಂಭ್ರಮ
ಜಮಖಂಡಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಾವಿತ್ರಿಬಾಯಿ ಪುಲೆ ಯವರ ಜನ್ಮದಿನಾಚರಣೆಯ ಸಂಭ್ರಮಾಚರಣೆ

ಅಕ್ಷರದವ್ವ, ಭಾರತದ ಮೊದಲ ಮಹಿಳಾ ಶಿಕ್ಷಕಿಯಾದ *ಸಾವಿತ್ರಿಬಾಯಿ ಪುಲೆ* ರವರ ಜನ್ಮದಿನಾಚರಣೆ


 ಪ್ರತಿಷ್ಟಿತ ಬಿ.ಎಲ್.ಡಿ.ಇ ಸಂಸ್ಥೆಯ ಜಮಖಂಡಿಯ ಶಿಕ್ಷಣ ಮಹಾವಿದ್ಯಾಲಯದ (ಬಿ.ಇಡಿ) ಜಮಖಂಡಿಯಲ್ಲಿ  ಅಕ್ಷರದವ್ವ, ಭಾರತದ ಮೊದಲ ಮಹಿಳಾ ಶಿಕ್ಷಕಿಯಾದ *ಸಾವಿತ್ರಿಬಾಯಿ ಪುಲೆ* ರವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. 

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಪ್ರೊ.ಪ್ರೇಮಾನಂದ ಹಿರೇಮಠ ರವರು ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಸಾವಿತ್ರಿ ಬಾಯಿ ಫುಲೆರವರು ಸ್ವಾತಂತ್ರ ಪೂರ್ವ ಅವಧಿಯಲ್ಲಿ ಸ್ತ್ರೀಯರ ಸ್ಥಾನಮಾನ ಶಿಕ್ಷಣ ಹಾಗೂ  ಸಮಾಜದಲ್ಲಿ ತುಂಬಿ ತುಳುಕುತ್ತಿದ್ದ ಅನಿಷ್ಟ ಪದ್ದತಿಗಳನ್ನು ಹೋಗಲಾಡಿಸಲು ಶ್ರಮಿಸಿದ ಮಹಿಳೆಯರಲ್ಲಿ ಅಗ್ರಗಣ್ಯ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ಸ್ಥಾನ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಕೆ.ಜೆ.ಜೀರಗಾಳಿ ಗುರುಗಳು ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಸಾವಿತ್ರಿಬಾಯಿ ಫುಲೆರವರ ಜೀವನ ಇಂದಿನ ಆಧುನಿಕ ಮಹಿಳೆಯರಿಗೆ ಸ್ಪೂರ್ತಿಯಾಗಿದೆ ಹಾಗೂ ಅವರು ಮಹಿಳೆಯರ ಅಭಿವೃದ್ಧಿಗೆ ಶ್ರಮಿಸಿದ ಕಾರ್ಯಗಳ ಕುರಿತು ಅಧ್ಯಕ್ಷತೆ ನುಡಿಗಳನ್ನು ಹೇಳಿದರು. ಪ್ರಶಿಕ್ಷಣಾರ್ಥಿಗಳಾದ ಸೃಜನಾ ಕಾಂಬಳೆ, ಶಿವಾನಂದ ಅವಟಿ ಅನಿಸಿಕೆ ವ್ಯಕ್ತಪಡಿಸಿದರು. ಶ್ರೇಯಾ ಚವ್ಹಾಣ ಪ್ರಾರ್ಥನೆ, ಸ್ವಾಗತ ಮತ್ತು ಪುಷ್ಪಾರ್ಪಣೆ ಪ್ರತಿಭಾ ಜಂಬಗಿ, ಮಾಳಿಂಗರಾಯ ರೇವಣ್ಣವರ  ಹಾಗು ಮೇಘಾ ಶಿರಗುಪ್ಪಿ ನಿರೂಪಣೆ,  ಶ್ರಾವಣ್ಯ ಆಸಂಗಿ ವಂದನಾರ್ಪಣೆ ಮಾಡಿದರು.

Search
Popular News
Most Popular
ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಅಲೆನ್ ಕರಿಯರ್ ಅಕಾಡೆಮಿ ಮಧ್ಯೆ ಶೈಕ್ಷಣಿಕ ಓರಿಯಂಟೇಶನ್ ಕಾರ್ಯಕ್ರಮದ ಕ್ಷಣಗಳು.
Vachana Pitamaha P. G. Halakatti College of Engineering
Nursing College Jamkhandi
BLDEA Nursing College Vijayapura
Vachana Pitamaha P. G. Halakatti College of Engineering Vijayapura
ಡಾ ಫ ಗು ಹಳಕಟ್ಟಿ, ಬಂಥನಾಳ ಶಿವಯೋಗಿಗಳು, ಡಾ ಬಿ ಎಂ ಪಾಟೀಲ್ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆ ಕಾರ್ಯಕ್ರಮ

Leave a Comment