ಕೈಯೊಡ್ಡಿ ಪ್ರಸಾದವ ಕೊಂಡಡೆ ಕರ್ಮಧಾರಿ. ಶೇಷಪ್ರಸಾದವನಾಯ್ದು ಕೊಂಡಡೆ ವರ್ಮಹೀನ. ಉಕ್ಕುಳಪ್ರಸಾದವ ಕೊಂಡಡೆ ಸತ್ಕ್ರೀಗೆ ಸಲ್ಲ. ಇಂತಿವನರಿದು ಸಜ್ಜನಪ್ರಸಾದವ ನಿರ್ಧರದಿಂದ ಕೊಂಬ ಮಹಾಪ್ರಸಾದಿಯ ಕಾರುಣ್ಯವೆನಗೆಂದಿಗೆ ಸಾಧ್ಯವಪ್ಪುದು ? ಕುಂಭೇಶ್ವರಲಿಂಗದಲ್ಲಿ ಜಗನ್ನಾಥವವರಿದವಂಗಲ್ಲದೆ ಸಾಧ್ಯವಲ್ಲ
ಸುದ್ದಿ LOCAL NEWS

ಪ್ರಶಿಕ್ಷಣಾರ್ಥಿಗಳ ನಿಕಟ ಸೇವಾ ತರಬೇತಿ ಶಿಬಿರದ ಸಮಾರೋಪ ಸಮಾರಂಭ

by 20 on | 2026-01-21 07:49:06

Share: Facebook | Twitter | Whatsapp | Linkedin | Visits: 269


ಪ್ರಶಿಕ್ಷಣಾರ್ಥಿಗಳ ನಿಕಟ ಸೇವಾ ತರಬೇತಿ ಶಿಬಿರದ ಸಮಾರೋಪ ಸಮಾರಂಭ
ಮುಖ್ಯ ಗುರುಗಳಾದ ಡಿ ವಿ ಲಮಾಣಿಯವರು ಮಾತನಾಡುತ್ತಿರುವುದು

*ಪ್ರಶಿಕ್ಷಣಾರ್ಥಿಗಳ  ನಿಕಟ ಸೇವಾ ತರಬೇತಿ ಶಿಬಿರದ ಸಮಾರೋಪ ಸಮಾರಂಭ*

ಜಮಖಂಡಿ: ಇಂದು ದಿನಾಂಕ 20-01=2026 ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ  ಕಡಪಟ್ಟಿಯಲ್ಲಿ ಬಿ.ಎಲ್. ಡಿ.ಇ. ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ) ಪ್ರಶಿಕ್ಷಣಾರ್ಥಿಗಳ  ನಿಕಟ ಸೇವಾ ತರಬೇತಿ  ಶಿಬಿರದ ಸಮಾರೋಪ ಸಮಾರಂಭವನ್ನು ಯಶಸ್ವಿಯಾಗಿ ಆಚರಿಸಲಾಯಿತು.

ಈ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾದ ಶ್ರೀ ಎನ್ ಬಿ ಮಾಳಿ ಗುರುಗಳು  ತರಬೇತಾರ್ಥಿಗಳಿಗೆ  ಅವರ ಕಠಿಣ ಪರಿಶ್ರಮ ಮತ್ತು ಕಲಿಕೆಯ ಉತ್ಸಾಹ, ತರಬೇತಿ ಅವಧಿಯಲ್ಲಿ ತರಬೇತಾರ್ಥಿಗಳು ತೋರಿದ ಬದ್ಧತೆ, ಮತ್ತು ಕಲಿಯುವಿಕೆಗೆ ನೀಡಿದ ಕೊಡುಗೆಯನ್ನು ಶ್ಲಾಘಿಸಿದರು. 

 ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳ ಮಾರ್ಗದರ್ಶಕರಾದ ಶ್ರೀ ಪ್ರೇಮಾನಂದ ಹಿರೇಮಠ ರವರು ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಶಿಕ್ಷಕ ವೃತ್ತಿ ಎಂದರೆ ಇದು ಕೇವಲ ನಿಂತ ನೀರಲ್ಲ, ಅದೇ ರೀತಿ ಶಿಕ್ಷಕನಾದವನು ಯಾವಾಗಲೂ ಅಭ್ಯಾಸದಲ್ಲಿ ನಿರತನಾಗಿರಬೇಕು. ಅಂದಾಗ ಮಾತ್ರ ನಿಜವಾದ ಶಿಕ್ಷಕನಾಗಲು ಸಾಧ್ಯ ಎಂದು ಹೇಳಿದರು. ಶ್ರೀ ಡಿ. ವಿ. ಲಮಾಣಿ ಗುರುಗಳು ಕಾರ್ಯಕ್ರಮದ ಅಧ್ಯಕ್ಷತೆ ನುಡಿಗಳನ್ನು ಹೇಳಿದರು. ಈ ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳು ಹಮ್ಮಿಕೊಂಡಿದ್ದ ಸಾಂಸ್ಕೃತಿಕ  ಕಾರ್ಯಕ್ರಮಗಳು ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ  ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ ಮಾಡಿದರು. ಸುಮಾರು 20 ದಿನಗಳ ಕಾಲ ನಡೆದ ನಿಕಟ ಸೇವಾ ತರಬೇತಿಯ ಕುರಿತು ವಿದ್ಯಾರ್ಥಿಗಳಾದ ಸಿಂಚನಾ ಕೋರಿಶೆಟ್ಟಿ, ಗೀತಾ ಧಾರಣಿ, ವರ್ಷ ಕಾಂಬಳೆ, ಸಹನಾ ಇಟ್ಟಿ ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕರಾದ  ವಿ. ಆರ್ ನಾಗನೂರು ಹಾಗೂ ಎಸ್. ಬಿ ಹುಲಿಕೇರಿ ಗುರುಗಳು ಮಾತನಾಡಿದರು.

 ಪ್ರಶಿಕ್ಷಣಾರ್ಥಿಗಳಾದ ಸಂಜನಾ ಬಾಡಗಿ ಪ್ರಾರ್ಥನೆ, ಪ್ರಿಯಾಂಕ ಚನಗುಂಡಿ ಸ್ವಾಗತ ಮತ್ತು ಪುಷ್ಪಾರ್ಪಣೆ, ಚನಗೌಡ ಬಿರಾದರ, ಪಲ್ಲವಿ ಹಂಚಿನಾಳ ಅನಿಸಿಕೆ,  ಸದಾಶಿವ ಕಲ್ಯಾಣಿ, ಮತ್ತು ವರ್ಷಾ ಶಿಂಗೆ ನಿರೂಪಣೆ, ರೂಪಾ ಕಂಕನವಾಡಿ ವಂದನಾರ್ಪಣೆ ಮಾಡಿದರು.

Search
Popular News
Most Popular
ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಅಲೆನ್ ಕರಿಯರ್ ಅಕಾಡೆಮಿ ಮಧ್ಯೆ ಶೈಕ್ಷಣಿಕ ಓರಿಯಂಟೇಶನ್ ಕಾರ್ಯಕ್ರಮದ ಕ್ಷಣಗಳು.
Vachana Pitamaha P. G. Halakatti College of Engineering
Nursing College Jamkhandi
BLDEA Nursing College Vijayapura
Vachana Pitamaha P. G. Halakatti College of Engineering Vijayapura
ಡಾ ಫ ಗು ಹಳಕಟ್ಟಿ, ಬಂಥನಾಳ ಶಿವಯೋಗಿಗಳು, ಡಾ ಬಿ ಎಂ ಪಾಟೀಲ್ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆ ಕಾರ್ಯಕ್ರಮ

Leave a Comment