by 1 on | 2024-03-04 15:49:42
Share: Facebook | Twitter | Whatsapp | Linkedin | Visits: 304
ಭಾರತದ ಪ್ರಜೆಗಳಿಗೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ಸಂವಿಧಾನದಲ್ಲಿ ನಮೂದಿಸಿದ್ದಾರೆ. ಅವುಗಳನ್ನು ತಲುಪಿಸುವ ನಿಟ್ಟಿನಲ್ಲಿ ಸರಕಾರ ಹಲವು ಕಾರ್ಯಕ್ರಮಗಳ ಮೂಲಕ ತಲುಪಿಸಲು ಮುಂದಾಗಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದರು.
ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರಲ್ಲಿ ನಿನ್ನೆ ರವಿವಾರ ನಡೆದ ಬಿ. ಆರ್. ಬನಸೋಡೆ ಅವರಿಂದ ರಚಿತ ‘ವಿಜಯಪುರದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ ಹೆಜ್ಜೆಗಳು’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ದೇಶಕ್ಕೆ ಶ್ರೇಷ್ಠ ಸಂವಿಧಾನವನ್ನು ನೀಡುವ ಮೂಲಕ ಅಂಬೇಡ್ಕರ ಅವರು ಜಗತ್ತಿನ ಅಗ್ರಗಣ್ಯ ನಾಯಕರಾಗಿದ್ದಾರೆ. ಅವರು ಕೇವಲ ದಲಿತರಿಗೆ ಶಕ್ತಿಯಾಗಿದ್ದರಷ್ಟೆ ಅಲ್ಲದೇ, ತುಳಿತಕ್ಕೊಳಗಾದ, ಶೋಷಣೆಗೀಡಾದ ಮತ್ತು ಅಸಮಾನತೆಯನ್ನು ಎದುರಿಸುತ್ತಿರುವ ಎಲ್ಲ ಸಮುದಾಯಗಳಿಗೆ ಶಕ್ತಿಯಾಗಿದ್ದರು. ಡಾ. ಅಂಬೇಡ್ಕರ ಅವರ ಚಿಂತನೆಗಳ ಬಗ್ಗೆ ನೈಜ ಚಿಂತನೆಗಳು ವಿದ್ಯಾರ್ಥಿಗಳಿಗೆ ತಿಳಿಯಬೇಕು ಎಂದರು.
ಡಾ.ಬಿ.ಆರ್.ಅಂಬೇಡ್ಕರ ಅವರು ಬಸವಾದಿ ಶರಣರ ಅನುಭವ ಮಂಟಪದ ಪರಿಕಲ್ಪನೆ ಅಂಶಗಳನ್ನು ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಬಸವಣ್ಣನವರು ಬೇರೆಯಲ್ಲ. ಅಂಬೇಡ್ಕರ್ ಬೇರೆಯಲ್ಲ. ಬೇರೆ ದೇಶಗಳಲ್ಲಿ ಮತದಾನದಲ್ಲೂ ತಾರತಮ್ಯವಿತ್ತು. ಆದರೆ, ಅಂಬೇಡ್ಕರ್ ಅವರು ಎಲ್ಲರಿಗೂ ಒಂದೇ ಮತ ಜಾರಿ ಮಾಡುವ ಮೂಲಕ ಸಮಾನತೆ ಸಾರಿದ್ದಾರೆ. ಸಂವಿಧಾನಕ್ಕಿಂತ ಶ್ರೇಷ್ಠ ಯಾರೂ ಇಲ್ಲ. ಸಂವಿಧಾನ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಸಂವಿಧಾನ ತಿರುಚುವ, ಮಾರ್ಪಡಿಸುವ ಧೈರ್ಯ ಯಾರಿಗೂ ಬರಬಾರದು. ಅದಕ್ಕೆ ಯಾರೂ ಕೈಹಾಕಬಾರದು. ಸಂವಿಧಾನವನ್ನು ತಿರುಚುವ ಶಕ್ತಿಗಳನ್ನು ನಾವು ವಿರೋಧಿಸುತ್ತೇನೆ ಎಂದು ಅವರು ಹೇಳಿದರು.
ಅಂಬೇಡ್ಕರ್ ಅವರು ವಿಜಯಪುರ ಭೇಟಿಯ ಕುರಿತು ಹೆಜ್ಜೆ ಗುರುತುಗಳನ್ನು ಪುಸ್ತಕದಲ್ಲಿ ದಾಖಲಿಸಿರುವ ಲೇಖಕ ಬಿ. ಆರ್. ಬನಸೋಡೆ ಉತ್ತಮ ಕೆಲಸ ಮಾಡಿದ್ದಾರೆ. ಅಂಬೇಡ್ಕರ್ ಅವರು ವಿಜಯಪುರ ನಗರದ ರಾಣಿ ಬಗೀಚ್ ಪ್ರದೇಶಕ್ಕೂ ಬಂದು ಭಾಷಣ ಮಾಡಿದ್ದರು. ಬನಸೋಡೆ ದಂಪತಿಗೆ ಒಳಿತಾಗಲಿ. ಅವರಿಂದ ಇನ್ನೂ ಹೆಚ್ಚಿನ ಕೃತಿಗಳು ಹೊರ ಬರಲಿ. ಅಂಬೇಡ್ಕರ್ ಅವರ ಚಿಂತನೆಗಳು ಜನರಿಗೆ ತಲುಪುವ ಕೆಲಸವಾಗಲಿ ಎಂದು ಸಚಿವರು ಶುಭ ಹಾರೈಸಿದರು.
ವಿಜಯಪುರ ಜಿಲ್ಲಾ ಕ್ರೀಡಾಂಗಣಕ್ಕೆ ಡಾ. ಬಿ. ಆರ್. ಅಂಬೇಡ್ಕರ್ ನಾಮಕರಣ ಮಾಡಿ ಅಭಿವೃದ್ಧಿ ಪಡಿಸಲು ತಾವು ಈ ಹಿಂದೆ ಮಾಡಿರುವ ಸಹಾಯ ಮಾಡಿದ್ದನ್ನು ಸ್ಮರಿಸಿದ ಸಚಿವರು, ಜಿಲ್ಲಾ ಕ್ರೀಡಾಂಗಣಕ್ಕೆ ಅಂಬೇಡ್ಕರ್ ಹೆಸರಿಲು ನಿರ್ಧರಿಸಿದಾಗ ನಾನೇ ಮೊದಲು ಸ್ವಾಗತಿಸಿದ್ದೆ. ಸಂವಿಧಾನ ಶಿಲ್ಪಿಯ ಬಗ್ಗೆ ನಮ್ಮ ಕುಟುಂಬ ಹೊಂದಿರುವ ಗೌರವಕ್ಕೆ ಇದಕ್ಕೆ ಕಾರಣ. ಜಲಸಂಪನ್ಮೂಲ ಸಚಿವನಾಗಿದ್ದಾಗ ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಅಳವಡಿಕೆ ಮತ್ತು ಈಜುಕೊಳ ನಿರ್ಮಿಸಲು ಹಾಗೂ ಅಂಬೇಡ್ಕರ್ ಸರ್ಕಲ್ ನವೀಕರಣಕ್ಕೆ ಅನುದಾನ ನೀಡಿದ್ದೇನೆ. ಅμÉ್ಟೀ ಅಲ್ಲ, ಈ ಹಿಂದೆ 2013-18ರ ಅವಧಿಯಲ್ಲಿ ಅಂದಿನ ಸಿಎಂ ಎಸ್. ಸಿದ್ಧರಾಮಯ್ಯ ಪರಿಶಿಷ್ಠರಿಗಾಗಿ ಎಸ್.ಸಿ.ಪಿ. ಟಿಎಸ್ಪಿಯಲ್ಲಿ 24% ಹಣ ಅಂದರೆ ರೂ. 30 ಸಾವಿರ ಕೋಟಿ ಅನುದಾನ ಮೀಸಲಿಟ್ಟಿದ್ದರು. ಅದಕ್ಕೂ ಮುಂಚೆ ಕೇವಲ ರೂ. ಮೂರ್ನಾಲ್ಕು ಸಾವಿರ ಕೋಟಿ ಮಾತ್ರ ಅನುದಾನ ನೀಡಲಾಗುತ್ತಿತ್ತು. ಈಗ ನಮ್ಮ ಸರಕಾರ ನಾನಾ ಕಾರ್ಯಕ್ರಮಗಳನ್ನು ಆಯೋಜಿಸುವ ಅಂಬೇಡ್ಕರ ಬಗ್ಗೆ ಇನ್ನೂ ಹೆಚ್ಚಿನ ಚಿಂತನೆಗಳನ್ನು ಜನರಿಗೆ ತಲುಪಿಸಲು ಪೆÇ್ರೀತ್ಸಾಹ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಕ್ರೈಂ ಥ್ರಿಲ್ಲರ್ “ಕಲುಷ” ಟೀಸರ್ ಬಿಡುಗಡೆ ಇದೇ ಮಾರ್ಚ್ 23
ಕಲುಷ ಕನ್ನಡ ಚಲನಚಿತ್ರ
ಪಿಜಿ ವಿಭಾಗದಲ್ಲಿ ಸಂಶೋಧನಾ ವಿಷಯಕ್ಕೆ ಸಂಬಂಧಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮ
ಜಮಖಂಡಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಭ್ರಮ
ಸ್ವಚ್ಛತೆಯೇ ಆರೋಗ್ಯಕ್ಕೆ ಅಡಿಪಾಯ: ಸುನಿಲ್ ರಾಟೋಡ್
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಯಿತು
ಶಿಕ್ಷಕನಿಗೆ ಬಹುಮುಖದ ವ್ಯಕ್ತಿತ್ವ ಇರಬೇಕು
ಪ್ರಶಿಕ್ಷಣಾರ್ಥಿಗಳ ಕಾರ್ಯಗಾರ ಕಾರ್ಯಕ್ರಮ