ಕೈಯೊಡ್ಡಿ ಪ್ರಸಾದವ ಕೊಂಡಡೆ ಕರ್ಮಧಾರಿ. ಶೇಷಪ್ರಸಾದವನಾಯ್ದು ಕೊಂಡಡೆ ವರ್ಮಹೀನ. ಉಕ್ಕುಳಪ್ರಸಾದವ ಕೊಂಡಡೆ ಸತ್ಕ್ರೀಗೆ ಸಲ್ಲ. ಇಂತಿವನರಿದು ಸಜ್ಜನಪ್ರಸಾದವ ನಿರ್ಧರದಿಂದ ಕೊಂಬ ಮಹಾಪ್ರಸಾದಿಯ ಕಾರುಣ್ಯವೆನಗೆಂದಿಗೆ ಸಾಧ್ಯವಪ್ಪುದು ? ಕುಂಭೇಶ್ವರಲಿಂಗದಲ್ಲಿ ಜಗನ್ನಾಥವವರಿದವಂಗಲ್ಲದೆ ಸಾಧ್ಯವಲ್ಲ
ಲೇಖನಗಳು ARTICALS

ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ, ಮೊಬೈಲ್ ಕರೆನ್ಸಿ ದರ ಏರಿಕೆ.

by 1 on | 2024-06-28 18:23:23

Share: Facebook | Twitter | Whatsapp | Linkedin | Visits: 250


ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ, ಮೊಬೈಲ್ ಕರೆನ್ಸಿ ದರ ಏರಿಕೆ.

ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ, ಮೊಬೈಲ್ ಕರೆನ್ಸಿ ದರ ಏರಿಕೆ.

ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡತ್ತಲೇ ತಮ್ಮ-ತಮ್ಮ ಅವಧಿಯಲ್ಲಿ ಏನಾದರೂ ಒಂದು ಕಾರಣ ನೀಡುತ್ತಾ ರಾಜ್ಯ ಸರ್ಕಾರಗಳು ಸುಮ್ಮನಾಗುತ್ತಿವೆ. ಆದರೆ, ಇತ್ತಿಚೇಗೆ ಪತ್ರಿಕೆಯಲ್ಲಿ ಮೊಬೈಲ್ ಕರೆನ್ಸಿ ದರ ಶೇ.12-ರಿಂದ 27ರವರೆಗೆ ಹೆಚ್ಚು ಮಾಡಲಾಗುವುದು ಎಂದು ಪ್ರಕಟವಾಗಿತ್ತು. ಈ ಕುರಿತು ಏಕೆ ಎಲ್ಲೂ ಚರ್ಚೆ ಆಗುತ್ತಿಲ್ಲ? ಅಗತ್ಯ ವಸ್ತುಗಳಲ್ಲಿಯೇ ಮೊಬೈಲ್ ಬಳಕೆಯು ಒಂದಾಗಿದ್ದು, ಸಾಮಾನ್ಯ ಜನರು ಕೂಡ ಬಳಸದೆ ಇರುವುದು ಎಲ್ಲೂ ಇಲ್ಲ. ಆದರೂ ಏಕೆ ಸುಮ್ಮನಿರುವುದು?

ಹಾಲಿನ ದರ, ಪೆಟ್ರೋಲ್ ಮತ್ತು ಡಿಸೆಲ್ ದರ ಏರಿಕೆ ಆಗಿದೆ ಎಂಬುದನ್ನೇ ಮಾತನಾಡುತ್ತಿರುವ ಮಾಧ್ಯಮಗಳು, ಒಂದು ನಿಮಿಷ ಕೂಡ ಮೊಬೈಲ್ ಇಲ್ಲದೇ ಇರದ ಇಂದಿನ ಸಮಯದಲ್ಲಿ ಜಿಯೋ ತನ್ನ ಕರೆನ್ಸಿ ದರವನ್ನು 84 ದಿನಗಳಿಗೆ ರೂ.666 ಇದ್ದ ದರವನ್ನು ರೂ.799ಗಳಿಗೆ ಹೆಚ್ಚಿಸುತ್ತಿದೆ. ಇದಕ್ಕೆ ಯಾರಿಂದಲೂ ಪ್ರತಿಕ್ರಿಯೆ ಇಲ್ಲವಾಗಿದ್ದು ನೋಡಿದರೆ ಜಿಯೋ ಕಂಪನಿ ದರದಲ್ಲಿ ಬದಲಾವಣೆ ಮಾಡಿದ್ದು ಸರಿ ಎಂದುಕೊಂಡೆ ಸುಮ್ಮನಿದ್ದಾರೆ ಎನಿಸುತ್ತದೆ.
ಜಿಯೋ ಟೆಲಿಕಾಂ ಸಂಸ್ಥೆ ತನ್ನ ಮೊಬೈಲ್  ಸೇವೆಗಳ ಮೇಲಿನ ದರವನ್ನು ಶೇ.12ರಿಂದ ಶೇ.27 ರಷ್ಟು ಏರಿಕೆ ಮಾಡಿದೆ ಎಂದು ಸಂಸ್ಥೆ ಅಧ್ಯಕ್ಷ ಆಕಾಶ್ ಅಂಬಾನಿ ತಿಳಿಸಿದ್ದಾರೆ. ಜಿಯೋನ ಎಲ್ಲ ಪ್ಲಾನ್‌ ದರಗಳನ್ನು ಏರಿಸಲಾಗಿದೆ. ಜು.3ರಿಂದ ಪರಿಷ್ಕೃತ ದರ ಅನ್ವಯವಾಗಲಿದೆ. ಅದರಂತೆ 1 ಜಿಬಿ ಡೇಟಾ 15 ರೂ.ನಿಂದ 19ರೂ.ಗೆ ಏರಿಸಲಾಗಿದೆ. 399ರೂ.ನ 75 ಜಿಬಿ ಪೋಸ್ಟ್‌ಪೇಯ್ಡ್ ಪ್ಲಾನ್ ಬೆಲೆ 449 ರೂ.ಗೆ, 666 ರೂ.ನ 84 ದಿನಗಳ ಅನ್‌ ಲಿಮಿಟೆಡ್ ಪ್ಯಾನ್ 799ರೂ.ಗೆ, ವಾರ್ಷಿಕ 0555 1,559. 25 1,899. 2,999ರೂ.ನಿಂದ 3,599ರೂ.ಗೆ ಏರಿಸಲಾಗಿದೆ.
ದುಡ್ಡಿದ್ದವರಿಗೆ ಯಾವ ವಸ್ತುವಿನ ಬೆಲೆ ಏರಿಸಿದರೇನೂ, ಹೊಂದಾಣಿಕೆ ಮಾಡುತ್ತಲೇ ಅವರ ನಿತ್ಯದ ಕಾರ್ಯದಲ್ಲಿ ತೊಡಗುತ್ತಾರೆ. ಆದರೆ, ದಿನಗೂಲಿ ಮಾಡುವವರು, ಮಧ್ಯಮ ವರ್ಗದವರಿಗೆ ಬೆಲೆ ಏರಿಕೆ ಬಿಸಿ ತಾಗುವದು ಇವರಿಗೆ ಮಾತ್ರ. ಈ ಕುರಿತು ಏಕೆ ಚರ್ಚೆ ನಡೆಯುವುದಿಲ್ಲ? ರಾಜಕೀಯ ಪಕ್ಷಗಳಾಗಲಿ, ಜನರಾಗಲಿ, ಮಾಧ್ಯಮದಲ್ಲಾಗಲಿ ಈ ಕುರಿತು ಏಕೆ ಧ್ವನಿ ಎತ್ತುತ್ತಿಲ್ಲ? ಎಂಬುದೆ ವಿಪರ್ಯಾಸವೇ ಸರಿ.

Search
Popular News
Most Popular
ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಅಲೆನ್ ಕರಿಯರ್ ಅಕಾಡೆಮಿ ಮಧ್ಯೆ ಶೈಕ್ಷಣಿಕ ಓರಿಯಂಟೇಶನ್ ಕಾರ್ಯಕ್ರಮದ ಕ್ಷಣಗಳು.
Vachana Pitamaha P. G. Halakatti College of Engineering
Nursing College Jamkhandi
BLDEA Nursing College Vijayapura
Vachana Pitamaha P. G. Halakatti College of Engineering Vijayapura
ಡಾ ಫ ಗು ಹಳಕಟ್ಟಿ, ಬಂಥನಾಳ ಶಿವಯೋಗಿಗಳು, ಡಾ ಬಿ ಎಂ ಪಾಟೀಲ್ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆ ಕಾರ್ಯಕ್ರಮ

Leave a Comment