ಕೈಯೊಡ್ಡಿ ಪ್ರಸಾದವ ಕೊಂಡಡೆ ಕರ್ಮಧಾರಿ. ಶೇಷಪ್ರಸಾದವನಾಯ್ದು ಕೊಂಡಡೆ ವರ್ಮಹೀನ. ಉಕ್ಕುಳಪ್ರಸಾದವ ಕೊಂಡಡೆ ಸತ್ಕ್ರೀಗೆ ಸಲ್ಲ. ಇಂತಿವನರಿದು ಸಜ್ಜನಪ್ರಸಾದವ ನಿರ್ಧರದಿಂದ ಕೊಂಬ ಮಹಾಪ್ರಸಾದಿಯ ಕಾರುಣ್ಯವೆನಗೆಂದಿಗೆ ಸಾಧ್ಯವಪ್ಪುದು ? ಕುಂಭೇಶ್ವರಲಿಂಗದಲ್ಲಿ ಜಗನ್ನಾಥವವರಿದವಂಗಲ್ಲದೆ ಸಾಧ್ಯವಲ್ಲ
ಲೇಖನಗಳು ARTICALS

ರಾಷ್ಟ್ರೀಯ ವಿದ್ಯಾರ್ಥಿ ದಿನ ವಿದ್ಯಾರ್ಥಿ ಶಕ್ತಿ ರಾಷ್ಟ್ರ ಶಕ್ತಿ

by 1 on | 2024-07-09 20:46:26

Share: Facebook | Twitter | Whatsapp | Linkedin | Visits: 321


ರಾಷ್ಟ್ರೀಯ ವಿದ್ಯಾರ್ಥಿ ದಿನ  ವಿದ್ಯಾರ್ಥಿ ಶಕ್ತಿ ರಾಷ್ಟ್ರ ಶಕ್ತಿ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸ್ಥಾಪನೆಯಾಗಿ ೭೬ನೇ ವರ್ಷದ ಸಂಭ್ರಮದಲ್ಲಿದೆ ಇಂದು ಸರಿಯಾಗಿ ೧೯೪೯ ಜುಲೈ ೯ ರಂದು ಸ್ಥಾಪಿತವಾದ ಸಂಘಟನೆ ಇಂದು ಹೆಮ್ಮೆರವಾಗಿ ಬೆಳೆದು ನಿಂತಿದೆ ಕೇವಲ ಭಾರತ ಮಾತ್ರವಲ್ಲದೆ ವಿಶ್ವದ ಅತಿ ದೊಡ್ಡ ವಿದ್ಯಾರ್ಥಿ ಸಂಘಟನೆಯಾಗಿ ತನ್ನ ಶಕ್ತಿಯನ್ನು ಎಲ್ಲೆಡೆಯಲ್ಲೂ ಚಾಚಿದೆ ದಾಸ್ಯದ ಸಂಕೋಲನೆಯನ್ನು ಎಸೆದು ನಮ್ಮ ದೇಶದ ವಿದ್ಯಾರ್ಥಿಗಳನ್ನು ಹಾಗೂ ಯುವಕರನ್ನು ಸದೃಢವನ್ನಾಗಿ ಮಾಡುವುದರ ಜೋತೆಗೆ ಅದರಲ್ಲಿ ದೇಶಭಕ್ತಿಯ ಕಿಚ್ಚನ್ನು ಮೂಡಿಸುವುದರ ಮೂಲಕ ದೇಶದ ಸಮಗ್ರತೆಗೆ ಅಭಿವೃದ್ಧಿಗೆ ಏಕತೆಗೆ ಕಂಕಣಭದ್ಧರಾಗಿ ನಿಲ್ಲಬೇಕೆಂಬ ವಿಶ್ವಾಸದೊಂದಿಗೆ ಪ್ರತಿಯೊಂದು ಊರಿನ ಕಾಲೇಜು ಕ್ಯಾಂಪಸ್ ಗಳಲ್ಲಿ ಕೂಡ ದೇಶಭಕ್ತಿಯ ವಾತಾವರಣವನ್ನು ಮೂಡಿಸ ಬೇಕೆಂಬ ಛಲದಿಂದ ಸತತ ೭೬ ವರ್ಷಗಳಿಂದಲೂ ನಿರಂತರ ಹೋರಾಟವನ್ನು ಅನೇಕ ಬದಲಾವಣೆಯನ್ನು ತರುವುದರ ಮೂಲಕ ವಿದ್ಯಾರ್ಥಿ ಪರಿಷತ್ತು ಮಾದರಿ ಸಂಘಟನೆಯಾಗಿ ಜನರ ನಡುವೆ ಮನೆಮಾತಾಗಿ ಅವರ ಸಮಸ್ಯೆಗಳಿಗೆ ಧ್ವನಿಯಾಗಿ ನಿಂತಿರುವ ಏಕೈಕ ಸಂಘಟನೆಯಾಗಿದ್ದು ಅದರ ಬೇರುಗಳು ಗಟ್ಟಿಯಾಗಿ ಭಾರತದ ಎಲ್ಲಾ ಮೂಲೆಗಳಲ್ಲಿಯೂ ಬೇರೂರಿವೆ.

 ಸ್ವಾಮಿ ವಿವೇಕಾನಂದ ಆದರ್ಶಗಳನ್ನು ಮುಖ್ಯ ವಿಷಯಗಳನ್ನಾಗಿ ಇಟ್ಟುಕೊಂಡು ಯುವಕರಲ್ಲಿ ನೈತಿಕತೆಯ ಶಕ್ತಿಯನ್ನು ತುಂಬುವುದರ ಮೂಲಕ ಅವರನ್ನು ಸ್ವಾವಲಂಬಿ ಹಾಗೂ ಸದೃಢ ಶಕ್ತಿಗಳನ್ನಾಗಿ ರೂಪಿಸುವ ಹಾಗೂ ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕೆಂಬ ಮಹತ್ವಾಕಾಂಕ್ಷೆಯಿAದ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ನಿರ್ಮಾಣವನ್ನು ರೂಪಿಸಿದರು ಮೂಲಕ ದೇಶದ ಪುನರ್ ನಿರ್ಮಾಣ ಎಂಬ ಸಂಕಲ್ಪದೊAದಿಗೆ ಮೊದಲಿನ ಐತಿಹಾಸಿಕ ಭಾರತವನ್ನು ಪುನರ್ ನಿರ್ಮಾಣವನ್ನು ಮಾಡುವುದಾಗಿದೆ ಇಂದಿನ ಯುವಕರು ಇಂದಿನ ನಾಗರಿಕರು ಎಂಬ ಧ್ಯೇಯ ವಾಕ್ಯದೊಂದಿಗೆ ಅವರನ್ನು ಶಕ್ತಿಶಾಲಿಗಳನ್ನಾಗಿ ಮಾಡುದಾಗಿದೆ ಹಾಗಾಗಿ ಪ್ರತೀ ಕಾಲೇಜುಗಳಲ್ಲಿ ವಿವೇಕಾನಂದರ ಆದರ್ಶಗಳನ್ನು ವಿದ್ಯಾರ್ಥಿ ಪರಿಷತ್ ತೆಗೆದುಕೊಂಡು ಹೋಗುತ್ತಿದೆ ವಿವೇಕಾನಂದರ ವ್ಯಕ್ತಿತ್ವದ ಹಾಗೆಯೇ ನಮ್ಮ ದೇಶದಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿಯು ಕೂಡ ಅವರ ಘನತೆಗಳನ್ನು ಆದರ್ಶಗಳನ್ನ ಮೈಗೂಡಿಸಿಕೊಳ್ಳುವ ಮೂಲಕ ಭಾರತದ ಏಳಿಗೆಗಾಗಿ ಶ್ರಮಿಸಬೇಕು ಎಂಬುದು ಸಂಘಟನೆಯ ಸದಾಶಯವಾಗಿದೆ

 ವಿದ್ಯಾರ್ಥಿ ಪರಿಷತ್ ನ ನಿರಂತರ ಹೋರಾಟ ಮತ್ತು ಪರಿಶ್ರಮದ ಕಾರ್ಯ 

 ಸ್ವಾತಂತ್ರ ನಂತರದ ಭಾರತದ ಅನೇಕ ಸವಾಲುಗಳು ಎದುರಾಗಿದ್ದ ಸಮಯದಲ್ಲಿ ಅಂದಿನಿAದಲೂ ಅವುಗಳಿಗಾಗಿ ತಮ್ಮ ಪೂರ್ಣ ಪ್ರಮಾಣದ ಸಮಯವನ್ನ ನೀಡುವದರ ಮೂಲಕ ದೇಶದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ವಿದ್ಯಾರ್ಥಿ ಪರಿಷತ್ತು ಹೋರಾಟ ಮಾಡಿದೆ , ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಂದಿನ ಸಾವಿರಾರು ವಿದ್ಯಾರ್ಥಿಗಳು ಹಾಗೂ ಯುವ ಮುಖಂಡರುಗಳು ಸೆರೆವಾಸವನ್ನ ಅನುಭವಿಸಿದ್ದಾರೆ ಅನೇಕರು ಪ್ರಾಣಗಳು ಸಹ ದೇಶದ ಮಣ್ಣಿಗಾಗಿ ತ್ಯಾಗವಾಗಿದೆ ಅಂತಹ ಕಠಿಣ ಪರಿಸ್ಥಿತಿಯಲ್ಲೂ ಎದೆಗುಂದದೆ ಹೋರಾಡಿದಂತಹ ಕೀರ್ತಿ ವಿದ್ಯಾರ್ಥಿ ಪರಿಷತ್ ನ ಕಾರ್ಯಕರ್ತರಿಗೆ ಸಲ್ಲುತ್ತದೆ ಅಂತಹ ಕಠಿಣ ಸಮಯಗಳಲ್ಲಿಯೂ ಹೋರಾಡಿದ ಪರಿಣಾಮದಿಂದಾಗಿಯೇ ಇಂದಿಗೂ ಸಹ ವಿದ್ಯಾರ್ಥಿ ಪರಿಷತ್ ಬಲಿಷ್ಠ ಸಂಘಟನೆಯಾಗಿ ಹೊರಹೊಮ್ಮಿ ಹೆಮ್ಮರವಾಗಿ ಬೆಳೆದು ನಿಂತಿದೆ . ಸ್ವತಂತ್ರ ನಂತರ ಭಾರತದಲ್ಲಿ ಎಲ್ಲ ಯುವಕರನ್ನ ವಿದ್ಯಾರ್ಥಿಗಳನ್ನು ಒಂದುಗೂಡಿಸಿ ದೇಶದ ಐಕ್ಯತೆಗಾಗಿ ಏಕತೆಗಾಗಿ ಸದಾ ಅವರನ್ನ ಒಂದುಗೂಡಿಸುತ್ತಾ ದೇಶದ ವಿಚಾರಗಳನ್ನು ಅವರಿಗೆ ಹೇಳುವುದರ ಮೂಲಕ ಅವರಿಗೆ ಪ್ರೇರಕ ಶಕ್ತಿಯಾಗಿ ನಿಂತಿದ್ದೆ ವಿದ್ಯಾರ್ಥಿ ಪರಿಷತ್ತು 

 ಭಯೋತ್ಪಾದಕರಿಗೆ ಸವಾಲು 

 ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಹಾಗೂ ಭಾರತದ ಕಿರೀಟ ಎಂದು ಭಾರತೀಯರೆಲ್ಲರೂ ಸಂಭ್ರಮಿಸಬೇಕಾದAತ ಸಮಯದಲ್ಲಿ ಕಾಶ್ಮೀರದ ಮೂಲಭೂತವಾದಿಗಳು ಹಾಗೂ ಭಯೋತ್ಪಾದಕರು ಹೊ ಭಾರತೀಯರಿಗೆ ಭಯವನ್ನು ಹುಟ್ಟಿಸುವಂತಹ ವಾತಾವರಣವನ್ನು ಅನಾವಶ್ಯಕವಾಗಿ ನಿರ್ಮಾಣ ಮಾಡುತ್ತಿದ್ದರು ಹೇಗಾದರೂ ಮಾಡಿ ಜಮ್ಮು-ಕಾಶ್ಮೀರವನ್ನು ಭಾರತದಿಂದ ಹೊಸಪಡಿಸಿಕೊಂಡು ಕಾಶ್ಮೀರವನ್ನು ಸಂಪೂರ್ಣವಾಗಿ ಭಯೋತ್ಪಾದಕರ ಕೇಂದ್ರವನ್ನಾಗಿಸಿ ಮಾಡಬೇಕೆಂಬ ಅವರ ಆಶಯವನ್ನು ಭಾರತ ವಿರೋಧಿಸುತ್ತಲೇ ಬಂದಿತ್ತು ಅಂದಿನ ಒಂದು ರಾಜಕೀಯ ತಪ್ಪಿನಿಂದಾಗಿ ಜಮ್ಮು-ಕಾಶ್ಮೀರದಲ್ಲಿ ಪ್ರತ್ಯೇಕ ಕಾನೂನುಗಳೇ ಅನ್ವಯವಾಗುವಂತಹ ವಾತಾವರಣವನ್ನು ನಿರ್ಮಾಣ ಮಾಡಿಬಿಟ್ಟಿದ್ದರು ಆದ್ದರಿಂದಲೇ ಭಯೋತ್ಪಾದಕರು ಹಾಗೂ ಮೂಲಭೂತವಾದಿಗಳು ಭಾರತದ ನಾಗರಿಕರಿಗೆ ಭಯವನ್ನ ಉಂಟುಮಾಡುತ್ತಲೇ ಇದ್ದರು ,ಅಂದು ಭಯೋತ್ಪಾದಕರು ಭಾರತೀಯರಿಗೆ ನೀವುಗಳು ನಿಜವಾಗಿಯೂ ತಾಯಿಯ ಎದೆ ಹಾಲನ್ನ ಕುಡಿದಿದ್ದೆ ಆದರೆ ಕಾಶ್ಮೀರದ ಲಾಲ್ ಚೌಕಿನಲ್ಲಿ ಭಾರತದ ತಿರಂಗವನ್ನು ಆರಿಸಿ ತೋರಿಸಿ ಎಂದು ಸವಾಲೆಸಿದಿದ್ದರು , ತನ್ನ ಸವಾಲ್ ಆಗಿ ಸ್ವೀಕರಿಸಿ ದಂತಹ ವಿದ್ಯಾರ್ಥಿ ಪರಿಷತ್ ಸುಮಾರು ೨೦ ಸಾವಿರ ವಿದ್ಯಾರ್ಥಿಗಳೊಂದಿಗೆ ತೆರಳಿ ಲಾಲ್ ಚೌಕನಲ್ಲಿ ಧ್ವಜ ಹಾರಿಸುವುದರ ಮೂಲಕ ಭಯೋತ್ಪಾದಕರ ಎದೆಯನ್ನೇ ನಡಗಿಸುವಂತಹ ವಾತಾವರಣವನ್ನು ಸೃಷ್ಟಿ ಮಾಡಿದ್ದರು ಆದ್ದರಿಂದಲೇ ವಿದ್ಯಾರ್ಥಿ ಪರಿಷತ್ ಈ ಸಂಘಟನೆ ಒಂದು ಧೈರ್ಯಶಾಲಿ ಹಾಗೂ ದೇಶಭಕ್ತ ಸಂಘಟನೆ ಎಂದು ಜಾಹಿರಾಗಿದೆ .


 ಆರ್ಟಿಕಲ್ ೩೭೦ ತಿದ್ದುಪಡಿಗಾಗಿ ನಿರಂತರ ಹೋರಾಟ

 ಭಾರತಕ್ಕೆ ಸ್ವಾತಂತ್ರ‍್ಯ ಸಿಕ್ಕ ನಂತರ ಭಾರತದಲ್ಲಿರುವ ಪ್ರತಿಯೊಬ್ಬರಿಗೂ ಹಾಗೂ ಪ್ರತಿ ರಾಜ್ಯಗಳಿಗೂ ಒಂದೇ ರೀತಿ ನಿಯಮಗಳಿರಬೇಕು ಎಂಬುದು ಬಹುತೇಕ ನಾಯಕ ಆದರೂ ನಾಯಕರ ನಿರ್ಧಾರಗಳನ್ನು ಗಾಳಿಗೆ ತೂರಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ನಿಯಮಗಳನ್ನು ರೂಪಿಸಿ ಭಾರತದ ಯಾವುದೇ ಕಾನೂನಿನಲ್ಲಿ ಅನ್ವಯವಾಗದ ರೀತಿ ಮಾಡಿಬಿಟ್ಟಿದ್ದರು ಅಂದಿನ ಬಹುತೇಕ ನಾಯಕರು ಇದನ್ನು ವಿರೋಧಿಸಿದರು ಏಕ್ ದೇಶ ಮೇ ದೊ ಪ್ರಧಾನ ದೊ ವಿಧಾನ ದೊ ನಿಶಾನ್ ನಹಿ ಚಲೆಗಾ ಎಂಬ ಎಷ್ಟೋ ಘೋಷಣೆಗಳು ಮೂಳಗುತ್ತಿದ್ದವು ವಿದ್ಯಾರ್ಥಿ ಪರಿಷತ್ ನಿರಂತರವಾಗಿ ೩೭೦ ತಿದ್ದುಪಡಿ ಯಾಗಲೇಬೇಕೆಂಬ ವಿಷಯಗಳನ್ನು ಇಟ್ಟುಕೊಂಡು ದೇಶಾದ್ಯಂತ ನಿರಂತರ ಹೋರಾಟಗಳನ್ನ ಮಾಡುತ್ತಲೇ ಬಂದಿತ್ತು ಅಂದಿನ ನಿರಂತರ ಹೋರಾಟದ ಫಲವಾಗಿಯೇ ಇಂದಿಗೆ ೩೭೦ ಕಾನೂನು ತಿದ್ದುಪಡಿಯಾಗಿದ್ದು ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬುದನ್ನು ಸಾಬೀತುಪಡಿಸಿದೆ ಈಗ ಜಮ್ಮು-ಕಾಶ್ಮೀರದಲ್ಲಿಯೂ ಸಹ ಶಾಂತಿ ನೆಲೆಸಿ ಭಾರತದ ಏಕತೆಗೆ ಸಹಾಯಕವಾಗಲಿದೆ,

  ಇದು ಸಂಘಟನೇಯ ಅತಿ ದೊಡ್ಡ ಗೆಲುವು ಎಂದು ನಾವು ಹೇಳಬಹುದು..


 

 ಅಕ್ರಮ ನುಸುಳುಕೋರರ ವಿರುದ್ಧ ಹೋರಾಟ 

 ಭಾರತದಲ್ಲಿ ಅಕ್ರಮವಾಗಿ ಬಾಂಗ್ಲಾದಿAದ ನುಸುಳುಕೊರರು ಒಳಹೊಕ್ಕು ದೇಶದಲ್ಲಿ ಅಶಾಂತಿ ವಾತಾವರಣ ನಿರ್ಮಿಸುವುದರ ಮೂಲಕ ದೇಶದಲ್ಲಿ ಅಕ್ರಮ ಚಟುವಟಿಕೆಗಳನ್ನು ಮಾಡುತ್ತದೆ ಏಕತೆಗೆ ಹಾಗೂ ಆಂತರಿಕ ಭದ್ರತೆಗೆ ಧಕ್ಕೆ ತರುತ್ತಿರುವುದನ್ನು ಗಮನಿಸಿ ಸಂಪೂರ್ಣವಾಗಿ ವಿರೋಧಿಸಿ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರು ರಸ್ತೆಗಳಿದ ದೇಶಾದ್ಯಂತ ಪ್ರತಿಭಟನೆ ಮಾಡಿದ್ದರು ಅಂತಹ ಅಕ್ಕ ಒಂದು ಭಾರತದಲ್ಲಿ ಅನೈತಿಕ ಚಟುವಟಿಗಳ ಮೂಲಕ ಇಲ್ಲಿನ ಕೆಲವು ಸಮುದಾಯಗಳನ್ನು ದಾರಿ ತಪ್ಪಿಸುವುದರ ಜೊತೆಗೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು ಎಲ್ಲೆಲ್ಲಿ ಈ ರೀತಿಯ ನುಸುಳುಕೋರ ಪ್ರಭಾವ ಜಾಸ್ತಿ ಆಗುತ್ತಾ ಹೋಯಿತು ಆ ಪ್ರದೇಶಗಳಲ್ಲಿ ಕೊಲೆಯ ಸುಲಿಗೆ ಅತ್ಯಾಚಾರ ದರೋಡೆಗಳಂತ ಪ್ರಕರಣಗಳು ನಿರಂತರವಾಗಿ ನಡೆಯುತ್ತಲೇ ಇದ್ದವು ಅವರದೇ ಆದಂತಹ ತಂಡಗಳನ್ನ ಕಟ್ಟಿಕೊಂಡು ಭಾರತದ ಎಲ್ಲಾ ರಾಜ್ಯಗಳಲ್ಲಿಯೂ ಸಹ ಸಂಚರಿಸಿ ಆ ಪ್ರದೇಶಗಳಲ್ಲಿ ಅಶಾಂತಿ ವಾತಾವರಣವನ್ನ ನಿರ್ಮಿಸುತ್ತ ಭಾರತೀಯರಿಗೆ ಕಂಟಕವಾಗಿದ್ದರು ಇಂದಿಗೂ ಸಹ ಅನೇಕ ರಾಜ್ಯಗಳಲ್ಲಿ ಇವರ ಪ್ರಭಾವ ಹೆಚ್ಚಾಗಿದ್ದು ಅಲ್ಲಿಯ ರಾಜಕೀಯ ಪರಿಸ್ಥಿತಿಗಳನ್ನು ಸಹ ಬದಲಾಯಿಸುವಂತಹ ಶಕ್ತಿಯನ್ನು ಅವರು ಬೆಳೆಸಿಕೊಂಡಿದ್ದಾರೆ ಕೊರೊನಾದಂತಹ ಭೀಕರ ಕೆಟ್ಟ ಪರಿಸ್ಥಿತಿಯಲ್ಲಿಯೂ ಸಹ ಭಾರತದಲ್ಲಿ ತಯಾರಾದಂತಹ ವ್ಯಾಕ್ಸಿನ್ ಗಳ ವಿರುದ್ಧ ಅಪಪ್ರಚಾರವನ್ನು ಮಾಡುವುದರ ಮೂಲಕ ಅವುಗಳನ್ನು ತೆಗೆದುಕೊಳ್ಳದ ರೀತಿಯಲ್ಲಿ ಭಾರತೀಯರ ತಲೆಯನ್ನು ಕೆಡಿಸುವುದರ ಮೂಲಕ ಇವರ ನಾಲಾಯಕ ಬುದ್ಧಿಯನ್ನು ತೋರಿಸಿದರು ಭಾರತದಲ್ಲಿದ್ದಂತಹ ಕೆಲವರು ಇವರಿಗೆ ಸಹಕಾರ ಮಾಡುವುದರ ಮೂಲಕ ಇವರ ಪ್ರಭಾವವನ್ನು ಇಂದಿಗೂ ಸಹ ಹೆಚ್ಚಿಸುತ್ತಿದ್ದಾರೆ ,

ಅಂತಹ ಅಕ್ರಮ ಬಾಂಗ್ಲಾ ನುಸುಳು ಕೋರರನ್ನ ಭಾರತದಿಂದ ಹೊರಗಟ್ಟಬೇಕು ಎಂಬುವAತ ವಿದ್ಯಾರ್ಥಿ ಪರಿಷತ್ತಿನ ಆಶಯ ಮತ್ತು ಹೋರಾಟ ಇಂದಿಗೆ ಕಾನೂನು ರಚಿಸುವುದರ ಮೂಲಕ ಸಫಲತೆಯನ್ನು ಪಡೆದುಕೊಂಡು ವಿದ್ಯಾರ್ಥಿ ಪರಿಷತ್ತಿನ ಶಕ್ತಿ ಏನೆಂಬುದನ್ನ ಇಡೀ ದೇಶಕ್ಕೆ ತಿಳಿಸಿಕೊಟ್ಟಿದೆ 

 ನಶಾ ಮುಕ್ತ ಭಾರತಕ್ಕಾಗಿ ಸಂಕಲ್ಪ 

 ಡ್ರಗ್ಸ ಗಾಂಜಾ ಅಫಿಮು ಗಳನ್ನ ಕಳ್ಳ ಸಾಗಾಣಿಕೆಗಳ ಮೂಲಕ ಭಾರತಕ್ಕೆ ತಂದು ಇಲ್ಲಿನ ಕಾಲೇಜಿನ ಕ್ಯಾಂಪಸ್ ಗಳಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಯುವಕರಿಗೆ ಅದರ ನಶವನ್ನು ಹೆಚ್ಚಿಸಿ ಅವರ ಜೀವನದ ಜೊತೆ ಚೆಲ್ಲಾಟ ಆಡುತ್ತಿರುವ ದಂಧೆ ಕೋರರ ವಿರುದ್ಧ ಸಹ ವಿದ್ಯಾರ್ಥಿ ಪರಿಷತ್ ನಿರಂತರವಾದAತಹ ಹೋರಾಟವನ್ನು ಮಾಡುತ್ತಿದೆ ಈ ರೀತಿಯ ಚಟುವಟಿಕೆಗಳು ಹೆಚ್ಚಾಗಿ ನಗರ ಪ್ರದೇಶಗಳಲ್ಲಿ ಕಂಡು ಬರುತ್ತಿದ್ದು ಯುವಕರನ್ನ ನಶೆಯಲ್ಲಿ ಬೀಳಿಸುವುದರ ಮೂಲಕ ಅವರಿಂದ ಅನೈತಿಕ ಚಟುವಟಿಕೆಗಳನ್ನು ಮಾಡುವ ರೀತಿಯಲ್ಲಿ ನೋಡಿಕೊಳ್ಳುವುದು ಡ್ರಗ್ ತಂದೆ ಕೋರರ ಕೆಲಸವಾಗಿದೆ ಇತ್ತೀಚಿಗೆ ಇದು ನಟ ನಟಿಯರಲ್ಲಿ ಹೂ ಸಹ ಹೆಚ್ಚಾಗಿ ಕಂಡುಬರುತ್ತಿದ್ದು ಇದು ನಮ್ಮ ಸಮಾಜದ ಮೇಲೆ ದುಷ್ಪರಿಣಾಮ ಬೀರುವುದನ್ನ ತಪ್ಪಿಸಲು ದೇಶಾದ್ಯಂತ ಹೋರಾಟಕ್ಕೆ ಕರೆಕೊಟ್ಟು ಸಹಿ ಸಂಗ್ರಹದ ಮೂಲಕ ದೇಶದಲ್ಲಿ ಜಾಗೃತಿ ಮೂಡಿಸುವಂತಹ ಮಹತ್ಕಾರ್ಯವನ್ನು ವಿದ್ಯಾರ್ಥಿ ಪರಿಷತ್ತು ಮಾಡುತ್ತಿದೆ,

 ದೇಶ ಮೊದಲು 

 ದೇಶವೇ ನಮಗೆ ಸರ್ವಸ್ವ ದೇಶವೇ ನಮಗೆ ತಾಯಿ ಸಮಾನ ದೇಶ ಉಳಿದರೆ ಮಾತ್ರ ನಮ್ಮ ಸಂಸ್ಕೃತಿ ಸಂಪ್ರದಾಯ ಆಚಾರ ಆಚರಣೆ ವಿಚಾರ ಪದ್ಧತಿ ಹಾಗೂ ಅದಕ್ಕೂ ಮುಖ್ಯವಾಗಿ ನಾವು ಉಳಿಯಲು ಸಾಧ್ಯ ನಮ್ಮ ತನವನ್ನು ಮರೆತಾಗಲೇ ನಾವು ದಾಸಕ್ಕಿ ಒಳಗಾಗಬೇಕಾಯಿತು ಹಾಗಾಗಿ ದೇಶದ ಉಳಿವಿಗಾಗಿ ಸದ್ವಿಚಾರಧಾರೆಗಳನ್ನು ಇಟ್ಟುಕೊಂಡು ದೇಶಕ್ಕಾಗಿ ಅಂತಹ ತ್ಯಾಗಕ್ಕೂ ಸಿದ್ಧವಾಗಿರಬೇಕು ಎಂಬ ಸಿದ್ದಾಂತ ಉಳ್ಳಂತಹ ಸಂಘಟನೆ ಹಾಗಾಗಿ ದೇಶದ ಸಮಸ್ಯೆಗಳ ಬಗ್ಗೆ ಯೋಚಿಸಿ ಚರ್ಚಿಸಿ ಅದಕ್ಕೆ ಪರಿಹಾರ ಸಿಗುವವರೆಗೂ ನಿರಂತರವಾದAತಹ ಹೋರಾಟಗಳನ್ನು ರೂಪಿಸುವುದರ ಮೂಲಕ ಅದಕ್ಕಾಗಿ ಶ್ರಮಿಸುವಂತಹ ಗುಣ ಬೆಳೆಸಿಕೊಂಡಿದ್ದು ನಮಗೆಲ್ಲರಿಗೂ ನಮ್ಮ ಸ್ವಾರ್ಥಕ್ಕಿಂತ ದೇಶವೇ ಮುಖ್ಯ ದೇಶಕ್ಕಾಗಿ ನೋವು ಎಂತ ತ್ಯಾಗಕ್ಕೂ ಸಿದ್ಧನು ಸಂದೇಶವನ್ನು ವಿದ್ಯಾರ್ಥಿ ಪರಿಷತ್ ನೀಡುತ್ತಲೇ ಇದೆ ಹಾಗಾಗಿ ತಾಯ್ನಾಡಿಗಾಗಿ ಸದಾ ಸೇವೆಗೆ ಸಿದ್ದವಾಗಿರುವಂತಹ ಭಾರತದ ಏಕೈಕ ವಿದ್ಯಾರ್ಥಿ ಸಂಘಟನೆ ಎನ್ನುವುದು ಮತ್ತೊಂದು ವಿಶೇಷ ಸಂಗತಿ ...

 ಕಾಲೇಜ್ ಕ್ಯಾಂಪಸ್ ಗಳಲ್ಲಿ  

 ದೇಶದ ಯುವಕ ಬಲಿಷ್ಠನಾದಾಗ ಮಾತ್ರ ದೇಶದ ಭವಿಷ್ಯ ಉಜ್ವಲವಾಗಲೂ ಸಾಧ್ಯ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆಯ ಚಿಂತನೆಗಳು ಮೂಡಿದಾಗ ಮಾತ್ರ ಯುವಕರು ರಾಷ್ಟ್ರ ಹಿತ ಕಾಪಾಡಲು ಸಿದ್ದರಾಗುತ್ತಾರೆ ಹಾಗಾಗಿ ದೇಶದ ಪ್ರತಿ ಕಾಲೇಜ್ ಕ್ಯಾಂಪಸ್ ಗಳಲ್ಲಿ ರಾಷ್ಟ್ರೀಯತೆಯ ಕಿಚ್ಚನ ಹಚ್ಚುವುದರ ಮೂಲಕ ಯುವಕರನ್ನ ರಾಷ್ಟ್ರಕ್ಕೆ ಕೊಡುಗೆಯಾಗಿ ನೀಡುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಹಾಗೂ ಏಕತಿಗೆ ಕಂಕಣಭದ್ಧರಾಗಿ ನಿಲ್ಲುವುದು ವಿದ್ಯಾರ್ಥಿ ಪರಿಷತ್ತಿನ ಆಶಯ,

 ಬಹು ವರ್ಷಗಳ ಕಾಲ ತಮ್ಮ ಸ್ವಹಿತಾಶಕ್ತಿ ಶಕ್ತಿ ಹಾಗೂ ಸ್ವಾರ್ಥಕ್ಕಾಗಿ ಯುವಕರನ್ನು ದೇಶ ವಿರೋಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಹಾಗೆ ಮಾಡುತ್ತಿದ್ದ ವಿಶ್ವವಿದ್ಯಾಲಯಗಳಲ್ಲಿ ಕೂಡ ಇಂದು ದೇಶಭಕ್ತಿಯ ಘೋಷಣೆಗಳು ಮೊಳುಗುತ್ತಿವೆ ಯಾವ ವಿಶ್ವವಿದ್ಯಾಲಯಗಳಲ್ಲಿ ಅನೈತೀಕ ಚಟುವಟಿಕೆಗಳ ಕೇಂದ್ರವಾಗಿದ್ದವು ಅವುಗಳಲ್ಲಿ ಇಂದು ಜ್ಞಾನ ದೇಗುಲಗಳಾಗಿ ಬದಲಾಗಿವೆ ಯಾವ ಕಾಲೇಜು ಹಾಗು ವಿಶ್ವವಿದ್ಯಾಲಯಗಳಲ್ಲಿ ಆವರಣಗಳಲ್ಲಿ ದೇಶದ ಪರವಾಗಿ ಘೋಷಣೆಗಳು ಸಹ ಮೊಳಗದಂತೆ ನೋಡುತ್ತಿರುವ ವಿರೋಧವನ್ನು ವ್ಯಕ್ತಪಡಿಸುತ್ತಿದ್ದರೊ ರಾಷ್ಟ್ರೀಯ ಪುರುಷರ ವಿಗ್ರಹಗಳನ್ನು ದ್ವಂಸ ಮಾಡುತ್ತಿದ್ದರೊ ರಾಷ್ಟ್ರೀಯ ನಾಯಕರಿಗೆ ಅವಮಾನ ಮಾಡುತ್ತಿದ್ದರೊ ರಾಷ್ಟ್ರದ ವಿಚಾರಗಳನ್ನು ಧಿಕ್ಕರಿಸುತ್ತಿದ್ದರೊ ರಾಷ್ಟ್ರದ ವಿಚಾರಗಳನ್ನು ಕಟುವಾಗಿ ವಿರೋಧಿಸುತ್ತಿದ್ದರೊ ರಾಷ್ಟ್ರದ ವಿಷಯಗಳಿಗೆ ಆಸ್ಪದವೇ ನೀಡುತ್ತಿರಲಿಲ್ಲವೋ ಅಂತಹ ಕ್ಯಾಂಪಸ್ ಗಳಲ್ಲಿ ಮತ್ತೆ ರಾಷ್ಟ್ರಪುರುಷರ ವಿಗ್ರಹಗಳನ್ನ ಸ್ಥಾಪಿಸುವದರ ಮೂಲಕ ಭಾರತೀಯ ವಿರೋಧಿಗಳಿಗೆ ಪ್ರತ್ಯುತ್ತರಗಳನ್ನ ಇಂದಿಗೂ ನೀಡುತ್ತಿದ್ದಾರೆ ಇದಕ್ಕೆಲ್ಲ ಮುಖ್ಯ ಕಾರಣವೇ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರ ತ್ಯಾಗ ಮತ್ತು ನಿರಂತರ ಶ್ರಮ ಅದಕ್ಕಾಗಿ ಇಂದಿಗೂ ಸಹ ದೇಶದ ಅನೇಕ ಕಾಲೇಜುಗಳಲ್ಲಿ ಕಾಶ್ಮೀರದಂತ ಕಾಲೇಜುಗಳಲ್ಲಿ ಸಹ ದೇಶದ ಪರವಾದ ವಿಚಾರಗಳು ಮೂಡುವ ಹಾಗೆ ಮಾಡುವಲ್ಲಿ ವಿದ್ಯಾರ್ಥಿ ಪರಿಷತ್ತಿನ ಶ್ರಮ ಬಹಳಷ್ಟಿದೆ ಕಾಲೇಜಿ ಕ್ಯಾಂಪಸ್ಗಳು ದೇಶಭಕ್ತಿಯ ಕೇಂದ್ರಗಳಾಗಿವೆ ಅದುವೇ ವಿದ್ಯಾರ್ಥಿ ಪರಿಷತ್ತಿನ ತಾಕತ್ತು ಎಂಬುದನ್ನು ನಾವು ಹೆಮ್ಮೆಯಿಂದ ಹೇಳಬಹುದಾಗಿದೆ 


 ಹಲವಾರು ಆಯಾಮಗಳು 

 ವಿದ್ಯಾರ್ಥಿ ಪರಿಷತ್ ಎಂದರು ಕೇವಲ ಕಾಲೇಜು ಕ್ಯಾಂಪಸ್ ಗಳಲ್ಲಿ ಶೈಕ್ಷಣಿಕ ಸಮಸ್ಯೆಗಳಿಗಾಗಿ ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳಿಗಾಗಿ ಮಾತ್ರವಲ್ಲದೆ ಹಲವಾರು ಆಯಾಮಗಳ ಮೂಲಕ ಯುವಕರದಲ್ಲಿ ನಿರಂತರವಾಗಿ ತೊಡಿಗಿಸಿಕೊಂಡಿದೆ ಸ್ಟುಡೆಂಟ್ ಫಾರ್ ಡೆವಲಪ್ಮೆಂಟ್ - ಈ ಆಯಾಮದ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರಕ್ಕಾಗಿ ಕಾರ್ಯಗಳನ್ನು ಮಾಡುವುದಾಗಿದೆ ಜಲ್ ಜಂಗಲ್ ಜಮೀನ ಜನ್ ಮತ್ತು ಜಾನುವಾರು ಎಂಬ ಧ್ಯೇಯ ವಾಕ್ಯಗಳೊಂದಿಗೆ ಪರಿಸರ ಹಸಿರು ನೈರ್ಮಲ್ಯ ನೀರು ಸ್ವಚ್ಛ ಗಾಳಿ ಪ್ರಾಣಿ ಪಕ್ಷಿ ಹೀಗೆ ಎಲ್ಲವನ್ನು ಉಳಿಸಿ ಬೆಳೆಸಲು ಸಹಕಾರಿಯಾಗುವ ಯೋಜನೆಗಳನ್ನು ರೂಪಿಸುವುದಾಗಿದೆ 

 ಸೈಕಲ್ ಜಾಥಾ ಗ್ರೀನ್ ಕ್ಯಾಂಪಸ್ ಸಂಡೆ ಫಾರ್ ಸೊಸೈಟಿ ಜೊತೆಗೆ ಹಳ್ಳಿಗಳ ಮೂಲಭೂತ ಸೌಕರ್ಯಗಳಿಗಾಗಿ ಸಮಸ್ಯೆಗಳಿಗಾಗಿ ಧ್ವನಿಯಾಗಿ ಅವುಗಳಿಗೆ ಪರಿಹಾರ ಕಂಡುಕೊಳ್ಳುವದಾಗಿದೆ,

 ಸ್ಟುಡೆಂಟ್ ಫಾರ್ ಸೇವಾ 

 ಈ ಆಯಾಮದ ಮೂಲಕ ವಿದ್ಯಾರ್ಥಿಗಳಲ್ಲಿ ಹಾಗೂ ಯುವಕರಲ್ಲಿ ಸಮಾಜ ಸೇವೆಯನ್ನು ಜಾಗೃತಿ ಮಾಡುವದಾಗಿದೆ ಹಲವಾರು ಸಾಮಾಜಿಕ ಕಾರ್ಯಗಳ ಮೂಲಕ ಜನರ ಕಷ್ಟಗಳಿಗೆ ಸ್ಪಂದಿಸುವ ಹಾಗೂ ರಕ್ತದಾನ ಶಿಬಿರಗಳ ಮೂಲಕ ರಕ್ತದ ಅವಶ್ಯಕತೆ ಪೂರೈಸುವ ಸಹಾಯವಾಣಿಗಳನ್ನು ಸ್ಥಾಪಿಸುವ ಮೂಲಕ ಜನರಿಗೆ ಸಹಾಯ ಹಸ್ತ ಚಾಚುವುದು ಪ್ರವಾಹ ಮಳೆಹಾನಿ ಇತರೆ ಯಾವುದೇ ಸಮಾಜದ ಸಮಸ್ಯೆಗಳಾದಲ್ಲಿ ಅವುಗಳಿಗೆ ಮೊದಲು ಧ್ವನಿಯಾಗಿ ನಿಲ್ಲುವುದೇ ಸ್ಟೂಡೆಂಟ್ ಫಾರ್ ಸೇವಾ

 

 ಕಲಾಮಂಚ್ 

 ವಿದ್ಯಾರ್ಥಿಗಳು ಎಲ್ಲಾ ಕ್ಷೇತ್ರದಲ್ಲೂ ಮುಂದುವರೆಯಬೇಕು ಎಂಬ ಆಶಯದೊಂದಿಗೆ ಕಲೆ ಸಂಗೀತ ಸಾಂಸ್ಕೃತಿಕ ಸಾಹಿತ್ಯ ನೃತ್ಯ ಹೀಗೆ ಎಲ್ಲಾ ರಂಗದಲ್ಲೂ ಅವರು ಮಿಂಚುತ್ತಿರಬೇಕು ಅವರ ಕಲೆಯನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಬೇಕಾಗಿರುವುದು ಧಾತು ಪರಿಷತ್ತಿನ ನಿಲುವು ವಿದ್ಯಾರ್ಥಿಗಳ ಉನ್ನತಿಗೆ ಕಾರಣವಾಗಿ ಸಮಾಜಕ್ಕೆ ಗುರುತಿಸುವ ಕಾರ್ಯವನ್ನು ಈ 

 ಆಯಾಮ ಮಾಡಲಿದೆ ಶೋಧ ಎಂಬ ಆಯಾಮದ ಮೂಲಕ ಸಂಶೋಧನಾ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ಸಂಶೋಧನಾ ವಿಷಯಗಳಿಗೆ ಅನುಕೂಲವಾಗಲಿ ಎಂದು ಶೋಧ ಎಂಬ ಆಯಾಮವನ್ನ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ 

 ಮಿಷನ್ ಸಾಹಸಿ  ಇದರ ಮೂಲಕ ವಿದ್ಯಾರ್ಥಿನಿಯರಲ್ಲಿ ಆತ್ಮಸ್ಥೈರ್ಯ ತುಂಬುವುದರ ಜೊತೆಗೆ ಆತ್ಮ ರಕ್ಷಣೆಗೆ ಸಹಕಾರಿಯಾಗುವ ಹಾಗೆ ಹಾಗೂ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ವಿಧಾನಗಳು ಹೇಗಿರುತ್ತವೆ ಎಂಬುದರ ಕುರಿತು ಅವರಿಗೆ ಮಾಹಿತಿಯ ಜೊತೆಗೆ ಕೌಶಲ್ಯಗಳನ್ನು ಕಲಿಸಿಕೊಡಲಾಗುತ್ತದೆ ಕರಾಟೆ ಅಂತಹ ತರಬೇತಿಯನ್ನು ನೀಡಿ ಅವರನ್ನು ಸದೃಢರನ್ನಾಗಿಸಿ ಮಾಡಿ ಶಕ್ತಿಶಾಲಿ ವಿದ್ಯಾರ್ಥಿಗಳನ್ನಾಗಿ ಮಾಡುತ್ತದೆ ,ಈ ಆಯಾಮದ ಉದ್ದೇಶ ದೇಶ್ಯಾದ್ಯಂತ ಸಾವಿರಾರು ಕಾಲೇಜುಗಳಲ್ಲಿ ಈ ರೀತಿಯ ತರಬೇತಿಗಳನ್ನು ನೀಡಿ ಅವರಿಗೆ ಬಲವನ್ನ ನೀಡುವುದರ ಮೂಲಕ ಎಲ್ಲರಿಂದಲೂ ಸೈ ಎನಿಸಿಕೊಂಡಿದೆ ,

 ಇಂಜಿನಿಯರಿAಗ್ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಗೆ ಸೃಷ್ಟಿ ಎಂಬ ಆಯಾಮ ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ಮೆಡ್ ವಿಜನ್ ಆಯುರ್ವೇದ ವಿದ್ಯಾರ್ಥಿಗಳಿಗಾಗಿ ಜಿಜ್ಞಾಸು ಹೀಗೆ ಹತ್ತು ಹಲವು ಆಯಾಮಗಳ ಮೂಲಕ ವಿದ್ಯಾರ್ಥಿಗಳ ಆಸಕ್ತಿ ಅನುಗುಣವಾಗಿ ಅವರ ಜೊತೆ ಕೈಜೋಡಿಸಿ ಅವರ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡುವ ಏಕೈಕ ಸಂಘಟನೆಯಾಗಿದೆ ಆದ್ದರಿಂದ ಆಯಾ ಕ್ಷೇತ್ರದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳು ವಿದ್ಯಾರ್ಥಿ ಪರಿಷತ್ ಜೊತೆಯಲ್ಲಿ ಕೆಲಸ ಮಾಡುತ್ತ ದೇಶದ ಹಿತಾಸಕ್ತಿ ಜೊತೆಯಲ್ಲಿ ಎಲ್ಲಾ ರಂಗದಲ್ಲೂ ಮುಂದೆ ಬರುತ್ತಿದ್ದಾರೆ ದೇಶದ ಅನೇಕ ರೀತಿಯ ಆವಿಷ್ಕಾರ ಮತ್ತು ಬದಲಾವಣೆಗಳಿಗೆ ವಿದ್ಯಾರ್ಥಿ ಪರಿಷತ್ತಿನ ವಿದ್ಯಾರ್ಥಿಗಳು ಪ್ರಮುಖ ಪಾತ್ರವನ್ನು ವಹಿಸುತ್ತಿದ್ದಾರೆ ವಿದ್ಯಾರ್ಥಿ ಪರಿಷತ್ತು ಅವರ ಪ್ರೇರಿತ ಶಕ್ತಿಯಾಗಿ ಕೆಲಸ ಮಾಡುತ್ತಿದೆ ಯಾವುದೇ ಆಸೆ ಆಮೀಷಗಳಿಗೆ ಬಲಿಯಾಗದ ದೇಶದ ಸರ್ವಾಂಗಿಣ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ ವಿದ್ಯಾರ್ಥಿ ಸಂಘಟನೆಯಾಗಿ ಇಷ್ಟು ಎತ್ತರಕ್ಕೆ ಬೆಳೆದಿದ್ದು ಜಗತ್ತಿನಾದ್ಯಂತ ಹೆಸರು ಮಾಡುತ್ತಲಿದೆ ಹೀಗೆ ನಾನಾ ರೀತಿಯ ಕಾರ್ಯಕ್ರಮಗಳನ್ನು ಆಯಾಮಗಳ ಮೂಲಕ ಮಾಡುತ್ತ ವಿಶೇಷತೆಯನ್ನು ಹಾಗೂ ಬದಲಾವಣೆಯನ್ನು ಸಮಾಜದ ಮುಂದೆ ತೆರೆದಿಡುತ್ತಿದೆ 

 ವಿದ್ಯಾರ್ಥಿಗಳ ಸಮಸ್ಯೆಗೆ ಮೊದಲು ಸ್ಪಂದಿಸುವ ದೇಶದ ಏಕೈಕ ಶಕ್ತಿಶಾಲಿ ಸಂಘಟನೆ 

ವಿದ್ಯಾರ್ಥಿಗಳ ಯಾವುದೇ ಸಮಸ್ಯೆಗೆ ಸ್ಪಂದಿಸಿ ಹೋರಾಟ ರೂಪಿಸಿ ಸಂಬAಧಪಟ್ಟವರ ಗಮನಕ್ಕೆ ತಂದು ಸಮಸ್ಯೆಯನ್ನು ಪರಿಹರಿಸುವ ಕಾರ್ಯವನ್ನು ವಿದ್ಯಾರ್ಥಿ ಪರಿಷತ್ ಆರಂಭಕ್ಕಿAತಲೂ ಇಂದಿನವರೆಗೂ ನಿರಂತರ ಮಾಡುತ್ತಲೇ ಬರುತ್ತಿದೆ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳಿಗೆ ಧ್ವನಿಯಾಗಿ ಅವರ ಶಕ್ತಿಯನ್ನ ಬಲಪಡಿಸುವ ಕಾರ್ಯವನ್ನು ಮಾಡುತ್ತಲೇ ಇದೆ, ಪದೇ ಪದೇ ವಿದ್ಯಾರ್ಥಿಗಳಿಗೆ ಆಗುವ ಬಸ್ ಸಮಸ್ಯೆಗಳು ಹಾಸ್ಟೆಲ್ ಸಮಸ್ಯೆಗಳು ಕಾಲೇಜ್ ಸಮಸ್ಯೆಗಳಿಗೆ ವಿದ್ಯಾರ್ಥಿ ವೇತನ ಸಮಸ್ಯೆಗಳಿಗೆ ಹೀಗೆ ಇದ್ದರೆ ನೂರಾರು ಸಮಸ್ಯೆಗಳಿಗೆ ಬೆನ್ನೆಲುಬಾಗಿ ಪರಿಹಾರ ಕಲ್ಪಿಸಿ ಕೊಡುವವರೆಗೂ ಹೋರಾಟವನ್ನು ಮಾಡುತ್ತಲೇ ಇರುತ್ತದೆ

 ಪೂರ್ವ ಯೋಜನೆ ಪೂರ್ಣ ಯೋಜನೆ 

 ಯಾವುದೇ ಕೆಲಸ ಕಾರ್ಯಗಳನ್ನು ಮಾಡಬೇಕಾದರೂ ಅದಕ್ಕೆ ಬೇಕಾದ ತಯಾರಿ ಹಾಗೂ ಸಾಧಕ ಬಾದಕಗಳ ಕುರಿತು ಚರ್ಚಿಸಿ ಅದಕ್ಕೆ ಬೇಕಾದ ಅವಶ್ಯಕತೆಗಳನ್ನ ಕಂಡುಕೊAಡು ಯೋಜನೆ ರೂಪಿಸುವುದು ಸಂಘಟನೆಯ ವಿಶೇಷತೆ 

 ಅದನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ತಂದು ಅದನ್ನು ಯಶಸ್ವಿಯಾಗಿ ಮುಗಿಸುವುದಾಗಿದೆ ಆದ್ದರಿಂದಲೇ ಪ್ರತಿಯೊಂದು ಹೋರಾಟದಲ್ಲೂ ಈ ರೀತಿಯ ಪೂರ್ವ ಯೋಜನೆ ಪೂರ್ಣ ಯೋಜನೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗಿದೆ ಯಾವುದೇ ಯೋಜನೆಗಳನ್ನು ಅರ್ಧದಲ್ಲೇ ಕೈ ಬಿಡುವುದು ಸಾಧ್ಯವಿಲ್ಲ ಆದ್ದರಿಂದಲೇ ಪ್ರತಿಯೊಂದು ಯೋಜನೆಯನ್ನು ಯಶಸ್ವಿಯಾಗುವುದು ಮತ್ತು ಯಾವುದೇ ಯೋಜನೆ ಪೂರ್ಣ ಪ್ರಮಾಣದಲ್ಲಿ ಫಲಪ್ರದ ಆಗುವವರೆಗೂ ಹೋರಾಟವನ್ನು ಬಿಡದಿರುವುದು ಮತ್ತೆ ಅದಕ್ಕೆ ಪರಿಹಾರ ಕಂಡುಕೊಳ್ಳುವುದಾಗಿದೆ .

ಸಾವಿರಾರು ಕೆಲಸ ಕಾರ್ಯಗಳ ಮೂಲಕ ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿಗಳಿಗೆ ಯುವಕರಿಗೆ ಈ ದೇಶದ ನಾಗರಿಕರಿಗೆ ಸಹಾಯವನ್ನು ಮಾಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ ನೈತಿಕತೆಯನ್ನು ತುಂಬುವುದರ ಮೂಲಕ ಅವರನ್ನ ಶಕ್ತಿಶಾಲಿಯಾಗಿ ರೂಪಿಸುವುದು ವಿದ್ಯಾರ್ಥಿ ಪರಿಷತ್ತಿನ ಪ್ರಮುಖ ಗುರಿಯಾಗಿದೆ 

 ಆದ್ದರಿಂದಲೇ ಜುಲೈ ೯, ಈ ದಿನವನ್ನು ದೇಶಾದ್ಯಂತ ರಾಷ್ಟ್ರೀಯ ವಿದ್ಯಾರ್ಥಿಯ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ 

 ಡಾ ಅಮಿತ್ ಕುಮಾರ್ ಬಿರಾದಾರ 

 ಬರಹಗಾರರು ವಿಜಯಪುರ

 


Search
Popular News
Most Popular
ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಅಲೆನ್ ಕರಿಯರ್ ಅಕಾಡೆಮಿ ಮಧ್ಯೆ ಶೈಕ್ಷಣಿಕ ಓರಿಯಂಟೇಶನ್ ಕಾರ್ಯಕ್ರಮದ ಕ್ಷಣಗಳು.
Vachana Pitamaha P. G. Halakatti College of Engineering
Nursing College Jamkhandi
BLDEA Nursing College Vijayapura
Vachana Pitamaha P. G. Halakatti College of Engineering Vijayapura
ಡಾ ಫ ಗು ಹಳಕಟ್ಟಿ, ಬಂಥನಾಳ ಶಿವಯೋಗಿಗಳು, ಡಾ ಬಿ ಎಂ ಪಾಟೀಲ್ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆ ಕಾರ್ಯಕ್ರಮ

Leave a Comment