by 7 on | 2024-08-28 12:56:42
Share: Facebook | Twitter | Whatsapp | Linkedin | Visits: 316
ನಗರದ ಬಿ. ಎಲ್. ಡಿ. ಇ ಡೀಮ್ಡ್ ವಿಶ್ವವಿದ್ಯಾನಿಲಯದ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಚಿಕ್ಕಮಕ್ಕಳ ತಜ್ಞ ಡಾ. ಎಂ. ಎಂ. ಪಾಟೀಲ ಮತ್ತು ಅವರ ತಂಡ ಬರೆದ ರಸಾಯನಿಕ ಸಿಂಪಡಿಸಿದ ದ್ರಾಕ್ಷಿ ಸೇವನೆಯಿಂದ ಉಂಟಾಗುವ ವಿಷಪ್ರಭಾವ ಎಂಬ ಮಹತ್ವದ ಲೇಖನ ವಿಶ್ವದ ಮಟ್ಟದಲ್ಲಿ ಪ್ರಸಿದ್ಧವಾದ ಮೆಡಿಕಲ್ ಜರ್ನಲ್ ಗ್ಲೋಬಲ್ ಹೆಲ್ತ್ ಕೇಸ್ ರಿಪೋರ್ಟ್ ನಲ್ಲಿ ಪ್ರಕಟವಾಗಿದೆ.
ಈ ಲೇಖನವು ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುವ ಒಂದು ಮುಖ್ಯ ಸಮಸ್ಯೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬೆಳಕಿಗೆ ತಂದಿದೆ. ದ್ರಾಕ್ಷಿಯನ್ನು ತಿನ್ನುವ ಮುನ್ನ ಅದನ್ನು ಸ್ವಚ್ಛಗೊಳಿಸದೆ ಇರುವುದರಿಂದ ಉಂಟಾಗುವ ಸಮಸ್ಯೆಗಳು ವಿಶೇಷವಾಗಿ ರಾಸಾಯನಿಕ ಕೀಟನಾಶಕಗಳಿಂದ ಎದುರಾಗುವ ಅಪಾಯಗಳ ಕುರಿತು ಈ ಲೇಖನ ಸಂಪೂರ್ಣ ಮಾಹಿತಿ ಹೊಂದಿದೆ. ಗ್ರಾಮೀಣ ಭಾಗದ ಮಕ್ಕಳು ಎದುರಿಸುವ ಹಾನಿಕಾರ ಸಮಸ್ಯೆಗಳಿಗೆ ಒಳಗಾಗುವುದನ್ನು ಹೇಗೆ ತಪ್ಪಿಸಬಹುದು ಎಂಬುದರ ಕುರಿತು ಕೂಡ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಶಿಕ್ಷಣದ ಕೊರತೆ ಎಷ್ಟು ಗಂಭೀರವಾಗಿದೆ ಎಂಬುದನ್ನು ಈ ಲೇಖನದಲ್ಲಿ ಎತ್ತಿ ತೋರಿಸಲಾಗಿದ್ದು, ಮಕ್ಕಳಲ್ಲಿ ಈ ರೀತಿಯ ರೋಗ ಲಕ್ಷಣಗಳನ್ನು ಗುರುತಿಸುವುದು ಮತ್ತು ತ್ವರಿತ ಚಿಕಿತ್ಸೆ ನೀಡುವುದು ಎಷ್ಟು ಮುಖ್ಯ ಎಂಬುದರ ಮೇಲೂ ಈ ಲೇಖನ ಬೆಳಕು ಚೆಲ್ಲಿದೆ. ಅಲ್ಲದೇ, ತೊಳೆಯದೆ ಇರುವ ದ್ರಾಕ್ಷಿ ಹಣ್ಣುಗಳ ಸೇವನೆಯ ಅಭ್ಯಾಸದಿಂದ ಮಕ್ಕಳ ಮೇಲೆ ಉಂಟಾಗುವ ಆರೋಗ್ಯ ಹಾನಿಯ ಬಗ್ಗೆ ಮಹತ್ವದ ಎಚ್ಚರಿಕೆಯನ್ನು ಮೂಡಿಸಲಾಗಿದೆ.
ಡಾ. ಎಂ. ಎಂ. ಪಾಟೀಲ ಅವರ ತಂಡದಲ್ಲಿ ಸಂಶೋಧನೆ ಕೇಂದ್ರದ ಉಪನಿರ್ದೇಶಕಿ ಡಾ. ಚಂದ್ರಿಕಾ ದೊಡ್ಡಿಹಾಳ, ಡಾ. ಅನ್ವಿತಾ ಸಿನ್ಹಾ ಹಾಗೂ ಡಾ. ಪ್ರಸನ್ನ ಕುಮಾರ ಬಿ.ಎಂ ಸಹ-ಲೇಖಕರಾಗಿದ್ದಾರೆ.
ಅಂತಾರಾಷ್ಟ್ರೀಯ ಖ್ಯಾತಿಯ ಜರ್ನಲ್ ನಲ್ಲಿ ಲೇಖನ ಪ್ರಕಟವಾಗಿರುವುದ ಈ ಸಾಧನೆಗೆ ವಿವಿ ಕುಲಾಧಿಪತಿ ಎಂ. ಬಿ. ಪಾಟೀಲ, ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಕುಲಪತಿ ಪ್ರೊ. ಆರ್. ಎಸ್. ಮುಧೋಳ, ಸಮಕುಲಪತಿ ಪ್ರೊ. ಅರುಣ ಇನಾಮದಾರ, ರಜಿಸ್ಟ್ರಾರ್ ಡಾ. ರಾಘವೇಂದ್ರ ವಿ. ಕುಲಕರ್ಣಿ ಹಾಗೂ ಪ್ರಾಚಾರ್ಯ ಪ್ರೊ. ಅರವಿಂದ ಪಾಟೀಲ, ಅಲೈಡ್ ಹೆಲ್ತ್ ಸಾಯಿನ್ಸ್ ಡೀನ್ ಡಾ. ಎಸ್. ವಿ. ಪಾಟೀಲ ಅಭಿನಂದನೆ ಸಲ್ಲಿಸಿದ್ದಾರೆ.
ಕ್ರೈಂ ಥ್ರಿಲ್ಲರ್ “ಕಲುಷ” ಟೀಸರ್ ಬಿಡುಗಡೆ ಇದೇ ಮಾರ್ಚ್ 23
ಕಲುಷ ಕನ್ನಡ ಚಲನಚಿತ್ರ
ಪಿಜಿ ವಿಭಾಗದಲ್ಲಿ ಸಂಶೋಧನಾ ವಿಷಯಕ್ಕೆ ಸಂಬಂಧಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮ
ಜಮಖಂಡಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಭ್ರಮ
ಸ್ವಚ್ಛತೆಯೇ ಆರೋಗ್ಯಕ್ಕೆ ಅಡಿಪಾಯ: ಸುನಿಲ್ ರಾಟೋಡ್
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಯಿತು
ಶಿಕ್ಷಕನಿಗೆ ಬಹುಮುಖದ ವ್ಯಕ್ತಿತ್ವ ಇರಬೇಕು
ಪ್ರಶಿಕ್ಷಣಾರ್ಥಿಗಳ ಕಾರ್ಯಗಾರ ಕಾರ್ಯಕ್ರಮ