by 1 on | 2024-10-01 19:29:52
Share: Facebook | Twitter | Whatsapp | Linkedin | Visits: 266
ವಿಜಯಪುರ 1. ಪ್ರಧಾನಮಂತ್ರಿ ಆವಾಸ ಯೋಜನೆ 2024-25 ಅನುದಾನ ಬಿಡುಗಡೆ, ಜಿ.ಪಿ.ಎಸ್ ಮಾಡಿ, ಫಲಾನುಭವಿಗಳು ಮನೆ ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿಕೊಡಲು ವಿಧಾನಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ತಿಳಿಸಿದ ಅವರು, ವಿಜಯಪುರ ಜಿಲ್ಲೆಯ 13 ತಾಲೂಕುಗಳ ಗ್ರಾಮ ಪಂಚಾಯಿತಿಗಳಲ್ಲಿ ಮನೆಗಳ ನಿರ್ಮಾಣಕ್ಕೆ ಸರಕಾರ ಎಸ್.ಸಿ ಫಲಾನುಭವಿಗಳಿಗೆ ರೂ. 43,750 ಮತ್ತು ಇತರೆ ಫಲಾನುಭವಿಗಳಿಗೆ ರೂ. 30,000 ಅನುದಾನವನ್ನು ಫಲಾನುಭವಿಗಳಿಗೆ ಖಾತೆಗಳಿಗೆ ನೇರವಾಗಿ ಜಮೆ ಮಾಡುತ್ತಿದೆ. ಆದ್ದರಿಂದ ಕೂಡಲೇ ವಸತಿರಹಿತರಿಗೆ ಅನುಕೂಲ ಮಾಡಿಕೊಡಲು ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿ.ಡಿ.ಓ) ಗಳಿಗೆ ನಿರ್ದೇಶನ ನೀಡುವಂತೆ ತಿಳಿಸಿದ್ದಾರೆ.
ಜಿಲ್ಲೆಯ ಆಲಮೇಲ ತಾಲೂಕಿನ 13 ಗ್ರಾ. ಪಂ ಗಳಲ್ಲಿ 511, ಬಬಲೇಶ್ವರ ತಾಲೂಕಿನ 16 ಗ್ರಾ. ಪಂ ಗಳಲ್ಲಿ 711, ಬಸವನ ಬಾಗೇವಾಡಿ ತಾಲೂಕಿನ 18 ಗ್ರಾ. ಪಂ ಗಳಲ್ಲಿ 1053, ಚಡಚಣ ತಾಲೂಕಿನ 13 ಗ್ರಾ. ಪಂ ಗಳಲ್ಲಿ 823, ದೇವರ ಹಿಪ್ಪರಗಿ ತಾಲೂಕಿನ 14 ಗ್ರಾ. ಪಂ ಗಳಲ್ಲಿ 840, ಇಂಡಿ ತಾಲೂಕಿನ 39 ಗ್ರಾ. ಪಂ ಗಳಲ್ಲಿ 1486, ಕೊಲ್ಹಾರ ತಾಲೂಕಿನ 10 ಗ್ರಾ. ಪಂ ಗಳಲ್ಲಿ 675, ಮುದ್ದೇಬಿಹಾಳ ತಾಲೂಕಿನ 22 ಗ್ರಾ. ಪಂ ಗಳಲ್ಲಿ 1307, ನಿಡಗುಂದಿ ತಾಲೂಕಿನ 11 ಗ್ರಾ. ಪಂ ಗಳಲ್ಲಿ 207, ಸಿಂದಗಿ ತಾಲೂಕಿನ 18 ಗ್ರಾ. ಪಂ ಗಳಲ್ಲಿ 457, ತಾಳಿಕೋಟಿ ತಾಲೂಕಿನ 14 ಗ್ರಾ. ಪಂ ಗಳಲ್ಲಿ 774, ತಿಕೋಟಾ ತಾಲೂಕಿನ 15 ಗ್ರಾ. ಪಂ ಗಳಲ್ಲಿ 771, ವಿಜಯಪುರ ತಾಲೂಕಿನ 17 ಗ್ರಾ. ಪಂ ಗಳಲ್ಲಿ 770 ಫಲಾನುಭವಿಗಳ ಖಾತೆಗೆ ನೇರವಾಗಿ ಯೋಜನೆಯ ಹಣ ಜಮೆ ಆಗುತ್ತಿದೆ.
ಗ್ರಾ. ಪಂ. ಅಧಿಕಾರಿಗಳು ಈ ನಿಟ್ಟಿನಲ್ಲಿ ಕೂಡಲೇ ಜಿ.ಪಿ.ಎಸ್ ಮಾಡಿಸಿ, ವಸತಿರಹಿತ ಫಲಾನುಭವಿಗಳು ಮನೆ ಕಟ್ಟಿಕೊಳ್ಳುವಂತೆ ಮಾಹಿತಿ ನೀಡಲು ಕ್ರಮ ಕೈಗೊಳ್ಳಬೇಕು ಅಲ್ಲದೇ, ಜಿ.ಪಿ.ಎಸ್ ಮಾಡಿದ ಪ್ರತಿಯನ್ನು ವಿಧಾನ ಪರಿಷತ್ ಶಾಸಕರ ಕಚೇರಿಗೆ ಸಲ್ಲಿಸುವಂತೆ ಸುನೀಲಗೌಡ ಬಿ. ಪಾಟೀಲ ಅವರು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಕ್ರೈಂ ಥ್ರಿಲ್ಲರ್ “ಕಲುಷ” ಟೀಸರ್ ಬಿಡುಗಡೆ ಇದೇ ಮಾರ್ಚ್ 23
ಕಲುಷ ಕನ್ನಡ ಚಲನಚಿತ್ರ
ಪಿಜಿ ವಿಭಾಗದಲ್ಲಿ ಸಂಶೋಧನಾ ವಿಷಯಕ್ಕೆ ಸಂಬಂಧಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮ
ಜಮಖಂಡಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಭ್ರಮ
ಸ್ವಚ್ಛತೆಯೇ ಆರೋಗ್ಯಕ್ಕೆ ಅಡಿಪಾಯ: ಸುನಿಲ್ ರಾಟೋಡ್
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಯಿತು
ಶಿಕ್ಷಕನಿಗೆ ಬಹುಮುಖದ ವ್ಯಕ್ತಿತ್ವ ಇರಬೇಕು
ಪ್ರಶಿಕ್ಷಣಾರ್ಥಿಗಳ ಕಾರ್ಯಗಾರ ಕಾರ್ಯಕ್ರಮ