by 1 on | 2025-02-24 10:36:51
Share: Facebook | Twitter | Whatsapp | Linkedin | Visits: 395
ಜಮಖಂಡಿಯ ಪ್ರತಿಷ್ಠಿತ ಬಿ ಎಲ್ ಡಿ ಸಂಸ್ಥೆಯ ಪದವಿ ಪೂರ್ವ ಕಾಲೇಜುಗಳಾದ ವಾಣಿಜ್ಯ ಬಿಎಚ್ಎಸ್ ಕಲೆ ಮತ್ತು ಟಿಜಿಪಿ ವಿಜ್ಞಾನ ಮಹಾವಿದ್ಯಾಲಯ ಜಮಖಂಡಿ ಹಾಗೂ ಸ್ವತಂತ್ರ ಪದವಿ ಪೂರ್ವ ಕಾಲೇಜು ಜಮಖಂಡಿ 2024 -25ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭ 22/2/2025 ರಂದು ದರ್ಬಾರ್ ಹಾಲಿನಲ್ಲಿ ಜರುಗಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ ಎಲ್ ಡಿ ಇ ಸಂಸ್ಥೆಯ ಪದವಿ ಪೂರ್ವ ವಿಭಾಗಗಳ ಆಡಳಿತ ಅಧಿಕಾರಿಗಳಾದ ಪ್ರೊ, ಬಿ ಆರ್ ಪಾಟೀಲ ವಹಿಸಿಕೊಂಡು ಜಮಖಂಡಿಯ ಪದವಿಪೂರ್ವ ಮಹಾವಿದ್ಯಾಲಯಗಳು ಒಳ್ಳೆಯ ಸಾಧನೆಯನ್ನ ಮಾಡುತ್ತಿದ್ದು ಇನ್ನು ಹೆಚ್ಚಿನ ಸಾಧನೆಗೆ ಸಂಸ್ಥೆ ನಿಮ್ಮ ಜೊತೆ ಯಾವತ್ತು ಇರುತ್ತದೆ ಎಂದು ಹೇಳಿದರು,
ಮುಖ್ಯ ಅತಿಥಿಗಳಾಗಿ ಪ್ರೊ ಎ ಎಚ್ ಬರಗಿ ಇತಿಹಾಸ ಉಪನ್ಯಾಸಕರು ಆರ್ ಎಂ ಜಿ ಪದವಿಪೂರ್ವ ಕಾಲೇಜ ಮುಧೋಳ ಹಾಗೂ ಜಿಲ್ಲಾ ಅಧ್ಯಕ್ಷರು ಪದವಿ ಪೂರ್ವ ನೌಕರರ ಸಂಘ ಬಾಗಲಕೋಟ, ಇವರು ಮಾತನಾಡುತ್ತಾ ವಿದ್ಯಾರ್ಥಿಗಳು ಶಿಕ್ಷಣದ ಸಾಧನೆಗಳೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವ ಕುರಿತಾಗಿ ಹೇಳಿದರು.
ಗೌರವಾನ್ವಿತ ಅತಿಥಿಗಳಾಗಿ ಶ್ರೀ ಮಧುಸೂದನ ಎ ಮಾಗಿ ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ಬೋಧಕೇತರ ನೌಕರರ ಸಂಘ (ರಿ )ಬೆಂಗಳೂರು, ಇವರು ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಾ ಜಮಖಂಡಿ ಶಿಕ್ಷಣ ಕ್ಷೇತ್ರದಲ್ಲಿ ಅತ್ಯಂತ ಮುಂದುವರೆದಿದ್ದು ಈ ನಗರವನ್ನು ಶೈಕ್ಷಣಿಕ ಜಿಲ್ಲೆ ಎಂದು ಘೋಷಿಸಬೇಕೆಂದು ಹೇಳಿದರು ಹಾಗೂ ಜಮಖಂಡಿ ಎಲ್ಲಿ ಮೆಡಿಕಲ್ ಕಾಲೇಜ್ ಪ್ರಾರಂಭದ ಕುರಿತಾಗಿ ಹೇಳಿದರು,
ಈ ಸಮಾರಂಭದಲ್ಲಿ ಗೌರವಾನ್ವಿತರಾಗಿ ಜಮಖಂಡಿಯ ಅಂಗ ಸಂಸ್ಥೆಗಳ ಆಡಳಿತ ಅಧಿಕಾರಿಗಳಾದ ಪ್ರೊ ಎಸ್ ಎಚ್ ಲಗಳಿ ಉಪಸ್ಥಿತರಿದ್ದು,
ಸಭೆಯ ಇನ್ನೋರ್ವ ಅತಿಥಿಗಳಾಗಿದ ಪ್ರೊ ಐ ಎಸ್ ಕಾಳಪ್ಪನವರ ಆಡಳಿತಾಧಿಕಾರಿಗಳು ಎಸ್ ಎಸ್ ಕಾಲೇಜು ಆವರಣ ವಿಜಯಪುರ ರವರು ವೇದಿಕೆಯನ್ನು ಅಲಂಕರಿಸಿ ಜಮಖಂಡಿಯ ಕ್ರೀಡೆಯ ಇತಿಹಾಸ ಮತ್ತು ಕ್ರೀಡೆಯ ಮಹತ್ವವನ್ನು ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು,
ಇದರೊಂದಿಗೆ ಕಾಲೇಜಿನ ಪ್ರಾಚಾರ್ಯರಾದ ಪ್ರೊ, ಮಾಂತೇಶ ಎಂ ಪುಟ್ಟಣ್ಣವರ ಸಭೆಯ ಪ್ರಾಸ್ತಾವಿಕ ನುಡಿಗಳನ್ನು ಆಡಿದರು ಮತ್ತು ಪ್ರೊ, ಬಿ ಐ ಕರ್ಲಟ್ಟಿ ಸಭೆಗೆ ಆಹ್ವಾನಿತರನ್ನು ಸ್ವಾಗತಿಸಿದರು, ಪ್ರೊ ಕೆ ಎಸ್ ಮಠಪತಿ ಅತಿಥಿಗಳನ್ನು ಪರಿಚಯಿಸಿದರು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಕಾರ್ಯಾಧ್ಯಕ್ಷರಾದ ಪ್ರೋ ಎಸ್ ಎಂ ವಾಂಗಿ ಪ್ರೊ ಎ ಎಲ್ ಕಡಕೋಳ ವೇದಿಕೆ ಮೇಲೆ ಉಪಸ್ಥಿತರಿದ್ದರು,
ಈ ಸಮಾರಂಭದಲ್ಲಿ ಮಹಾವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳೊಂದಿಗೆ ಉಪನ್ಯಾಸಕ ಪಾಲ್ಗೊಂಡಿದ್ದರು
ಕ್ರೈಂ ಥ್ರಿಲ್ಲರ್ “ಕಲುಷ” ಟೀಸರ್ ಬಿಡುಗಡೆ ಇದೇ ಮಾರ್ಚ್ 23
ಕಲುಷ ಕನ್ನಡ ಚಲನಚಿತ್ರ
ಪಿಜಿ ವಿಭಾಗದಲ್ಲಿ ಸಂಶೋಧನಾ ವಿಷಯಕ್ಕೆ ಸಂಬಂಧಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮ
ಜಮಖಂಡಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಭ್ರಮ
ಸ್ವಚ್ಛತೆಯೇ ಆರೋಗ್ಯಕ್ಕೆ ಅಡಿಪಾಯ: ಸುನಿಲ್ ರಾಟೋಡ್
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಯಿತು
ಶಿಕ್ಷಕನಿಗೆ ಬಹುಮುಖದ ವ್ಯಕ್ತಿತ್ವ ಇರಬೇಕು
ಪ್ರಶಿಕ್ಷಣಾರ್ಥಿಗಳ ಕಾರ್ಯಗಾರ ಕಾರ್ಯಕ್ರಮ