ಕೈಯೊಡ್ಡಿ ಪ್ರಸಾದವ ಕೊಂಡಡೆ ಕರ್ಮಧಾರಿ. ಶೇಷಪ್ರಸಾದವನಾಯ್ದು ಕೊಂಡಡೆ ವರ್ಮಹೀನ. ಉಕ್ಕುಳಪ್ರಸಾದವ ಕೊಂಡಡೆ ಸತ್ಕ್ರೀಗೆ ಸಲ್ಲ. ಇಂತಿವನರಿದು ಸಜ್ಜನಪ್ರಸಾದವ ನಿರ್ಧರದಿಂದ ಕೊಂಬ ಮಹಾಪ್ರಸಾದಿಯ ಕಾರುಣ್ಯವೆನಗೆಂದಿಗೆ ಸಾಧ್ಯವಪ್ಪುದು ? ಕುಂಭೇಶ್ವರಲಿಂಗದಲ್ಲಿ ಜಗನ್ನಾಥವವರಿದವಂಗಲ್ಲದೆ ಸಾಧ್ಯವಲ್ಲ
ಉದ್ಯೋಗ Employee

ನೌಕರರ ಗ್ರಾಚ್ಯುಯಿಟಿಗೆ ವಿಮೆ ಕಡ್ಡಾಯ ಕೇಂದ್ರದ ತಿದ್ದುಪಡಿಯ 25 ವರ್ಷಗಳ ನಂತರ ರಾಜ್ಯದಲ್ಲಿ ಹೊಸ ನಿಯಮ ಜಾರಿ

by 1 on | 2024-01-15 08:40:05

Share: Facebook | Twitter | Whatsapp | Linkedin | Visits: 358


ನೌಕರರ ಗ್ರಾಚ್ಯುಯಿಟಿಗೆ ವಿಮೆ ಕಡ್ಡಾಯ ಕೇಂದ್ರದ ತಿದ್ದುಪಡಿಯ 25 ವರ್ಷಗಳ ನಂತರ ರಾಜ್ಯದಲ್ಲಿ ಹೊಸ ನಿಯಮ ಜಾರಿ

ಖಾಸಗಿ ಸಂಸ್ಥೆಗಳ ಉದ್ಯೋಗಿಗಳ ಗ್ರಾಚ್ಯುಯಿಟಿ ಮೊತ್ತಕ್ಕೆ ವಿಮೆಯ ರಕ್ಷಣೆಯನ್ನು ಒದಗಿಸಲು ಕೇಂದ್ರ ಸರ್ಕಾರವು ಗ್ರಾಚ್ಯುಯಿಟಿ ಕಾಯ್ದೆಗೆ ತಂದಿರುವ ತಿದ್ದುಪಡಿಯು 25 ವರ್ಷಗಳ ಬಳಿಕ ರಾಜ್ಯದಲ್ಲಿ ಅನುಷ್ಠಾನಕ್ಕೆ ಬಂದಿದೆ.


‘ಕರ್ನಾಟಕ ಕಡ್ಡಾಯ ಗ್ರಾಚ್ಯುಯಿಟಿ ವಿಮಾ ನಿಯಮಗಳು–2024’ ಅನ್ನು ಜಾರಿಗೊಳಿಸಿ ಕಾರ್ಮಿಕ ಇಲಾಖೆಯು ಬುಧವಾರ ರಾಜ್ಯಪತ್ರದ ಮೂಲಕ ಅಧಿಸೂಚನೆ ಹೊರಡಿಸಿದೆ. ಇದರಿಂದ ಖಾಸಗಿ ಉದ್ದಿಮೆಗಳು/ ಉದ್ಯೋಗದಾತ ಸಂಸ್ಥೆಗಳು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ದರೂ ನೌಕರರ ಗ್ರಾಚ್ಯುಯಿಟಿಗೆ ರಕ್ಷಣೆ ಸಿಗಲಿದೆ.


ಉದ್ದಿಮೆಗಳು, ಇತರ ಉದ್ಯೋಗ ದಾತ ಸಂಸ್ಥೆಗಳು ಆರ್ಥಿಕ ಬಿಕ್ಕಟ್ಟು ಸೇರಿ ದಂತೆ ವಿವಿಧ ಕಾರಣಗಳಿಂದ ಬಾಗಿಲು ಮುಚ್ಚಿದರೆ ನೌಕರರ ಗ್ರಾಚ್ಯುಯಿಟಿ ಮೊತ್ತಕ್ಕೆ ರಕ್ಷಣೆ ಸಿಗುತ್ತಿರಲಿಲ್ಲ. ಬಹುತೇಕ ಸಂದರ್ಭಗಳಲ್ಲಿ ನೌಕರರು ಗ್ರಾಚ್ಯುಯಿಟಿಯಿಂದ ವಂಚಿತರಾಗುತ್ತಿದ್ದರು.


ಈ ರೀತಿಯ ಸಂಕಷ್ಟದಿಂದ ನೌಕರರನ್ನು ರಕ್ಷಿಸಲು ‘ಗ್ರಾಚ್ಯುಯಿಟಿ ಪಾವತಿ ಕಾಯ್ದೆ–1972’ಕ್ಕೆ 1987ರಲ್ಲಿ ತಿದ್ದುಪಡಿ ತಂದಿದ್ದ ಕೇಂದ್ರ ಸರ್ಕಾರ, ಗ್ರಾಚ್ಯುಯಿಟಿ ಮೊತ್ತಕ್ಕೆ ವಿಮಾ ರಕ್ಷಣೆ ಒದಗಿಸುವುದನ್ನು ಕಡ್ಡಾಯ ಗೊಳಿಸಿತ್ತು. ಆದರೆ, ಈ ತಿದ್ದುಪಡಿ ಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ನಿಯಮಗಳನ್ನು ರೂಪಿಸಿರಲಿಲ್ಲ.


60 ದಿನಗಳೊಳಗೆ ವಿಮೆ ಕಡ್ಡಾಯ: ಈಗ ನಿಯಮವು ಜಾರಿಯಾದ ದಿನ ದಿಂದ ಎರಡು ತಿಂಗಳೊಳಗೆ ಎಲ್ಲ ಉದ್ಯೋಗದಾತರು ತಮ್ಮ ನೌಕರರ ಗ್ರಾಚ್ಯುಯಿಟಿ ಮೊತ್ತಕ್ಕೆ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಅಥವಾ ಅದೇ ರೀತಿಯ ಕಾನೂನುಬದ್ಧ ವಿಮಾ ಕಂಪನಿಗಳಿಂದ ಪಾಲಿಸಿ ಖರೀದಿಸುವುದು ಕಡ್ಡಾಯ. ಆ ಬಳಿಕ ತಮ್ಮ ಎಲ್ಲ ನೌಕರರ ಹೆಸರಿನೊಂದಿಗೆ ವಿಮಾ ಕಂತು ಪಾವತಿಸಬೇಕು ಎಂಬ ಅಂಶ ಕಡ್ಡಾಯ ಗ್ರಾಚ್ಯುಯಿಟಿ ವಿಮಾ ನಿಯಮಗಳಲ್ಲಿದೆ.


ಎಲ್ಲ ಉದ್ಯೋಗದಾತರು ಗ್ರಾಚ್ಯುಯಿಟಿ ವಿವರ ಮತ್ತು ವಿಮಾ ಪಾಲಿಸಿಯ ವಿವರಗಳನ್ನು ಆಯಾ ಪ್ರದೇಶದ ನಿಯಂತ್ರಣ ಪ್ರಾಧಿಕಾರ ಗಳಲ್ಲಿ ನೋಂದಣಿ ಮಾಡಿಸಬೇಕು. ವಿಮಾ ಕಂಪನಿಯಿಂದ ನೌಕರರಿಗೆ ಗ್ರಾಚ್ಯುಯಿಟಿ ಮೊತ್ತ ಪಾವತಿಗೆ ಕ್ರಮ ಕೈಗೊಳ್ಳುವ ಅಧಿಕಾರ ವನ್ನೂ ನಿಯಂತ್ರಣ ಪ್ರಾಧಿಕಾರಕ್ಕೆ ನೀಡಲಾಗಿದೆ.


*‘ನೌಕರರ ರಕ್ಷಣೆಗಾಗಿ ನಿಯಮ’*


‘ಮುಚ್ಚಿ ಹೋದ ಅಥವಾ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ ಸಂಸ್ಥೆಗಳ ನೌಕರರಿಗೆ ಗ್ರಾಚ್ಯುಯಿಟಿ ಪಾವತಿಸದ ನೂರಾರು ಪ್ರಕರಣಗಳು ಇಲಾಖೆಯ ಮುಂದಿವೆ. ಆ ಬಗ್ಗೆ ಪರಿಶೀಲಿಸಿದಾಗ ಗ್ರಾಚ್ಯುಯಿಟಿಗೆ ವಿಮೆ ಕಡ್ಡಾಯ ಗೊಳಿಸುವ ನಿಯಮ ರೂಪಿಸಿಲ್ಲ ಎಂಬುದು ಗಮನಕ್ಕೆ ಬಂತು. ತಕ್ಷಣವೇ ಹೊಸ ನಿಯಮ ರೂಪಿಸಿ, ಜಾರಿಗೆ ತಂದಿದ್ದೇವೆ’ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ತಿಳಿಸಿದರು.


‘2018–19ರಲ್ಲಿ ಈ ನಿಯಮ ರೂಪಿಸುವ ಪ್ರಯತ್ನ ನಡೆದಿತ್ತು. ಬಳಿಕ ಅದು ಸ್ಥಗಿತಗೊಂಡಿತ್ತು. ಈಗ ಖಾಸಗಿ ವಲಯದ ನೌಕರರ ಗ್ರಾಚ್ಯುಯಿಟಿ ಮೊತ್ತಕ್ಕೆ ಭದ್ರತೆ ಒದಗಿಸಿ, ಅವರಿಗೆ ರಕ್ಷಣೆ ನೀಡುವ ಉದ್ದೇಶದಿಂದ ಹೊಸ ನಿಯಮಗಳನ್ನು ಅನುಷ್ಠಾನಕ್ಕೆ ತರಲಾಗಿದೆ’ ಎಂದರು.


500 ಅಥವಾ ಅದಕ್ಕಿಂತ ಹೆಚ್ಚಿನ ನೌಕರರು ಇರುವ ಸಂಸ್ಥೆಗಳು ಈಗಾಗಲೇ ಗ್ರ್ಯಾಚ್ಯುಯಿಟಿ ನಿಧಿಯನ್ನು ಹೊಂದಿದ್ದಲ್ಲಿ, ಅದನ್ನು ಮುಂದುವರಿಸಲು ಅವಕಾಶವಿದೆ. ಆದರೆ, ಅಂತಹ ಸಂಸ್ಥೆಗಳು ಉದ್ಯೋಗದಾತರು ಹಾಗೂ ನೌಕರರ ಪ್ರತಿನಿಧಿಗಳನ್ನು ಒಳಗೊಂಡ ಗ್ರಾಚ್ಯುಯಿಟಿ ಟ್ರಸ್ಟ್‌ ರಚಿಸುವುದು ಕಡ್ಡಾಯ. ವಿಮಾ ಕಂಪನಿಗಳ ಸಹಭಾಗಿತ್ವದಲ್ಲೂ ಗ್ರಾಚ್ಯುಯಿಟಿ ನಿಧಿಯನ್ನು ನಿರ್ವಹಣೆ ಮಾಡಬಹುದು.


ಗ್ರಾಚ್ಯುಯಿಟಿ ನಿಧಿ ಮತ್ತು ಟ್ರಸ್ಟ್‌ ಹೊಂದಿರುವ ಸಂಸ್ಥೆಗಳು ನೌಕರರ ಗ್ರಾಚ್ಯುಯಿಟಿ ಪಾವತಿಗೆ ಮಾತ್ರ ಅದರಲ್ಲಿನ ಹಣವನ್ನು ಬಳಕೆ ಮಾಡಲು ಅವಕಾಶ ಇರುತ್ತದೆ. ‘ರಾಜ್ಯದಲ್ಲಿ 60 ಲಕ್ಷದಿಂದ 70 ಲಕ್ಷ ನೌಕರರಿಗೆ ಹೊಸ ನಿಯಮದಿಂದ ಅನುಕೂಲ ಆಗಲಿದೆ. ಗ್ರಾಚ್ಯುಯಿಟಿ ಮೊತ್ತಕ್ಕೆ ಇನ್ನು ಸಂಪೂರ್ಣ ಭದ್ರತೆ ದೊರಕಲಿದೆ’ ಎಂದು ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಕೆ. ಮೊಹಮದ್ ಮೊಹಿಸಿನ್‌ ತಿಳಿಸಿದರು.

Search
Popular News
Most Popular
ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಅಲೆನ್ ಕರಿಯರ್ ಅಕಾಡೆಮಿ ಮಧ್ಯೆ ಶೈಕ್ಷಣಿಕ ಓರಿಯಂಟೇಶನ್ ಕಾರ್ಯಕ್ರಮದ ಕ್ಷಣಗಳು.
Vachana Pitamaha P. G. Halakatti College of Engineering
Nursing College Jamkhandi
BLDEA Nursing College Vijayapura
Vachana Pitamaha P. G. Halakatti College of Engineering Vijayapura
ಡಾ ಫ ಗು ಹಳಕಟ್ಟಿ, ಬಂಥನಾಳ ಶಿವಯೋಗಿಗಳು, ಡಾ ಬಿ ಎಂ ಪಾಟೀಲ್ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆ ಕಾರ್ಯಕ್ರಮ

Leave a Comment